ಕಾಸರಗೋಡು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಆರೋಗ್ಯ ಇಲಾಖೆಗೆ 10 ಮಲ್ಟಿ ಪಾರಾ ಮಾನಿಟರ್ ಕೊಡುಗೆಯಾಗಿ ನೀಡಿದ್ದಾರೆ.
ತಮ್ಮ ಸ್ಥಳೀಯ ನಿಧಿ ಯೋಜನೆಯಿಂದ ಮಂಜೂರು ಮಾಡಲಾದ 7,03,520ರೂ. ಮೌಲ್ಯದ 10 ಮಲ್ಟಿ ಪಾರಾ ಮಾನಿಟರ್ ಆರೋಗ್ಯ ಇಲಾಖೆಗೆ ಅವರು ಒದಗಿಸಿದ್ದು, ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಆರ್.ರಾಜನ್ ಅವರಿಗೆ ಹಸ್ತಾಂತರಿಸಿದ್ದಾರೆ.
ರೋಗಿಗಳ ಹೃದಯ ಬಡಿತ, ರಕ್ತದೊತ್ತಡ, ರಕ್ತದಲ್ಲಿನ ಆಕ್ಸಿಜನ್ ಅಳತೆ ಇತ್ಯಾದಿಗಳನ್ನು 24 ತಾಸುಗಳ ಕಾಲ ನಿಗಾ ನಡೆಸುವ ನಿಟ್ಟಿನಲ್ಲಿ ಮಲ್ಟಿ ಪಾರಾ ಮಾನಿಟರ್ ಪೂರಕವಾಗಿದೆ. ಕೋವಿಡ್ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಇದು ಅನಿವಾರ್ಯವಾಗಿದೆ ಎಂದು ಸಂಸದ ಈ ವೇಳೆ ತಿಳಿಸಿದರು.
ಮಂಗಲ್ಪಾಡಿ, ಬೇಡಡ್ಕ, ನೀಲೇಶ್ವರ, ತ್ರಿಕರಿಪುರ ತಾಲೂಕು ಆಸ್ಪತ್ರೆಗಳಲ್ಲಿ, ಮುಳಿಯಾರು, ಪೆರಿಯ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇವನ್ನು ವಿತರಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ನುಡಿದರು.
ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಲಭಿಸಿದ 54,25,000 ರೂ.ನಿಂದ ಎನ್ 95 ಮಾಸ್ಕ್ಗಳು, ಪಿ.ಪಿ.ಇ.ಕಿಟ್, ಪೆÇ್ರಟೆಕ್ಟಿವ್ ಮಾಸ್ಕ್ ಗಳು, ಪೆÇೀರ್ಟಬಲ್ ಅಲ್ಟ್ರಾ ಸೌಂಡ್ ಮೆಷಿನ್ ವಿತ್ ಕಲರ್ ಟಾಪ್ಲರ್, ಡಿ.ಫ್ರಿ.ಬಿ. ಲೆಟರ್ ವಿತ್ ಕಾರ್ಡಿಯಾಕ್ ಮಾನಿಟರ್, ವೈನ್ ಡಿಟಕ್ಟಿವ್ ಟ್ರಾನ್ಸಿಲುಮಿನೇಟರ್ ಇತ್ಯಾದಿ ಈಗಾಗಲೇ ಲಭಿಸಿದೆ.
ಕೋವಿಡ್ ಕಟ್ಟುನಿಟ್ಟು ಪಾಲಿಸಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಸ್ಟೋರ್ ವೇರಿಫೀಕೇಷನ್ ಅಧಿಕಾರಿ ಇ.ರಾಜೀವ್, ಸಹಾಯಕ ಜಿಲ್ಲಾ ಎಜುಕೇಷನ್ ಮೀಡಿಯಾ ಅಧಿಕಾರಿ ಎಸ್.ಸಯನಾ ಮೊದಲಾದವರು ಉಪಸ್ಥಿತರಿದ್ದರು.