HEALTH TIPS

ಆoಟಿ ಕೋವಿಡ್​ ಡ್ರಗ್​ ರೂಪಿಸಿದ ಡಿಆರ್​ಡಿಒ ! ತುರ್ತು ಬಳಕೆಗೆ ಅನುಮೋದನೆ

 ನವದೆಹಲಿ : ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸಿರುವ ಭಾರತೀಯರಿಗೆ ಒಂದು ಆಶಾ ಕಿರಣ ಕಂಡುಬಂದಿದೆ. ಕರೊನಾ ರೋಗಿಗಳ ಚೇತರಿಕೆಗೆ ಸಹಾಯ ಮಾಡುವ ಆಯಂಟಿ ಕೋವಿಡ್​ ಡ್ರಗ್ ಒಂದರ ತುರ್ತು ಬಳಕೆಗೆ ಭಾರತದ ಡ್ರಗ್​ ಕಂಟ್ರೋಲರ್​ ಜನರಲ್ ಅನುಮೋದನೆ ನೀಡಿದ್ದಾರೆ. ಈ ಔಷಧವನ್ನು ಡಿಫೆನ್ಸ್​ ರಿಸರ್ಚ್​ ಅಂಡ್ ಡೆವಲಪ್​ಮೆಂಟ್​ ಆರ್ಗನೈಸೇಷನ್(ಡಿಆರ್​ಡಿಒ) ಮತ್ತು ಹೈದರಾಬಾದ್​ನ ಡಾ.ರೆಡ್ಡೀಸ್ ಲ್ಯಾಬರೇಟರೀಸ್​ ಜಂಟಿಯಾಗಿ ರೂಪಿಸಿವೆ.


       '2-ಡಿಆಕ್ಸಿ-ಡಿ-ಗ್ಲೂಕೋಸ್' ​(2ಡಿಜಿ) ಡ್ರಗ್​ನ ಚಿಕಿತ್ಸೀಯ ಮಾದರಿಯಾಗಿರುವ ಈ ಔಷಧಿಯ ಕ್ಲಿನಿಕಲ್​ ಟ್ರಯಲ್​​ಗಳ ಸಕಾರಾತ್ಮಕ ಫಲಿತಾಂಶಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಗಿದೆ. ಸಾಚೆಟ್​ನಲ್ಲಿ ಪೌಡರ್​ ರೂಪದಲ್ಲಿ ಬರುವ ಈ ಆಯಂಟಿ ಕೋವಿಡ್​ ಔಷಧಿಯನ್ನು ರೋಗಿಗಳು ನೀರಿನಲ್ಲಿ ಬೆರೆಸಿ ನುಂಗಬಹುದಾಗಿದೆ ಎನ್ನಲಾಗಿದೆ.

        ಈ ಆಯಂಟಿ ಕೋವಿಡ್​ ಡ್ರಗ್​ನಲ್ಲಿರುವ ಒಂದು ಮಾಲಿಕ್ಯೂಲ್ ಆಸ್ಪತ್ರೆಗೆ ದಾಖಲಾಗಿರುವ ಕರೊನಾ ರೋಗಿಗಳ ಶೀಘ್ರ ಚೇತರಿಕೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಚಿಕಿತ್ಸಕ ಆಕ್ಸಿಜನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್​ ಟ್ರಯಲ್​ ಫಲಿತಾಂಶಗಳು ತಿಳಿಸಿವೆ.ಈ ಔಷಧಿಯನ್ನು ನೀಡಲಾದ ಹೆಚ್ಚು ಜನ ರೋಗಿಗಳಿಗೆ ಆರ್​ಟಿಪಿಸಿಆರ್​ ಟೆಸ್ಟ್​ಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿದೆ.

         ಮೇ ಮತ್ತು ಅಕ್ಟೋಬರ್​​ಗಳಲ್ಲಿ 110 ರೋಗಿಗಳ ಮೇಲೆ ಎರಡನೇ ಸುತ್ತಿನ ಟ್ರಯಲ್​ಗಳನ್ನು ನಡೆಸಿದ್ದು,ಕೋವಿಡ್ ರೋಗಿಗಳಿಗೆ ನೀಡಲು ಸುರಕ್ಷಿತವಾಗಿದೆ ಮತ್ತು ಅವರ ಚೇತರಿಕೆಯಲ್ಲಿ ಮಹತ್ವದ ಕೊಡುಗೆ ನೀಡುತ್ತದೆ ಎಂಬುದು ತಿಳದುಬಂತು.ನಂತರ ಆರು ಆಸ್ಪತ್ರೆಗಳಲ್ಲಿ ಮೂರನೇ ಸುತ್ತಿನ ಟ್ರಯಲ್​​ ನಡೆಸಲಾಯಿತು ಮತ್ತು ದೇಶದ ವಿವಿಧೆಡೆಯ 11 ಆಸ್ಪತ್ರೆಗಳಲ್ಲಿ ಡೋಸ್​ ರೇಂಜಿಂಗ್​ ನಡೆಸಲಾಯಿತು ಎಂದು ತಿಳಿದುಬಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries