ಜೆರುಸಲೆಮ್: ಕೊರೋನಾ ಮತ್ತೆ ಉಲ್ಪಣಿಸುತ್ತಿರುವುದರಿಂದ ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಇಸ್ರೇಲ್ ಆರೋಗ್ಯ ಸಚಿವಾಲಯ ಆದೇಶಿಸಿದೆ.
ಇಸ್ರೇಲ್ ನಲ್ಲಿ ಕೊರೋನಾ ಕಡಿಮೆಯಾಗಿದ್ದರಿಂದ 10 ದಿನಗಳ ಹಿಂದೆ ಒಳಾಂಗಣ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಿತ್ತು. ಲಸಿಕೆ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ಇಸ್ರೇಲ್ ಗೆ ದೊಡ್ಡ ಹೊಡೆತ ಬಿದ್ದಿದೆ.
ಇಸ್ರೇಲ್ ನ ಸಾಂಕ್ರಾಮಿಕ ಪ್ರಕ್ರಿಯೆ ಕಾರ್ಯಪಡೆಯ ಮುಖ್ಯಸ್ಥ ನಾಚ್ಮನ್ ಆಶ್ ಸಾರ್ವಜನಿಕ ರೇಡಿಯೊಗೆ ತಿಳಿಸಿದ್ದು, ದಿನಕ್ಕೆ 100ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿದ್ದು ನಾಲ್ಕು ದಿನಗಳ ನಂತರ ಕಳೆದ ಒಂದು ದಿನದಲ್ಲಿ 227 ಪ್ರಕರಣಗಳು ಪತ್ತೆಯಾಗಿವೆ. ನಾವು ಪ್ರತಿ ಕೆಲವು ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಐಶ್ ಹೇಳಿದರು.
ಮಾಸ್ಕ್ ಧರಿಸುವುದಕ್ಕೆ ವಿನಾಯಿತಿ ನೀಡಿದ್ದು ಇಸ್ರೇಲ್ ಗೆ ಹಿನ್ನಡೆಯಾಗಿದೆ. ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನದ ಹಿನ್ನಲೆಯಲ್ಲಿ ಜೂನ್ 15ರಂದು ತೆಗೆದುಹಾಕಿದ್ದ ಮಾಸ್ಕ್ ಧರಿಸುವ ನಿಯಮವನ್ನು ಮತ್ತೆ ಆರಂಭಿಸಲಿದ್ದೇವೆ ಎಂದರು.
ಇಸ್ರೇಲ್ ನಲ್ಲಿ ಸುಮಾರು 5.2 ಮಿಲಿಯನ್ ಜನರು ಫಿಜರ್-ಬಯೋಟೆಕ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ.