HEALTH TIPS

ಪ್ರಥಮ ವಿಘ್ನ: ಸುಲಭವಲ್ಲ ಅಂದಿನಂತೆ: ಕೆ.ಕೆ. ರೇಮಾ ಪ್ರಮಾಣವಚನ ಸ್ವೀಕರಿಸಿದಾಗ ಮಾತ್ರ ಕೈರಳಿ ಟಿವಿಗೆ ತಾಂತ್ರಿಕ ತೊಂದರೆÉ! ಶಾಸಕಿಯ ಪ್ರಮಾಣವಚನ ಪ್ರಸಾರ ತಡೆಹಿಡಿದ ಪಕ್ಷದ ಚಾನೆಲ್!

             ತಿರುವನಂತಪುರ: ತಿರುವನಂತಪುರದಲ್ಲಿ ಇಂದು ಆರಂಭಗೊಂಡ 15ನೇ ವಿಧಾನಸಭಾ ಅಧಿವೇಶನದ ಮೊದಲ ದಿನವೇ ವಿಶಿಷ್ಟ ವಿದ್ಯಮಾನವೊಂದಕ್ಕೆ ಸುದ್ದಿ ಮಾಧ್ಯಮವೊಂದರ ಮೂಲಕ ಚಾಲನೆ ದೊರಕಿದ್ದು, ಪಿಣರಾಯಿ ವಿಜಯನ್ ಅವರ ಈ ಬಾರಿಯ ಮಂತ್ರಿಮಂಡಲದ ಆಡಳಿತ ಅಷ್ಟು ಸುಲಭದಲ್ಲಿ ಸಾಗದೆಂಬ ಸೂಚನೆ ನೀಡಿದಂತಿದೆ!

         ಶಾಸಕಿ ಕೆ.ಕೆ.ರೆಮಾ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವಂತೆ ಕೈರಳಿ ನ್ಸೂಸ್ ಹಠಾತ್ತನೆ ಅವರ ದೃಶ್ಯಗಳನ್ನು ಮರೆಮಾಚಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಾರ್ತಾ ಮತ್ತು ಮಾಹಿತಿ ಇಲಾಖೆ(ಪಿ.ಆರ್.ಡಿ.) ಒದಗಿಸಿದ ವೀಡಿಯೊ ಔಟ್ ಪುಟ್ ನಲ್ಲಿನ ತಾಂತ್ರಿಕ ಸಮಸ್ಯೆಯನ್ನು ಉಲ್ಲೇಖಿಸಿ, ಪ್ರಮಾಣವಚನದ ಸಮಯದಲ್ಲಿ ಸಿಪಿಎಂ ಪಕ್ಷದ ಮುಖವಾಣಿಯಾದ (ಪಕ್ಷದ ಚಾನೆಲ್) ರೆಮಾ ಅವರ ಪ್ರಮಾಣವಚನವನ್ನು ಬೇಕೆಂದೇ ಪ್ರಸಾರಗೊಳಿಸಿಲ್ಲ, ಆದರೆ ಇತರ ಚಾನೆಲ್ ಗಳು ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ರೆಮಾ ಅವರ ಪ್ರಮಾಣ ವಚನವನ್ನು ಪ್ರಸಾರ ಮಾಡಿದ್ದವು ಎಂದು ಜಾಲತಾಣಗಳು ನಿರಂತರವಾಗಿ ಕುಟುಕುತ್ತಿವೆ. 

        ಶಾಸಕರ ಪೈಕಿ   95 ನೇ ವ್ಯಕ್ತಿಯಾಗಿ ರಮೇಶ್ ಚೆನ್ನಿತ್ತಲ ಪ್ರಮಾಣವಚನ ಸ್ವೀಕರಿಸುವವರೆಗೂ ವಿರಾಮವಿಲ್ಲದೆ ಸುದ್ದಿ ಪ್ರಸಾರ ಮಾಡುತ್ತಿದ್ದ ಕೈರಳಿ ನ್ಯೂಸ್, ಪಿಆರ್‍ಡಿ ಒದಗಿಸಿದ ಫೂಟೇಜ್‍ನಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ರೆಮಾ ಅವರ ಅವತರಣಿಕೆ ಆರಂಭಗೊಳ್ಳುತ್ತಿರುವಂತೆ ತಕ್ಷಣ ದೃಶ್ಯಗಳನ್ನು ಮರೆಮಾಚಿರುವರು.  ಆದರೆ ಉಳಿದ ಎಲ್ಲಾ ಚಾನೆಲ್‍ಗಳು ಒಂದೇ ಪಿಆರ್‍ಡಿಯನ್ನು ಬಳಸಿ ನೇರ ಪ್ರಸಾರ ಮಾಡುತ್ತಿದ್ದವು ಎಂಬುದು ಗಮನಾರ್ಹ.

              ವೀಡಿಯೊ ಪೂಟ್ ಪುಟ್ ಯಾವುದೇ ರೀತಿಯಲ್ಲಿ ದೋಷಯುಕ್ತವಾಗಿದ್ದರೆ, ಅದು ಎಲ್ಲಾ ಚಾನಲ್‍ಗಳಿಗೆ ಅನ್ವಯಿಸಬೇಕಿತ್ತು. ಆದರೆ ಕೈರಳಿ ಮಾತ್ರ ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದು ಹೇಗೆ ಎಂಬುದು ಪ್ರಶ್ನೆ.

         ರಮೇಶ್ ಚೆನ್ನಿತ್ತಲರ ಬಳಿಕ ತೊಟ್ಟತಿಲ್ ರವೀಂದ್ರನ್ ಮತ್ತು ನಂತರ ಕೆ.ಕೆ.ರೆಮಾ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ, ಉದ್ದೇಶಪೂರ್ವಕವಾಗಿ ರೆಮಾ ಅವರ ಪ್ರಮಾಣವಚನ ಪ್ರಸಾರವನ್ನು ತಡೆಹಿಡಿದಿರಬೇಕು ಎಂಬ ಪ್ರಚಾರ ಸಾಮಾಜಿಕ ಮಾಧ್ಯಮದಲ್ಲಿ ಹರಡಿದೆ.

               ಇದಕ್ಕೂ ಮೊದಲು ಕೆ.ಕೆ.ರೆಮಾ ಅವರು ಟಿ.ಪಿ.ಚಂದ್ರಶೇಖರನ್ ಅವರ ಬ್ಯಾಡ್ಜ್ ನ್ನು ಸೀರೆಯಲ್ಲಿ ಧರಿಸಿ ಸದನಕ್ಕೆ ಆಗಮಿಸಿದರು. ಟಿ.ಪಿ ಎತ್ತಿದ  ಧ್ವನಿಯೇ ತನ್ನದೆಂಬುದನ್ನು ರೆಮಾ ಈ ಮೂಲಕ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದೂ ವಿಶೇಷವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries