ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ 'ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ' ನಿರ್ಮಾಣಕ್ಕಾಗಿ ಈ ಹಿಂದಿನ ಯೋಜನೆಯನ್ನು 2022ರ ಮಾರ್ಚ್ 31ರವರೆಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕೊವಿಡ್-19 ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾವಲಂಬನೆಯ ಪಾಠ ಹೇಳಿದ್ದರು. 2020ರ ಅಕ್ಟೋಬರ್ 1ರಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಪ್ರಜೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಆತ್ಮನಿರ್ಭರ್ ಭಾರತ್ ಯೋಜನೆಯನ್ನು ಪರಿಚಯಿಸಲಾಗಿತ್ತು.
ದೇಶದ 58.50 ಫಲಾನುಭವಿಗಳಿಗೆ ಆತ್ಮನಿರ್ಭರ್ ಯೋಜನೆ ಅಡಿ ನೆರವು ನೀಡುವುದಕ್ಕಾಗಿ 22,810 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ. ಜೂನ್ 30ರವರೆಗೂ ಹೆಸರು ನೋಂದಣಿಗೆ ಅವಕಾಶ ನೀಡಲಾಗಿದೆ.
ತೆರಿಗೆ ವಿನಾಯಿತಿ:
ದೇಶದಲ್ಲಿ 15,000 ರೂಪಾಯಿಗಿಂತ ಕಡಿಮೆ ವೇತನವನ್ನು ಪಡೆಯುವ ಹೊಸ ಉದ್ಯೋಗಿಗಳಿಗೆ ಎರಡು ವರ್ಷಗಳವರೆಗೂ ತೆರಿಗೆ ವಿನಾಯಿತಿ ನೀಡಲಾಗುವುದು. ಉದ್ಯೋಗಗಳ ಭವಿಷ್ಯ ನಿಧಿಗಾಗಿ 1000ಕ್ಕಿಂತ ಕಡಿಮೆ ಉದ್ಯೋಗಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಕಂಪನಿಯು ಶೇ.12 ಹಾಗೂ ಉದ್ಯೋಗಿ ಶೇ.12 ರಷ್ಟು ಹಣವನ್ನು ಪಾವಸಿಬೇಕು. ಒಂದು ವೇಳೆ 1,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ, ಅಂಥ ಕಂಪನಿಗಳಲ್ಲಿ ಉದ್ಯೋಗಿಯ ಶೇ.12ರಷ್ಟು ಪಾವತಿ ಮಾಡಬೇಕು.
ಆತ್ಮನಿರ್ಭರ್ ಭಾರತ್ ಯೋಜನೆ:
ಆತ್ಮನಿರ್ಭರ್ ಭಾರತ್ ಯೋಜನೆ ಅಡಿ 2021ರ ಜೂನ್ 18ರವರೆಗೆ ದೇಶದ 79,577 ಕಂಪನಿಗಳ 21.42 ಉದ್ಯೋಗಿಗಳಿಗೆ 902 ಕೋಟಿ ರೂಪಾಯಿ ಅನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.