ಬೆಂಗಳೂರು: ಸಂಗೀತದ ಕೆಲವು ರಾಗಗಳಿಂದ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯ ಎಂಬುದು ಇದಾಗಲೇ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಸಂಗೀತಕ್ಕೆ ಅಂಥದ್ದೊಂದು ಅದ್ಭುತ ಶಕ್ತಿಯೂ ಇದೆ.
ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿ ಸೋಂಕಿತರಿಗಾಗಿ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡಖಿಂಡಿ ಅವರು ಕಳೆದ ಜುಲೈ ತಿಂಗಳಿನಿಂದ ಸಂಗೀತ ಸರಣಿ ಆರಂಭಿಸಿದ್ದಾರೆ. ಜುಲೈ 13 ರಂದು ಈ ಸರಣಿಯನ್ನು ಪ್ರಾರಂಭಿಸಿರುವ ಗೋಡಖಿಂಡಿಯವರು ಅಂದಿನಿಂದ ಇಂದಿನವರೆಗೂ ಸೋಮವಾರ ಮತ್ತು ಗುರುವಾರ ಪ್ರತಿ ವಾರ 2 ರಾಗಗಳನ್ನು ಪ್ರದರ್ಶಿಸುತ್ತಿದ್ದಾರೆ.
ಇದೀಗ ಈ ಪ್ರಯೋಗ 100ನೇ ಸಂಚಿಕೆಯತ್ತ ತಲುಪಿದೆ. ಇದೇ 24ರಂದು 100ನೇ ಎಪಿಸೋಡ್ ನಡೆಯಲಿದ್ದು, ಹಲವಾರು ಪ್ರಖ್ಯಾತ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ. ಇದರ ನೇರಪ್ರಸಾರವು ಜೂನ್ 24 ರಂದು ಸಂಜೆ 7 ಗಂಟೆಗೆ ಫೇಸ್‌ಬುಕ್ ಲೈವ್‌ನಲ್ಲಿ ಬರಲಿದ್ದು, ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತೆ ಗೋಡಖಿಂಡಿಯವರು ಕೋರಿದ್ದಾರೆ.
101 ರಾಗಗಳನ್ನು pravingodkhindi ಆಫೀಷಿಯಲ್ ಯುಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿಯೂ ವೀಕ್ಷಿಸಬಹುದು.