ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಅಲೆ ಮತ್ತೆ ಹೆಚ್ಚಳದ ಹಾದಿಯಲ್ಲಿ ಜಿಗಿತ ಕಂಡಿದ್ದು ಕಳವಳಕ್ಕೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯಲ್ಲೂ ತೀವ್ರ ಏರಿಕೆ ಕಂಡಿದೆ. ಇಂದು 11,546 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1374, ತಿರುವನಂತಪುರ 1291, ಕೊಲ್ಲಂ 1200, ತ್ರಿಶೂರ್ 1134, ಎರ್ನಾಕುಳಂ 1112, ಪಾಲಕ್ಕಾಡ್ 1061, ಕೋಝಿಕೋಡ್ 1004, ಕಾಸರಗೋಡು 729, ಆಲಪ್ಪುಳ 660, ಕಣ್ಣೂರು 619, ಕೊಟ್ಟಾಯಂ 488, ಪತ್ತನಂತಿಟ್ಟು 432, ಇಡುಕ್ಕಿ 239, ವಯನಾಡ್ 203 ಎಂಬಂತೆ ಸೋಂಕು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ 1,08,867 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಶೇ.10.6. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,25,06,647 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 118 ಮಂದಿ ಸೋಂಕು ಕಾರಣ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,699 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕಿನಿಂದ ಬಳಲುತ್ತಿರುವವರಲ್ಲಿ 70 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 10,771 ಮಂದಿ ಜನರಿಗೆ ಸೋಂಕು ತಗುಲಿತು. 624 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1331, ತಿರುವನಂತಪುರಂ 1192, ಕೊಲ್ಲಂ 1187, ತ್ರಿಶೂರ್ 1124, ಎರ್ನಾಕುಳಂ 1088, ಪಾಲಕ್ಕಾಡ್ 654, ಕೋಝಿಕೋಡ್ 995, ಕಾಸರಗೋಡು 705, ಆಲಪ್ಪುಳ 644, ಕಣ್ಣೂರು 549, ಕೊಟ್ಟಾಯಂ 464, ಪತ್ತನಂತಿಟ್ಟು 422, ಇಡುಕ್ಕಿ 227, ವಯನಾಡ್ 189 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ಎಂಭತ್ತೊಂದು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ. ಕಾಸರಗೋಡು 16, ಕಣ್ಣೂರು 12, ಕೊಲ್ಲಂ 11, ತಿರುವನಂತಪುರ 10, ಪಾಲಕ್ಕಾಡ್ 8, ಎರ್ನಾಕುಳಂ 7, ತ್ರಿಶೂರ್ 5, ಪತ್ತನಂತಿಟ್ಟು 4, ವಯನಾಡ್ 3, ಆಲಪ್ಪುಳ, ಇಡುಕಿ ತಲಾ 2 ಮತ್ತು ಕೊಟ್ಟಾಯಂ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,056 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1392, ಕೊಲ್ಲಂ 1819, ಪತ್ತನಂತಿಟ್ಟು 386, ಆಲಪ್ಪುಳ 778, ಕೊಟ್ಟಾಯಂ 463, ಇಡುಕ್ಕಿ 273, ಎರ್ನಾಕುಳಂ 1504, ತ್ರಿಶೂರ್ 1133, ಪಾಲಕ್ಕಾಡ್ 1060, ಮಲಪ್ಪುರಂ 862, ಕೊಝಿಕೋಡ್ 475, ವಯನಾಡ್ 94, ಕಣ್ಣೂರು 436, ಕಾಸರಗೋಡು 381 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,00,230 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,52,492 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,92,633 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,66,650 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 25,983 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2388 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ ಆಧಾರಿತ ಸ್ಥಳೀಯಾಡಳಿತ ಪ್ರದೇಶಗಳು ನಿನ್ನೆಯಂತೆಯೇ ಮುಂದುವರೆದಿದೆ. ಟಿಪಿಆರ್ 8 ಕೆಳಗೆ 313, ಟಿಪಿಆರ್. 8 ರಿಂದ 16 ರ ನಡುವೆ 545, ಟಿಪಿಆರ್. 16 ರಿಂದ 24 ರ ನಡುವೆ 152, ಟಿಪಿಆರ್. 24 ಮತ್ತು ಅದಕ್ಕಿಂತ ಹೆಚ್ಚಿನ 24 ಸ್ಥಳೀಯ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ಪ್ರದೇಶಗಳಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗುವುದು.
.