ತಿರುವನಂತಪುರ: ಎರಡನೇ ಕೋವಿಡ್ ತರಂಗದಲ್ಲಿ ನಲುಗಿದ್ದ ರಾಜ್ಯದಲ್ಲಿ ಇದೀಗ ದಿನೇದಿನೇ ಚೇತರಿಕೆ ಕಂಡುಬಂದಿರುವುದು ಭರವಸೆ ಮೂಡಿಸಿದೆ. ಇಂದು ರಾಜ್ಯದಲ್ಲಿ 11,584 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದರು. ಇಂದಿನ ಕೋವಿಡ್ ಪ್ರಕರಣಗಳು ಮತ್ತು ಹಾಟ್‍ಸ್ಪಾಟ್‍ಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಸಕಾರಾತ್ಮಕ ಪ್ರಕರಣಗಳು:
ಇಂದು ರಾಜ್ಯದಲ್ಲಿ 11,584 ಮಂದಿ ಜನರಿಗೆ ಸೋಂಕು ದೃಢಪಟ್ಟಿದೆ. ತಿರುವನಂತಪುರ 1775, ತ್ರಿಶೂರ್ 1373, ಕೊಲ್ಲಂ 1312, ಎರ್ನಾಕುಳಂ 1088, ಪಾಲಕ್ಕಾಡ್ 1027, ಮಲಪ್ಪುರಂ 1006, ಕೋಝಿಕೋಡ್ 892, ಆಲಪ್ಪುಳ 660, ಕಣ್ಣೂರು 633, ಕೊಟ್ಟಾಯಂ 622, ಕಾಸರಗೋಡು 419, ಇಡುಕ್ಕಿ 407, ಪತ್ತನಂತಿಟ್ಟು 223, ವಯನಾಡ್ 147 ಎಂಬಂತೆ ಸೋಂಕು ಬಾಧಿಸಿದೆ.
ಪರೀಕ್ಷಾ ಸಕಾರಾತ್ಮಕ ದರ 12.24ಶೇ.
ಕಳೆದ 24 ಗಂಟೆಗಳಲ್ಲಿ 94,677 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.12.24 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,12,20,925 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಒಟ್ಟು ಸಾವಿನ ಸಂಖ್ಯೆ 11,181 ಏರಿಕೆ:
ಇಂದು, ಕೋವಿಡ್ ಕಾರಣದಿಂದಾಗಿ 206 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 11,181 ಕ್ಕೆ ಏರಿಕೆಯಾಗಿದೆ. ಇಂದು ಅರವತ್ತಾರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 17, ತ್ರಿಶೂರ್ 10, ಎರ್ನಾಕುಳಂ 7, ತಿರುವನಂತಪುರ, ಕೊಲ್ಲಂ, ವಯನಾಡ್ ತಲಾ 6, ಪಾಲಕ್ಕಾಡ್ 4, ಮಲಪ್ಪುರಂ, ಕಾಸರಗೋಡು ತಲಾ 3, ಕೊಟ್ಟಾಯಂ 2, ಪತ್ತನಂತಿಟ್ಟು ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಕೋವಿಡ್ ಬಾಧಿಸಿದೆ.
17,856 ಜನರು ಸೋಂಕು ಮುಕ್ತ:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 17,856 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 2315, ಕೊಲ್ಲಂ 1878, ಪತ್ತನಂತಿಟ್ಟು 619, ಆಲಪ್ಪುಳ 1123, ಕೊಟ್ಟಾಯಂ 846, ಇಡುಕ್ಕಿ 500, ಎರ್ನಾಕುಳಂ 2332, ತ್ರಿಶೂರ್ 1227, ಪಾಲಕ್ಕಾಡ್ 1744, ಮಲಪ್ಪುರಂ 2226, ಕೊಝಿಕೋಡ್ 1509, ವಯನಾಡ್ 307, ಕಣ್ಣೂರು 678, ಕಾಸರಗೋಡು 552 ಎಂಬಂತೆ ಸೋಂಕುಮುಕ್ತರಾದರು. ಇದರೊಂದಿಗೆ 1,23,003 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 25,93,625 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಸಂಪರ್ಕದ ಮೂಲಕ 10,793 ಮಂದಿಗೆ ಸೋಂಕು
ಇಂದು, ಸೋಂಕು ಪತ್ತೆಯಾದವರಲ್ಲಿ 83 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 10,793 ಮಂದಿ ಜನರಿಗೆ ಸೋಂಕು ತಗುಲಿತು. 642 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1640, ತ್ರಿಶೂರ್ 1357, ಕೊಲ್ಲಂ 1303, ಎರ್ನಾಕುಳಂ 1051, ಪಾಲಕ್ಕಾಡ್ 646, ಮಲಪ್ಪುರಂ 952, ಕೋಝಿಕೋಡ್ 880, ಆಲಪ್ಪುಳ 657, ಕಣ್ಣೂರು 562, ಕೊಟ್ಟಾಯಂ 592, ಕಾಸರಗೋಡು 412, ಇಡುಕ್ಕಿ 395, ಪತ್ತನಂತಿಟ್ಟು 215, ವಯನಾಡ್ 131 ಎಂಬಂತೆ ಸಂಪರ್ಕದಿಂದ ಸೋ||ಂಕು ಉಂಟಾಗಿದೆ.
ಒಟ್ಟು 882 ಹಾಟ್‍ಸ್ಪಾಟ್‍ಗಳು:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,38,215 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 5,07,540 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 30,675 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2309 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 2 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 882 ಹಾಟ್‍ಸ್ಪಾಟ್‍ಗಳಿವೆ.