ತಿರುವನಂತಪುರ: ವಿದ್ಯಾರ್ಥಿಗಳ ಆನ್‍ಲೈನ್ ಕಲಿಕಾ ಸೌಲಭ್ಯಗಳನ್ನು ಸುಧಾರಿಸಲು ಬಜೆಟ್‍ನಲ್ಲಿ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ವಿದ್ಯಾರ್ಥಿಗಳಿಗೆ 2 ಲಕ್ಷ ಲ್ಯಾಪ್‍ಟಾಪ್‍ಗಳನ್ನು ಒದಗಿಸುವ ಕಾರ್ಯಕ್ರಮವನ್ನು ಸಮಯಕ್ಕೆ ಅನುಗುಣವಾಗಿ ಜಾರಿಗೆ ತರಲಾಗುವುದು.
ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ನಿಭಾಯಿಸಲು ಯೋಜನೆ, ಚಿಂತನೆಗಳನ್ನು ಉನ್ನತೀಕರಿಸಲಾಗುವುದು. ಡಿಜಿಟಲ್ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ರಾಜ್ಯ ಹಣಕಾಸು ಸಚಿವ ಬಾಲಗೋಪಾಲ್ ಬಜೆಟ್ ಮಂಡನೆ ವೇಳೆ ಹೇಳಿದರು.
ಸಾರ್ವಜನಿಕ ಶಿಕ್ಷಣದ ಆನ್‍ಲೈನ್ ಕಲಿಕಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವಿದ್ಯಾರ್ಥಿಗಳಿಗಾಗಿ ಸಮುದಾಯ ಆರೋಗ್ಯ ಸಮಿತಿ ರಚಿಸಲಾಗುವುದು. ಶಿಕ್ಷಕರು ಅವರವರ ತರಗತಿಗಳನ್ನು ಸ್ವತಃ ನಿರ್ವಹಿಸಲಿದ್ದಾರೆ. ಮಕ್ಕಳ ಕಲಾತ್ಮಕ ಅಭಿರುಚಿಯನ್ನು ಬೆಳೆಸಲು ಕೃತಿಗಳನ್ನು ವಿಕ್ಟರ್ಸ್ ಚಾನೆಲ್‍ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದರು.
ಮಕ್ಕಳಿಗಾಗಿ ಟೆಲಿ-ಆನ್‍ಲೈನ್ ಕೌನ್ಸೆಲಿಂಗ್‍ಗೆ ವ್ಯವಸ್ಥೆ ಮಾಡಲಾಗುವುದು. ಕೊರೋನಾ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಲು ಶಾಶ್ವತ ವ್ಯವಸ್ಥೆ ಮಾಡಲಾಗುವುದು. ಶ್ರೀನಾರಾಯಣ ಗುರು ಮುಕ್ತ ವಿಶ್ವವಿದ್ಯಾಲಯಕ್ಕೆ 10 ಕೋಟಿ ರೂ. ಅನುಮತಿಸುವುದಾಗಿ ಸಚಿವರು ತಿಳಿಸಿರುವರು.