HEALTH TIPS

ರಾಜ್ಯದಲ್ಲಿ ಇಂದು 12,246 ಮಂದಿಗೆ ಸೋಂಕು ಪತ್ತೆ: 13,536 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ.11.76

                   ತಿರುವನಂತಪುರ: ಕೇರಳದಲ್ಲಿ ಇಂದು 12,246 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 1702, ಕೊಲ್ಲಂ 1597, ತಿರುವನಂತಪುರ 1567, ತ್ರಿಶೂರ್ 1095, ಮಲಪ್ಪುರಂ 1072, ಪಾಲಕ್ಕಾಡ್ 1066, ಆಲಪ್ಪುಳ  887, ಕೋಝಿಕೋಡ್ 819, ಕಣ್ಣೂರು 547, ಇಡುಕ್ಕಿ 487, ಪತ್ತನಂತಿಟ್ಟು 480, ಕೋಟ್ಟಯಂ 442, ಕಾಸರಗೋಡು 301, ವಯನಾಡ್ 184 ಎಂಬಂತೆ ಸೋಂಕು ಬಾಧಿಸಿದೆ. 

                  ಕಳೆದ 24 ಗಂಟೆಗಳಲ್ಲಿ 1,04,120 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ 11.76 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,13,93,618 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

              ಕಳೆದ 24 ಗಂಟೆಗಳಲ್ಲಿ  166 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 11,508 ಕ್ಕೆ ಏರಿಕೆಯಾಗಿದೆ. 

         ಇಂದು, ಸೋಂಕು ಪತ್ತೆಯಾದವರಲ್ಲಿ 85 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,459 ಮಂದಿ ಜನರಿಗೆ ಸೋಂಕು ತಗುಲಿತು. 633 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 1653, ಕೊಲ್ಲಂ 1586, ತಿರುವನಂತಪುರ 1463, ತ್ರಿಶೂರ್ 1077, ಮಲಪ್ಪುರಂ 1028, ಪಾಲಕ್ಕಾಡ್ 661, ಆಲಪ್ಪುಳ 884, ಕೋಝಿಕೋಡ್ 807, ಕಣ್ಣೂರು 489, ಇಡುಕ್ಕಿ 473, ಪತ್ತನಂತಿಟ್ಟು 461, ಕೊಟ್ಟಾಯಂ 412, ಕಾಸರಗೋಡು 291, ವಯನಾಡ್ 174 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.  

           ಇಂದು 69 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಪತ್ತನಂತಿಟ್ಟು 14, ಕಣ್ಣೂರು 10, ಎರ್ನಾಕುಳಂ, ಕಾಸರಗೋಡು 8, ತಿರುವನಂತಪುರ, ಕೊಲ್ಲಂ ತಲಾ 7, ತ್ರಿಶೂರ್ 6, ಪಾಲಕ್ಕಾಡ್ 3, ಮಲಪ್ಪುರಂ, ಕೋಝಿಕೋಡ್ ತಲಾ 2, ಕೊಟ್ಟಾಯಂ ಮತ್ತು ವಯನಾಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಉಂಟಾಗಿದೆ.

              ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,536 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1451, ಕೊಲ್ಲಂ 598, ಪತ್ತನಂತಿಟ್ಟು 541, ಆಲಪ್ಪುಳ 1054, ಕೊಟ್ಟಾಯಂ 605, ಇಡುಕ್ಕಿ 518, ಎರ್ನಾಕುಳಂ 2027, ತ್ರಿಶೂರ್ 837, ಪಾಲಕ್ಕಾಡ್ 1449, ಮಲಪ್ಪುರಂ 2351, ಕೊಝಿಕೋಡ್ 1117, ವಯನಾಡ್ 209, ಕಣ್ಣೂರು 580, ಕಾಸರಗೋಡು 199.  ಇದರೊಂದಿಗೆ 1,12,361 ಮಂದಿ ಜನರಿಗೆ ಸೋಂಕು  ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 26,23,904 ಮಂದಿ ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

               ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,06,437 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,77,212 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 29,225 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2161 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

               10 ಹೊಸ ಹಾಟ್‍ಸ್ಪಾಟ್‍ಗಳಿವೆ. ಇಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 889 ಹಾಟ್‍ಸ್ಪಾಟ್‍ಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries