ತಿರುವನಂತಪುರ: ಕೇರಳದಲ್ಲಿ ಇಂದು 11,361 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 1550, ಕೊಲ್ಲಂ 1422, ಎರ್ನಾಕುಳಂ 1315, ಮಲಪ್ಪುರಂ 1039, ಪಾಲಕ್ಕಾಡ್ 1020, ತ್ರಿಶೂರ್ 972, ಕೋಝಿಕೋಡ್ 919, ಆಲಪ್ಪುಳ 895, ಕೊಟ್ಟಾಯಂ 505, ಕಣ್ಣೂರು 429, ಪತ್ತನಂತಿಟ್ಟು 405, ಕಾಸರಗೋಡು 373, ಇಡುಕ್ಕಿ 311, ವಯನಾಡ್ 206 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,11,124 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.22 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,17,32,157 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ್ಲ 90 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಕೋವಿಡ್ ಸಾವಿನ ಸಂಖ್ಯೆ 11,833 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 64 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 10,667 ಮಂದಿ ಜನರಿಗೆ ಸೋಂಕು ತಗುಲಿತು. 567 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1387, ಕೊಲ್ಲಂ 1412, ಎರ್ನಾಕುಳಂ 1277, ಮಲಪ್ಪುರಂ 1003, ಪಾಲಕ್ಕಾಡ್ 715, ತ್ರಿಶೂರ್ 967, ಕೋಝಿಕೋಡ್ 908, ಆಲಪ್ಪುಳ 883, ಕೊಟ್ಟಾಯಂ 484, ಕಣ್ಣೂರು 389, ಪತ್ತನಂತಿಟ್ಟು 396, ಕಾಸರಗೋಡು 366, ಇಡುಕ್ಕಿ 289, ವಯನಾಡ್ 191 ಎಂಬಂತೆ ಸ|ಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 63 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 14, ತಿರುವನಂತಪುರ 10, ಕೊಲ್ಲಂ 8, ವಯನಾಡ್ 7, ಎರ್ನಾಕುಳಂ, ಪಾಲಕ್ಕಾಡ್, ಕಾಸರಗೋಡು ತಲಾ 5, ಪತ್ತನಂತಿಟ್ಟು 3, ಆಲಪ್ಪುಳ, ಕೊಟ್ಟಾಯಂ ತಲಾ 2, ತ್ರಿಶೂರ್ ಮತ್ತು ಕೋಝಿಕೋಡ್ ತಲಾ 1 ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 12,147 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1581, ಕೊಲ್ಲಂ 1318, ಪತ್ತನಂತಿಟ್ಟು 259, ಆಲಪ್ಪುಳ 1183, ಕೊಟ್ಟಾಯಂ 597, ಇಡುಕ್ಕಿ 422, ಎರ್ನಾಕುಳಂ 1533, ತ್ರಿಶೂರ್ 1084, ಪಾಲಕ್ಕಾಡ್ 1505, ಮಲಪ್ಪುರಂ 1014, ಕೋಝಿಕೋಡ್ 671, ವಯನಾಡ್ 166, ಕಣ್ಣೂರು 411,ಕಾಸರಗೋಡು 403 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,07,682 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 26,65,354 ಮಂದಿ ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,69,522 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,41,617 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 27,905 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2335 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ 8 ಕ್ಕಿಂತ 178, ಟಿಪಿಆರ್. 8 ರಿಂದ 20 ರ ನಡುವೆ 633, ಟಿಪಿಆರ್. 20 ರಿಂದ 30ರ ಮಧ್ಯೆ 208, ಟಿಪಿಆರ್. 30 ಮೇಲೆ 16 ಸ್ಥಳೀಯಾಡಳಿತ ಸ್ಥಳಗಳು ಇವೆ. ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗುವುದು.
ತಿರುವನಂತಪುರ, ಅತಿಯನ್ನೂರ್, ಅಜೂರ್, ಕತಿನಂಕುಲಂ, ಕಾರೋಟ್, ಮಣಂಬೂರ್, ಮಂಗಳಾಪುರಂ, ಪನವೂರ್, ಪೆÇತ್ತನ್ ಕೋಡ್, ಎರ್ನಾಕುಳಂ, ಚಿಟ್ಟಾಟುಕ್ಕರ, ಪಾಲಕ್ಕಾಡ್, ನಾಗಲಸೇರಿ, ನೆನ್ಮಾರಾ, ವಲ್ಲಾಪುಳ, ಮಲಪ್ಪುರ, ತಿರುನಾವಾಯ, ವಯನಾಡ್ ಜಿಲ್ಲೆಯ ಮುಚ್ಚೆನ್ನಾಡ್, ಕಾಸರಗೋಡು ಜಿಲ್ಲೆಯ ಬಂದಡ್ಕ ಮಧೂರು ಎಂಬ ಪ್ರದೇಶಗಳಲ್ಲಿ ಟಿಪಿಆರ್ ದರ ಶೇ.30ಕ್ಕಿಂತಲೂ ಹೆಚ್ಚಿದೆ.