HEALTH TIPS

ಲಾಕ್‍ಡೌನ್: 12 ಮತ್ತು 13 ರಂದು ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಂತ್ರಣ; ಸ್ಟೇಷನರಿ, ಆಭರಣಗಳು, ಪಾದರಕ್ಷೆಗಳ ಶೋ ರೂಂಗಳು, ಬಟ್ಟೆ ಅಂಗಡಿಗಳು ಮತ್ತು ಆಪ್ಟಿಕಲ್‍ಗಳಂತಹ ಅಂಗಡಿಗಳು ಜೂನ್ 11 ರಂದು ಒಂದು ದಿನ ತೆರೆಯಲು ಸೂಚನೆ

                                       

                ತಿರುವನಂತಪುರ: ಕೋವಿಡ್ ವಿಸ್ತರಣೆ ನಿರೀಕ್ಷೆಗಳಿಗಿಂತ ಕಡಿಮೆಯಾಗದಿರುವುದರಿಂದ ರಾಜ್ಯದಲ್ಲಿ ಪ್ರಸ್ತುತ ಲಾಕ್‍ಡೌನ್ ನಿರ್ಬಂಧಗಳನ್ನು ಜೂನ್ 16 ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ 12 ಮತ್ತು 13 ರಂದು (ಶನಿವಾರ ಮತ್ತು ಭಾನುವಾರ) ಕಟ್ಟುನಿಟ್ಟಿನ ನಿಯಂತ್ರಣಗಳೊಂದಿಗೆ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಕೋವಿಡ್ ಪರಿಶೀಲನಾ ಸಭೆಯಲ್ಲಿ ಹೇಳಿದರು.

                ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಗಳು, ಉದ್ಯಮಕ್ಕೆ ಕಚ್ಚಾ ವಸ್ತುಗಳು (ಪ್ಯಾಕೇಜಿಂಗ್ ಸೇರಿದಂತೆ) ಮತ್ತು ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಜೂನ್ 16 ರವರೆಗೆ ಪರವಾನಗಿ ನೀಡಲಾಗುತ್ತದೆ. ಬ್ಯಾಂಕುಗಳು ಈಗಿರುವಂತೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಕಾರ್ಯನಿರ್ವಹಿಸಲಿವೆ. 

                  ಸ್ಟೇಷನರಿ, ಆಭರಣಗಳ ಅಂಗಡಿ, ಪಾದರಕ್ಷೆಗಳ ಶೋ ರೂಂಗಳು, ಬಟ್ಟೆ ಅಂಗಡಿಗಳು ಮತ್ತು ಆಪ್ಟಿಕಲ್ ಗಳಂತಹ ಅಂಗಡಿಗಳಿಗೆ ಜೂನ್ 11 ರಂದು ಒಂದು ದಿನ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.

                 ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ನಿಗಮಗಳು ಮತ್ತು ಆಯೋಗಗಳು ಜೂನ್ 17 ರಿಂದ 50 ಪ್ರತಿಶತದಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ನಿರ್ವಹಣೆ ಕಾರ್ಯಗಳಿಗಾಗಿ ಜೂನ್ 11 ರಂದು ಮಾತ್ರ ವಾಹನ ಶೋ ರೂಂಗಳನ್ನು ತೆರೆಯಬಹುದಾಗಿದೆ. ಇತರ ಚಟುವಟಿಕೆಗಳು ಮತ್ತು ಮಾರಾಟಗಳನ್ನು ಅನುಮತಿಸಲಾಗುವುದಿಲ್ಲ.

               ನೀಟ್ ಪರೀಕ್ಷೆಗೆ ಅಗತ್ಯವಾದ ಪ್ರಮಾಣ ಪತ್ರಗಳಿಗೆ ಕಂದಾಯ ಕಚೇರಿಗಳಿಗೆ ಪ್ರಮಾಣಪತ್ರಗಳನ್ನು ಇ-ಜಿಲ್ಲಾ ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪರೀಕ್ಷೆಗಳ ಬಳಿಕ ಪ್ರಮಾಣಪತ್ರಗಳನ್ನು ಪಡೆದರೆ ಸಾಕು. ಎಲ್ಲಾ ಪರೀಕ್ಷೆಗಳು ಜೂನ್ 16 ರ ನಂತರವೇ ಪ್ರಾರಂಭವಾಗಲಿದೆ ಎಂದು ಸಿಎಂ ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries