HEALTH TIPS

ಮನ್ ಕಿ ಬಾತ್ ನಲ್ಲಿ ಪ್ರಧಾನಿ ನೀಡಿದ ಭರವಸೆ ಸಾಕಾರ: ಪಾಲ ಜನರಲ್ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ಗೆ ನಿಧಿ ಮಂಜೂರು: ನಿಮಿಷಕ್ಕೆ 1000 ಲೀಟರ್ ಸಾಮಥ್ರ್ಯದ ಆಮ್ಲಜನಕ ಉತ್ಪಾದನೆ

              ಪಾಲ: ಜೀವಸೆಲೆಯಾದ ಶುದ್ದ  ಆಮ್ಲಜನಕವನ್ನು ಉತ್ಪಾದಿಸಲು ನಿಮಿಷವೊಂದಕ್ಕೆ  1000 ಲೀ ಉತ್ಪಾದನಾ ಸಾಮಥ್ರ್ಯದ ಸ್ಥಾವರವನ್ನು ಪಾಲ ಜನರಲ್ ಆಸ್ಪತ್ರೆಗೆ ಒದಗಿಸಲಾಗಿದೆ. ಪ್ರಧಾನಮಂತ್ರಿ ಕ್ಯಾರ್ ಫಂಡ್(ಪಿಎಂ ಕ್ಯಾರ್) ನಿಂದ ಹಣ ಒದಗಿಸಲಾಗಿದೆ. 

              ಏಪ್ರಿಲ್ 25 ರಂದು ಪ್ರಧಾನಮಂತ್ರಿಗಳು ತಮ್ಮ ಮನ್ ಕಿ ಬಾತ್ ನಲ್ಲಿ ದೇಶದಲ್ಲಿ 551 ಪಿಎಸ್ ಎ  ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.

              ಆಸ್ಪತ್ರೆಯ ಕಾಂಪೌಂಡ್ ನಲ್ಲಿರುವ ವೇಟಿಂಗ್ ಲ್ಯಾಬ್ ಬ್ಲಾಕ್‍ನ ಹಿಂದೆ ಈ ಘಟಕ ವ್ಯವಸ್ಥೆಗೊಳಿಸಲಾಗುತ್ತದೆ.  ಸ್ಥಾವರವನ್ನು ಸ್ಥಾಪಿಸುವ ಜವಾಬ್ದಾರಿ ಎಲ್ ಅಂಡ್ ಟಿ ಕಂಪನಿಯದ್ದಾಗಿದೆ.  ಕೇಂದ್ರ ಲೋಕೋಪಯೋಗಿ ಇಲಾಖೆ ಕಟ್ಟಡ ಸೇರಿದಂತೆ ಸೌಲಭ್ಯಗಳನ್ನು ಒದಗಿಸಿತು.

           ವಾತಾವರಣದಿಂದ ಹೊರತೆಗೆಯಲಾಗುವ  ಆಮ್ಲಜನಕದ ಶೇ. 95 ವರೆಗೆ ಈ ಘಟಕವು ಶುದ್ಧೀಕರಿಸಿ ನೀಡುತ್ತದೆ. 60 ಕ್ಕೂ ಹೆಚ್ಚು ವೆಂಟಿಲೇಟರ್‍ಗಳು, 190 ಕ್ಕೂ ಹೆಚ್ಚು ಹಾಸಿಗೆ ಆಮ್ಲಜನಕ ಬಿಂದುಗಳು ಮತ್ತು 30 ಕ್ಕೂ ಹೆಚ್ಚು ಹರಿವಿನ ಆಮ್ಲಜನಕ ಘಟಕಗಳು ಏಕಕಾಲದಲ್ಲಿ ಸಾಕಷ್ಟು ಆಮ್ಲಜನಕವನ್ನು ಉತ್ಪಾದಿಸಿ ಒದಗಿಸುವ ವ್ಯವಸ್ಥೆಗಳು ಈ ಘಟಕದಲ್ಲಿದೆ. 

             ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‍ಡಿಒ) ಜೀವ ವಿಜ್ಞಾನ ವಿಭಾಗವಾದ ಬಯೋ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಆಧರಿಸಿದ ವಿನ್ಯಾಸವಾಗಿದೆ ಇದು.

           ಕೋವಿಡ್ ಕಾಯಿಲೆಯಿಂದ ಬಳಲುತ್ತಿರುವ ಬಹುಪಾಲು ರೋಗಿಗಳು ತೀವ್ರ ಉಸಿರಾಟದ ತೊಂದರೆ ಹೊಂದಿದ್ದಾರೆ ಮತ್ತು ಯಾವುದೇ ಅಡೆತಡೆಯಿಲ್ಲದೆ ಆಮ್ಲಜನಕವನ್ನು ನೀಡಬಹುದಾಗಿದೆ. 

          ಪ್ರಸ್ತುತ, ಸಿಲಿಂಡರ್‍ಗಳನ್ನು ಭರ್ತಿ ಮಾಡುವ ಕೇಂದ್ರಗಳಿಗೆ ತಲುಪಿಸಲಾಗುತ್ತದೆ ಮತ್ತು ಆಸ್ಪತ್ರೆಗೆ ಆಮ್ಲಜನಕವನ್ನು ತಲುಪಿಸಲು ತುಂಬಿಸಲಾಗುತ್ತದೆ.  ಸ್ಥಾವರಕ್ಕೆ ಸಿಲಿಂಡರ್‍ಗಳನ್ನು ಸಕಾಲಿಕವಾಗಿ ತಲುಪಿಸುವಲ್ಲಿನ ವಿಳಂಬ, ಹೆಚ್ಚಿದ ಬೇಡಿಕೆ ಮತ್ತು ಕಡಿಮೆ ಲಭ್ಯತೆಯು ದೊಡ್ಡ ಬಿಕ್ಕಟ್ಟನ್ನು ಈ ನೂತನ ಘಟಕದ ಮೂಲಕ ಪರಿಹರಿಸುವ ಉದ್ದೇಶವಿರಿಸಲಾಗಿದೆ. 

           ಆಮ್ಲಜನಕದ ಕೊರತೆಯಿಂದಾಗಿ ಅನೇಕ ರೋಗಿಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗದೆ ಮರಳಿ ಕಳಿಸಬೇಕಾದ ಸ್ಥಿತಿ ಹಲವೆಡೆ ಕಂಡುಬಂದಿದೆ. ಹೊಸ ಸ್ಥಾವರದ ಸ್ಥಾಪನೆಯೊಂದಿಗೆ ಈ ಎಲ್ಲಾ ಅಡೆತಡೆಗಳಿಗೆ ಶಾಶ್ವತ ಪರಿಹಾರವನ್ನು ಕಾಣಲು ಮತ್ತು ಇಲ್ಲಿ ಹೆಚ್ಚಿನ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜೊತೆಗೆ ಇದು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗಲಿದೆ.

            ಇದೇ ವೇಳೆ, ಆಸ್ಪತ್ರೆಯು ಭಾರಿ ಆರ್ಥಿಕ ಪ್ರಯೋಜನಗಳನ್ನು ಹೊಂದಲಿದೆ.  ಕೇಂದ್ರೀಕೃತ ಆಮ್ಲಜನಕ ಪೂರೈಕೆ ಪೈಪ್‍ಲೈನ್ ನೆಟ್‍ವರ್ಕ್ ನ್ನು ಸ್ಥಾಪಿಸಲಾಗುತ್ತದೆ. 

       ಸ್ಥಾವರವು ಕಾರ್ಯರೂಪಕ್ಕೆ ಬಂದ ಬಳಿಕÀ, ಆಸ್ಪತ್ರೆಯ ಎಲ್ಲಾ ವಾರ್ಡ್‍ಗಳಿಗೆ ಯತೇಚ್ಚ ಆಮ್ಲಜನಕ ಲಭ್ಯವಿರುತ್ತದೆ ಮತ್ತು ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ವಾರಗಳಲ್ಲಿ ಸ್ಥಾವರವು ಕಾರ್ಯರೂಪಕ್ಕೆ ಬರಲಿದೆ. 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries