ತಿರುವನಂತಪುರ: ರಾಜ್ಯದಲ್ಲಿ ಇಂದು 12,118 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 1522, ಎರ್ನಾಕುಳಂ 1414, ಮಲಪ್ಪುರಂ 1339, ತ್ರಿಶೂರ್ 1311, ಕೊಲ್ಲಂ 1132, ಕೋಝಿಕೋಡ್ 1054, ಪಾಲಕ್ಕಾಡ್ 921, ಆಲಪ್ಪುಳ 770, ಕಾಸರಗೋಡು 577, ಕೊಟ್ಟಾಯಂ 550, ಕಣ್ಣೂರು 535, ಇಡುಕ್ಕಿ 418, ಪತ್ತನಂತಿಟ್ಟು 345, ವಯನಾಡ್ 230 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,13,629 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 10.66 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,26,20,276 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಇಂದು, ಕೋವಿಡ್ ಬಾಧಿಸಿ 118 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 12,817 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ನಿರ್ಣಯ ಮಾಡಿದವರಲ್ಲಿ 59 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,394 ಮಂದಿ ಜನರಿಗೆ ಸೋಂಕು ತಗುಲಿತು. 599 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1426, ಎರ್ನಾಕುಳಂ 1372, ಮಲಪ್ಪುರಂ 1291, ತ್ರಿಶೂರ್ 1304, ಕೊಲ್ಲಂ 1121, ಕೋಝಿಕೋಡ್ 1035, ಪಾಲಕ್ಕಾಡ್ 543, ಆಲಪ್ಪುಳ 761, ಕಾಸರಗೋಡು 568, ಕೊಟ್ಟಾಯಂ 519, ಕಣ್ಣೂರು 487, ಇಡುಕ್ಕಿ 411, ಪತ್ತನಂತಿಟ್ಟು 332, ವಯನಾಡ್ 224 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು ಅರವತ್ತಾರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 14, ಪಾಲಕ್ಕಾಡ್ 10, ತಿರುವನಂತಪುರ 9, ಕಾಸರಗೋಡು 7, ಪತ್ತನಂತಿಟ್ಟು 6, ಕೊಲ್ಲಂ, ಎರ್ನಾಕುಳಂ ತಲಾ 5, ತ್ರಿಶೂರ್ 4, ಕೊಟ್ಟಾಯಂ, ವಯನಾಡ್ ತಲಾ 2, ಮಲಪ್ಪುರಂ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,124 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1451, ಕೊಲ್ಲಂ 1108, ಪತ್ತನಂತಿಟ್ಟು 481, ಆಲಪ್ಪುಳ 672, ಕೊಟ್ಟಾಯಂ 752, ಇಡುಕಿ 461, ಎರ್ನಾಕುಳಂ 1174, ತ್ರಿಶೂರ್ 1194, ಪಾಲಕ್ಕಾಡ್ 1031, ಮಲಪ್ಪುರಂ 1006, ಕೊಝಿಕೋಡ್ 821, ವಯನಾಡ್ 177, ಕಣ್ಣೂರು 460, ಕಾಸರಗೋಡು 336 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,01,102 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,63,616 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,96,863 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,70,565 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,298 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1943 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಟಿಪಿಆರ್ ಆಧಾರಿತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿÀ ನಿನ್ನೆಯಂತೆಯೇ ವ್ಯವಸ್ಥೆ ಮುಂದುವರಿಯುವುದು. ಟಿಪಿಆರ್ 8 ಕೆಳಗೆ 313, ಟಿಪಿಆರ್. 8 ರಿಂದ 16 ರ ನಡುವೆ 545, ಟಿಪಿಆರ್. 16 ರಿಂದ 24 ರ ನಡುವೆ 152, ಟಿಪಿಆರ್. 24 ಕ್ಕಿಂತ ಹೆಚ್ಚಿನ 24 ಸ್ಥಳೀಯಾಡಳಿತ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ.