ತಿರುವನಂತಪುರ: ಲಾಕ್‍ಡೌನ್ ನಿಬಂಧಗಳಲ್ಲಿ ಸಡಿಲಿಕೆ ಘೋಷಿಸಿರುವ ಮಧ್ಯೆ ಕೇರಳದಲ್ಲಿ ಇಂದು 12,469 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜ್ಯದ ಇಂದಿನ ಕೋವಿಡ್ ಮಾಹಿತಿಗಳು ಲಭ್ಯವಾಗಿದ್ದು, ಸೋಂಕು ಹರಡುವಿಕೆ ಇಳಿಕೆಯಲ್ಲಿದೆ.
ಕೋವಿಡ್ ಧನಾತ್ಮಕ ಪ್ರಕರಣಗಳು:
ಇಂದು ರಾಜ್ಯದಲ್ಲಿ 12,469 ಮಂದಿ ಜನರಿಗೆ ಸೋಂಕು ದೃಢಪಡಿಸಲಾಗಿದೆ. ತಿರುವನಂತಪುರ 1727, ಕೊಲ್ಲಂ 1412, ಎರ್ನಾಕುಳಂ 1322, ಮಲಪ್ಪುರಂ 1293, ತ್ರಿಶೂರ್ 1157, ಕೋಝಿಕೋಡ್ 968, ಪಾಲಕ್ಕಾಡ್ 957, ಆಲಪ್ಪುಳ 954, ಪತ್ತನಂತಿಟ್ಟು 588, ಕಣ್ಣೂರು 535, ಕೊಟ್ಟಾಯಂ 464, ಇಡುಕ್ಕಿ 417, ಕಾಸರಗೋಡು 416, ವಯನಾಡ್ 259 ಎಂಬಂತೆ ಸೋಂಕು ದೃಢೀಕರಿಸಲಾಗಿದೆ.
1,08,560 ಮಂದಿ ಚಿಕಿತ್ಸೆಯಲ್ಲಿ:
ಇಂದಿನ ವರೆಗೆ ರಾಜ್ಯಾದ್ಯಂತ 1,08,560 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 26,53,207 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. 60 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 18, ತಿರುವನಂತಪುರ 10, ಕೊಲ್ಲಂ, ತ್ರಿಶೂರ್ ತಲಾ 6, ಎರ್ನಾಕುಳಂ, ಕಾಸರಗೋಡು ತಲಾ 4, ಪತ್ತನಂತಿಟ್ಟು, ಪಾಲಕ್ಕಾಡ್, ವಯನಾಡ್ ತಲಾ 3, ಇಡುಕಿ 2 ಮತ್ತು ಆಲಪ್ಪುಳ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
1,14,894 ಮಾದರಿಗಳ ಪರೀಕ್ಷೆ:
ಕಳೆದ 24 ಗಂಟೆಗಳಲ್ಲಿ 1,14,894 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.85 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,16,21,033 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,83,823 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,55,596 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 28,227 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,492 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪರ್ಕ ಪ್ರಕರಣಗಳು:
ಸಂಪರ್ಕದ ಮೂಲಕ 11,700 ಮಂದಿ ಜನರಿಗೆ ಸೋಂಕು ತಗುಲಿತು. 617 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1595, ಕೊಲ್ಲಂ 1405, ಎರ್ನಾಕುಳಂ 1257, ಮಲಪ್ಪುರಂ 1261, ತ್ರಿಶೂರ್ 1135, ಕೋಝಿಕೋಡ್ 951, ಪಾಲಕ್ಕಾಡ್ 614, ಆಲಪ್ಪುಳ 947, ಪತ್ತನಂತಿಟ್ಟು 576, ಕಣ್ಣೂರು 474, ಕೊಟ್ಟಾಯಂ 437, ಇಡುಕ್ಕಿ 396, ಕಾಸರಗೋಡು 410, ವಯನಾಡ್ 242 ಎಂಬಂತೆ ಸೋಂಕು ಬಾಧಿಸಿದೆ. ಇಂದು, ಸೋಂಕು ಪತ್ತೆಯಾದವರಲ್ಲಿ 92 ಮಂದಿ ರಾಜ್ಯದ ಹೊರಗಿಂದ ಬಂದÀವರು.
ಇಂದು 88 ಮಂದಿ ಮೃತ:
ಇಂದು, ಕೋವಿಡ್ ಬಾಧಿಸಿದವರ ಪೈಕಿ 88 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 11,743 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಟಿಪಿಆರ್ ದರ ಶೇ. 30 ಕ್ಕಿಂತ ಹೆಚ್ಚಿರುವ 18 ಸ್ಥಳೀಯ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ಸಂಸ್ಥೆಗಳÀಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗುವುದು.
13,614 ಮಂದಿ ಗುಣಮುಖ:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,614 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1486, ಕೊಲ್ಲಂ 837, ಪತ್ತನಂತಿಟ್ಟು 417, ಆಲಪ್ಪುಳ 1079, ಕೊಟ್ಟಾಯಂ 831, ಇಡುಕ್ಕಿ 277, ಎರ್ನಾಕುಳಂ 1899, ತ್ರಿಶೂರ್ 1189, ಪಾಲಕ್ಕಾಡ್ 1428, ಮಲಪ್ಪುರಂ 1568, ಕೊಝಿಕೋಡ್ 947, ವಯನಾಡ್ 383, ಕಣ್ಣೂರು 700, ಕಾಸರಗೋಡು 573 ಎಂಬಂತೆ ಗುಣಮುಖರಾಗಿರುವರು.