ನಾಂದೇಡ್: ಮಹಾರಾಷ್ಟ್ರದ ನಾಂದೇಡ್ ನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿದ್ದು ಜಿಲ್ಲೆಯ 1,179 ಗ್ರಾಮಗಳು ಕೋವಿಡ್-19 ಮುಕ್ತವಾಗಿವೆ.
ಕೋವಿಡ್-19 ಎರಡನೇ ಅಲೆಯಲ್ಲಿ 271 ಗ್ರಾಮಗಳಲ್ಲಿ ಒಂದೇ ಒಂದು ಕೊರೋನಾ ಪ್ರಕರಣವೂ ವರದಿಯಾಗದೇ ಇರುವುದು ಗಮನಾರ್ಹ ಅಂಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರೆಗೂ ನಾಂದೇಡ್ ನಲ್ಲಿ 90,000 ಕೊರೋನಾ ಪಾಸಿಟೀವ್ ಪ್ರಕರಣಗಳು ವರದಿಯಾಗಿದ್ದು, 1,800 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,604 ಗ್ರಾಮಗಳಿದ್ದು, ಈ ಪೈಕಿ 1,179 ಗ್ರಾಮಗಳು ಕೋವಿಡ್-19 ನಿಂದ ಮುಕ್ತಗೊಂಡಿದ್ದು, ಜೂ.04 ರವರೆಗೆ ಈ ಪ್ರದೇಶಗಳಲ್ಲಿ ಒಂದೇ ಒಂದೂ ಕೋವಿಡ್-19 ಪ್ರಕರಣಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಾಂದೇಡ್ ನ ಜಿಲ್ಲಾ ಪರಿಷತ್ ಸಿಇಒ ವರ್ಷ ಠಾಕೂರ್ ಕೊರೋನಾ ನಿಯಂತ್ರಣ ಸಾಧ್ಯವಾಗಿದ್ದು, ಜಿಲ್ಲಾಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಿಲ್ಲಾಡಳಿತದ ಸದಸ್ಯರು ಸೇರಿದಂತೆ ತಂಡದ ಶ್ರಮದಿಂದ ಸಾಧ್ಯ ಎಂದು ಹೇಳಿದ್ದಾರೆ.
ಗ್ರಾಮಸ್ಥರೂ ಸಹ ಕೊರೋನಾ ನಿಯಂತ್ರಣಕ್ಕೆ ಕೊಡುಗೆ ನೀಡಿದ್ದಾರೆ ಎಂದು ವರ್ಷ ಠಾಕೂರ್ ಮಾಹಿತಿ ನೀಡಿದ್ದು, ಕೋವಿಡ್-19 ಇನ್ನೂ ಮುಗಿದಿಲ್ಲ ಆದ್ದರಿಂದ ಎಲ್ಲರೂ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ.