ತಿರುವನಂತಪುರ: ರಾಜ್ಯ ಸರ್ಕಾರದ ಉಚಿತ ಆಂಬ್ಯುಲೆನ್ಸ್ ಸೇವೆಯಾದ ಕನಿವ್ 108 ಆಂಬುಲೆನ್ಸ್‍ಗಳು ಕೋವಿಡ್‍ನ ಎರಡನೇ ಅಲೆಯ ತುರ್ತು ಸಂದರ್ಭ 69,205 ಜನರಿಗೆ ಸೇವೆ ಸಲ್ಲಿಸಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕನಿವ್ 108 ಆಂಬ್ಯುಲೆನ್ಸ್‍ಗಳು ಪ್ರಾರಂಭದಿಂದಲೂ ರಾಜ್ಯದಲ್ಲಿ ಕೋವಿಡ್ ತಡೆಗಟ್ಟುವ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿವೆ ಎಂದರು.
316 ಕನಿವ್ 108 ಆಂಬುಲೆನ್ಸ್‍ಗಳು ರಾಜ್ಯಾದ್ಯಂತ ಸೇವೆಯಲ್ಲಿವೆ. ಈ ಪೈಕಿ 290 ಆಂಬುಲೆನ್ಸ್‍ಗಳು ವಿವಿಧ ಜಿಲ್ಲಾ ಆಡಳಿತಗಳ ಅಡಿಯಲ್ಲಿ ಕೋವಿಡ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಸುಮಾರು 1,500 ಉದ್ಯೋಗಿಗಳು ಪ್ರಮುಖ ಕೋವಿಡ್ ಹೋರಾಟಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ನೌಕರರ ಅತ್ಯುತ್ತಮ ಸೇವೆಗಾಗಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರ್ಚ್ 25 ರಿಂದ ಜೂನ್ 25 ರವರೆಗಿನ 92 ದಿನಗಳ ಅವಧಿಯಲ್ಲಿ, ಕೋವಿಡ್ ಸಂಬಂಧಿತ ಸೇವೆಗಳನ್ನು ರಾಜ್ಯದಾದ್ಯಂತ 69,205 ಜನರಿಗೆ ತಲುಪಿಸಲಾಗಿದೆ. ಕೋವಿಡ್ ಸಂಬಂಧಿಯಾಗಿ 92 ದಿನಗಳಲ್ಲಿ 55,872 ಟ್ರಿಪ್‍ಗಳನ್ನು ಮಾಡಿದ್ದಾರೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಸೇವೆ ಪಡೆಯುತ್ತಿದ್ದಾರೆ. ಕನಿವ್ 108 ಆಂಬ್ಯುಲೆನ್ಸ್‍ಗಳು ಇಲ್ಲಿ 10,471 ಜನರಿಗೆ ಕೋವಿಡ್ ಸಂಬಂಧಿತ ಸೇವೆಗಳನ್ನು ತಲುಪಿಸಲು ಸಾಧ್ಯವಾಯಿತು ಎಂದರು.
ತಿರುವನಂತಪುರ 6149, ಕೊಲ್ಲಂ 6556, ಪತ್ತನಂತಿಟ್ಟು 2362, ಆಲಪ್ಪುಳ 1950, ಕೊಟ್ಟಾಯಂ 4240, ಇಡುಕ್ಕಿ 2372, ಎರ್ನಾಕುಳಂ 5549, ತ್ರಿಶೂರ್ 5394, ಮಲಪ್ಪುರಂ 7180, ಕೋಝಿಕೋಡ್ 5744, ವಯನಾಡ್ 3532, ಕಣ್ಣೂರ 4188, ಕಾಸರಗೋಡು 3518 ಎಂಬಂತೆ 108 ಆಂಬ್ಯುಲೆನ್ಸ್ ಗಳು ಟ್ರಿಪ್ ನಡೆಸಿವೆ.
ಕನಿವ್ 108 ಆಂಬ್ಯುಲೆನ್ಸ್ ಸೇವೆಗಳನ್ನು ಹೆಚ್ಚಾಗಿ ಕೋವಿಡ್ ಪಾಸಿಟಿವ್ ಆದವರನ್ನು ತಮ್ಮ ಮನೆಗಳಿಂದ ಕೋವಿಡ್ ಆರೈಕೆ ಕೇಂದ್ರಗಳಿಗೆ ಮತ್ತು ಅಲ್ಲಿಂದ ಆಸ್ಪತ್ರೆಗಳಿಗೆ ಮತ್ತು ಕೋವಿಡ್ ಪರೀಕ್ಷೆಗಳಿಗೆ ಸಾಗಿಸಲು ಬಳಸಲಾಗುತ್ತದೆ. ಲಾಕ್ ಡೌನ್ ಅವಧಿಯಲ್ಲಿ, ವಿವಿಧ ಜಿಲ್ಲಾ ಆಡಳಿತಗಳ ನಿರ್ದೇಶನದಂತೆ ರೋಗಿಗಳನ್ನು ತಜ್ಞರ ಚಿಕಿತ್ಸೆಗಾಗಿ ವರ್ಗಾಯಿಸಲು 108 ಆಂಬ್ಯುಲೆನ್ಸ್‍ಗಳನ್ನು ನಿಯೋಜಿಸಲಾಗುತ್ತಿದೆ.
ಕನಿವ್ 108 ಕೋವಿಡ್ ಸಂಬಂಧಿತ ಚಟುವಟಿಕೆಗಳಿಗಾಗಿ 2020 ರ ಜನವರಿ 29 ರಿಂದ ರಾಜ್ಯದಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇಲ್ಲಿಯವರೆಗೆ, 2,65,827 ಮಂದಿ ಕೋವಿಡ್ ಸಂಬಂಧಿತ ಸಂಚಾರವನ್ನು ಕನಿವ್ 108 ಆಂಬ್ಯುಲೆನ್ಸ್‍ಗಳು ನಡೆಸಿದ್ದು, 3,70,955 ಮಂದಿ ಜನರಿಗೆ ಕೋವಿಡ್ ಸಂಬಂಧಿತ ಸೇವೆಗಳನ್ನು ಒದಗಿಸುತ್ತಿದೆ. ಕೋವಿಡ್ ಪೀಡಿತ 3 ಯುವತಿಯರ ಹೆರಿಗೆ ಕೂಡಾ ಕನಿವ್ 108 ಆಂಬ್ಯುಲೆನ್ಸ್ ಒಳಗೆ ಸಿಬ್ಬಂದಿಗಳ ಆರೈಕೆಯಲ್ಲಿ ನಡೆಯಿತು.