ನವದೆಹಲಿ: ಜುಲೈ ಅಥವಾ ಆಗಸ್ಟ್ ವೇಳೆಗೆ ನಿತ್ಯ 1 ಕೋಟಿ ಜನರಿಗೆ ಲಸಿಕೆ ಹಾಕುವಷ್ಟು ಪೂರೈಕೆ ಇರಲಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ಕೋವಿಡ್ ಪಾಸಿಟಿವ್ ದರ ಒಂದು ವಾರದಲ್ಲಿ ಶೇಕಡಾ 5ಕ್ಕಿಂತಲೂ ಕಡಿಮೆ ಇರಬೇಕು ಎಂದು ಸರ್ಕಾರ ತಿಳಿಸಿದೆ.
ಶೇಕಡಾ 70 ರಷ್ಟು ದುರ್ಬಲ ಜನರಿಗೆ ಲಸಿಕೆ ಹಾಕಬೇಕು ಮತ್ತು ಸಾಮೂದಾಯಿಕ ಹೊಣೆಗಾರಿಕೆಯೊಂದಿಗೆ ಕೋವಿಡ್ ನಿಯಮಗಳು ಅನುಷ್ಠಾನಗೊಳ್ಳಬೇಕು ಎಂದು ಸರ್ಕಾರ ಹೇಳಿದೆ.
344 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತಲೂ ಕಡಿಮೆಯಿದೆ. 30 ರಾಜ್ಯಗಳಲ್ಲಿ ಕಳೆದ ವಾರದಿಂದಲೂ ಕೋವಿಡ್-19 ಸಕ್ರಿಯ ಪ್ರಕರಣಗಳ ಕುಸಿತ ವರದಿಯಾಗಿದೆ. ಗರಿಷ್ಠ ಪ್ರಕರಣಗಳು ದಾಖಲಾಗಿದ್ದ ಮೇ 7 ರಿಂದಲೂ ಬಹುತೇಕವಾಗಿ ಶೇಕಡಾ 69 ರಷ್ಟು ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.