ನವದೆಹಲಿ: ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ಒಂದು ಚೀಲ ಡಿಎಪಿ ಗೊಬ್ಬರದಈಗ 1200 ರೂ.ಗಳ ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಹೆಚ್ಚಿಸಲು ನಿರ್ಧರಿಸಲಾಯಿತು. ಇದರೊಂದಿಗೆ ರೈತರಿಗೆ 2400 ರೂ.ಗಳಿಗೆ ಲಭ್ಯವಾಗುತ್ತಿದ್ದ ಒಂದು ಚೀಲ ಡಿಎಪಿ ಗೊಬ್ಬರ ಇನ್ಮುಂದೆ 1200 ರೂಗಳಿಗೆ ಲಭ್ಯವಾಗಲಿದೆ.
ಆದ್ರೆ, ಈ ನಿರ್ಧಾರದ ನಂತರ, ಕೇಂದ್ರ ಸರ್ಕಾರವು ಸಬ್ಸಿಡಿಗಾಗಿ ಹೆಚ್ಚುವರಿ 14,775 ಕೋಟಿ ರೂ. ಮೀಸಲಿಟ್ಟಿದೆ. ಅದ್ರಂತೆ, ಇಲ್ಲಿಯವರೆಗೆ ಒಂದು ಚೀಲ ಡಿಎಪಿ ಗೊಬ್ಬರಕ್ಕೆ 500 ರೂ.ಗಳ ರಿಯಾಯಿತಿಗೆ ಮಾತ್ರ ಲಭ್ಯವಿತ್ತು.
ರಸಗೊಬ್ಬರ ಬೆಲೆಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಫಾಸ್ಪರಿಕ್ ಆಮ್ಲ, ಅಮೋನಿಯ ಬೆಲೆಗಳು ಹೆಚ್ಚುತ್ತಿರುವ ಕಾರಣ ರಸಗೊಬ್ಬರಗಳ ಬೆಲೆಯನ್ನ ಹೆಚ್ಚಿಸುವ ಬಗ್ಗೆ ಚರ್ಚಿಸಿದರು. ಅಂತರರಾಷ್ಟ್ರೀಯ ಬೆಲೆಗಳು ಹೆಚ್ಚಾಗಿದ್ದರೂ, ರೈತರು ಹಳೆಯ ದರದಲ್ಲಿ ಗೊಬ್ಬರ ಪಡೆಯಬೇಕು ಎಂದರು. ಇದರ ನಂತರ ಡಿಎಪಿ ಗೊಬ್ಬರದ ಸಬ್ಸಿಡಿಯನ್ನ ಪ್ರತಿ ಚೀಲಕ್ಕೆ 500 ರೂ.ಗಳಿಂದ 1200 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಯಿತು. ಬೇರೆ ರೀತಿಯಲ್ಲಿ ಹೇಳುವುದಾದ್ರೆ, ಈಗ ರೈತರಿಗೆ ಡಿಎಪಿ ರಸಗೊಬ್ಬರವನ್ನ ಕೇವಲ 1200 ರೂ. ನೀಡಲಿದೆ.ಒಂದು ಚೀಲ ಡಿಎಪಿ ಗೊಬ್ಬರದ ನಿಜವಾದ ಬೆಲೆ ಕಳೆದ ವರ್ಷ 1,700 ರೂ. ಇದರಲ್ಲಿ ಕೇಂದ್ರ ಸರ್ಕಾರ ಒಂದು ಚೀಲಕ್ಕೆ 500 ರೂಪಾಯಿ ಸಬ್ಸಿಡಿ ನೀಡುತ್ತಿತ್ತು. ಆದ್ದರಿಂದ ಕಂಪನಿಗಳು ರೈತರಿಗೆ ರಸಗೊಬ್ಬರವನ್ನ ಪ್ರತಿ ಚೀಲಕ್ಕೆ 1200 ರೂ. ತೆಗೆದುಕೊಳ್ಳುತ್ತಿದ್ವು. ಇತ್ತೀಚೆಗೆ, ಡಿಎಪಿಯಲ್ಲಿ ಬಳಸಲಾಗುವ ಅಮೋನಿಯಾದ ಫಾಸ್ಪರಿಕ್ ಆಮ್ಲದ ಅಂತರರಾಷ್ಟ್ರೀಯ ಬೆಲೆಗಳು ಶೇಕಡಾ 60 ರಿಂದ 70 ರಷ್ಟು ಏರಿಕೆಯಾಗಿದೆ. ಸರ್ಕಾರದ ಪ್ರಕಾರ, ಡಿಎಪಿ ಚೀಲದ ನಿಜವಾದ ಬೆಲೆ ಈಗ 2400 ರೂ., ಇದನ್ನು ರಸಗೊಬ್ಬರ ಕಂಪನಿಗಳು 500 ರೂ.ಗಳ ಸಬ್ಸಿಡಿಯಲ್ಲಿ ಮಾರಾಟ ಮಾಡಿ 1900 ರೂ.ಗೆ ಮಾರಾಟ ಮಾಡುತ್ತವೆ. ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬೆಲೆ ಏರಿಕೆಯ ಪರಿಣಾಮದಿಂದ ರೈತರು ತೊಂದರೆ ಅನುಭವಿಸದಂತಿರಲು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.