ತಿರುವನಂತಪುರ: ರಾಜ್ಯದಲ್ಲಿ ಇಂದು 11,647 ಮಂದಿ ಜನರಿಗೆ ಕೋವಿಡ್ ಖಚಿತವಾಗಿದೆ. ಕಳೆದ 24 ಗಂಟೆಗಳಲ್ಲಿ 112 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,060 ಕ್ಕೆ ಏರಿಕೆಯಾಗಿದೆ.
ಕೋವಿಡ್: ಜಿಲ್ಲಾವಾರು ಮಾಹಿತಿ:
ತಿರುವನಂತಪುರಂ 1600, ಎರ್ನಾಕುಳಂ 1461, ಕೊಲ್ಲಂ 1219, ಮಲಪ್ಪುರಂ 1187, ತ್ರಿಶೂರ್ 1113, ಪಾಲಕ್ಕಾಡ್ 1045, ಕೋಝಿಕೋಡ್ 979, ಆಲಪ್ಪುಳ 638, ಕೊಟ್ಟಾಯಂ 600, ಕಣ್ಣೂರು 486, ಕಾಸರಗೋಡು 476, ಇಡುಕ್ಕಿ 430, ಪತ್ತನಂತಿಟ್ಟು 234, ವಯನಾಡ್ 179 ಎಂಬಂತೆ ಸೋಂಕು ಬಾಧಿಸಿದೆ.
ಪರೀಕ್ಷಿಸಿದ ಮಾದರಿಗಳು:
ಕಳೆದ 24 ಗಂಟೆಗಳಲ್ಲಿ 1,07,474 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.84 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,19,61,374 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಚೇತರಿಸಿಕೊಂಡವರು:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 12,459 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1877, ಕೊಲ್ಲಂ 805, ಪತ್ತನಂತಿಟ್ಟು 517, ಆಲಪ್ಪುಳ 844, ಕೊಟ್ಟಾಯಂ 215, ಇಡುಕಿ 435, ಎರ್ನಾಕುಳಂ 1186, ತ್ರಿಶೂರ್ 1251, ಪಾಲಕ್ಕಾಡ್ 972, ಮಲಪ್ಪುರಂ 1520, ಕೋಝಿಕೋಡ್ 1240, ವಯನಾಡ್ 272, ಕಣ್ಣೂರು 892, ಕಾಸರಗೋಡು 433 ಎಂವಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,05,936 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 26,90,958 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಸಂಪರ್ಕದಿಂದ ಸೋಂಕು:
ಇಂದು, ಸೋಂಕು ಪತ್ತೆಯಾದವರಲ್ಲಿ 54 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ ಒಟ್ಟು 10,982 ಮಂದಿ ಜನರಿಗೆ ಸೋಂಕು ತಗುಲಿತು. 554 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1497, ಎರ್ನಾಕುಳಂ 1432, ಕೊಲ್ಲಂ 1214, ಮಲಪ್ಪುರಂ 1140, ತ್ರಿಶೂರ್ 1102, ಪಾಲಕ್ಕಾಡ್ 703, ಕೋಝಿಕ್ಕೋಡ್ 971, ಆಲಪ್ಪುಳ 624, ಕೊಟ್ಟಾಯಂ 578, ಕಣ್ಣೂರು 435, ಕಾಸರಗೋಡು 463, ಇಡುಕ್ಕಿ 423, ಪತ್ತನಂತಿಟ್ಟು 226, ವಯನಾಡ್ 174 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದ ವಿವರಗಳಾಗಿವೆ.
ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ರಾಜ್ಯದಲ್ಲಿ ಇಂದು 57 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 14, ತಿರುವನಂತಪುರ 9, ತ್ರಿಶೂರ್, ಕಾಸರಗೋಡು ತಲಾ 8, ಪಾಲಕ್ಕಾಡ್ 5, ಕೊಲ್ಲಂ 4, ಪತ್ತನಂತಿಟ್ಟು 3, ಕೊಟ್ಟಾಯಂ, ಎರ್ನಾಕುಳಂ ತಲಾ 2, ಕೋಝಿಕೋಡ್ ಮತ್ತು ವಯನಾಡ್ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ನಿರೀಕ್ಷಣೆಯಲ್ಲಿರುವವರು:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,48,037 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,21,131 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,906 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2297 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ ಆಧಾರಿತ ಪ್ರದೇಶಗಳು ಹಿಂದಿನ ದಿನದಂತೆಯೇ ಮುಂದುವರಿಯುತ್ತವೆ. ಟಿಪಿಆರ್ 8 ರ ಕೆಳಗೆ 178, ಟಿಪಿಆರ್. 8 ರಿಂದ 20 ರ ನಡುವೆ 633, ಟಿಪಿಆರ್. 20 ರಿಂದ 30 ರ ಮಧ್ಯೆ 208, ಟಿಪಿಆರ್. 30 ಮತ್ತು ಅದಕ್ಕಿಂತ ಹೆಚ್ಚಿನ 16 ಸ್ಥಳೀಯ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಹೆಚ್ಚಿಸಲಾಗುವುದು.
ತಿರುವನಂತಪುರದ ಅತಿಯನ್ನೂರ್, ಅಜೂರ್, ಕಥಿನಂಕುಲಂ, ಕರೋಡೆ, ಮನಂಪುರ, ಮಂಗಳಾಪುರ, ಪನವೂರ್, ಪೆÇೀತ್ತೆನ್‍ಕೋಡ್, ಎರ್ನಾಕುಳಂನ ಚಿತ್ತತುಕಾರ, ಪಾಲಕ್ಕಾಡ್ ನ ನಾಗಲಸೇರಿ, ನೆನ್ಮಾರಾ, ವಲ್ಲಾಪುಳಿ, ಮಲಪ್ಪುರಂ ನ ತಿರುನಾವಾಯ, ವಯನಾಡಿನ ಮುಪ್ಪನ್ನಾಡ್, ಕಾಸರಗೋಡಿನ ಬೇಡಡ್ಕ ಮತ್ತು ಮಧೂರು 30ಕ್ಕಿಂತ ಹೆಚ್ಚಿನ ಟೆಸ್ಟ್ ಪಾಸಿಟಿವಿಟಿ ಇರುವ ಪ್ರದೇಶಗಳಾಗಿವೆ.