ತಿರುವನಂತಪುರ: ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ರಾಜ್ಯದಲ್ಲಿ ಇಂದು 12617 ಜನರಿಗೆ ಕೋವಿಡ್ ದೃಢಪಟ್ಟಿದೆ. ರೋಗದ ಹರಡುವಿಕೆ ಕ್ಷೀಣಿಸುತ್ತಿದೆ. ಆದರೆ ನಿರೀಕ್ಷೆಯಂತೆ ನಿಧಾನವಾಗುತ್ತಿಲ್ಲ ಎಂದು ತಿಳಿಸಿದ್ದಾರೆ..
ರಾಜ್ಯದಲ್ಲಿ ಇಂದು 12,617 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 141 ಮಂದಿ ಜನರು ವೈರಸ್‍ಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,295 ಕ್ಕೆ ಏರಿಕೆಯಾಗಿದೆ.
ಕೋವಿಡ್ ರೋಗಿಗಳು ಜಿಲ್ಲಾವಾರು:
ಮಲಪ್ಪುರಂ 1603, ಕೊಲ್ಲಂ 1525, ಎರ್ನಾಕುಳಂ 1491, ತಿರುವನಂತಪುರ 1345, ತ್ರಿಶೂರ್ 1298, ಪಾಲಕ್ಕಾಡ್ 1204, ಕೊಝಿಕೋಡ್ 817, ಆಲಪ್ಪುಳ 740, ಕೊಟ್ಟಾಯಂ 609, ಕಣ್ಣೂರು 580, ಪತ್ತನಂತಿಟ್ಟು 441, ಕಾಸರಗೋಡು 430, ಇಡುಕ್ಕಿ 268, ವಯನಾಡ್ 266 ಎಂಬಂತೆ ಸೋಂಕು ಬಾಧಿಸಿದೆ.
ಪರೀಕ್ಷಿಸಿದ ಮಾದರಿಗಳು:
ಕಳೆದ 24 ಗಂಟೆಗಳಲ್ಲಿ 1,17,720 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 10.72 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 2,21,56,947 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಚೇತರಿಸಿಕೊಂಡವರು:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,730 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1212, ಕೊಲ್ಲಂ 1032, ಪತ್ತನಂತಿಟ್ಟು 526, ಆಲಪ್ಪುಳ 1043, ಕೊಟ್ಟಾಯಂ 716, ಇಡುಕ್ಕಿ 573, ಎರ್ನಾಕುಳಂ 1021, ತ್ರಿಶೂರ್ 1272, ಪಾಲಕ್ಕಾಡ್ 1391, ಮಲಪ್ಪುರಂ 1016, ಕೊಝಿಕೋಡ್ 992, ವಯನಾಡ್ 235, ಕಣ್ಣೂರು 322, ಕಾಸರಗೋಡು 379 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,00,437 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,16,284 ಮಂದಿ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಸಂಪರ್ಕದಿಂದ ಸೋಂಕು:
ಇಂದು, ಸೋಂಕು ಪತ್ತೆಯಾದವರಲ್ಲಿ 60 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 11,719 ಮಂದಿ ಜನರಿಗೆ ಸೋಂಕು ತಗುಲಿತು. 766 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1542, ಕೊಲ್ಲಂ 1516, ಎರ್ನಾಕುಳಂ 1454, ತಿರುವನಂತಪುರ 1251, ತ್ರಿಶೂರ್ 1288, ಪಾಲಕ್ಕಾಡ್ 670, ಕೋಝಿಕೋಡ್ 805, ಆಲಪ್ಪುಳ 734, ಕೊಟ್ಟಾಯಂ 583, ಕಣ್ಣೂರು 524, ಪತ್ತನಂತಿಟ್ಟು 426, ಕಾಸರಗೋಡು 416, ಇಡುಕ್ಕಿ 256, ವಯನಾಡ್ 254 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ನಿರೀಕ್ಷಣಾ ವಿವರ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,19,051 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,92,556 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,495 ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 1971 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ಇಂದು 72 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢ|ಪಟ್ಟಿದೆ. ಕಣ್ಣೂರು 15, ಕಾಸರಗೋಡು 10, ಎರ್ನಾಕುಳಂ, ತ್ರಿಶೂರ್ ತಲಾ 9, ಪತ್ತನಂತಿಟ್ಟು 6, ಕೊಲ್ಲಂ, ಪಾಲಕ್ಕಾಡ್, ವಯನಾಡ್ ತಲಾ 5, ತಿರುವನಂತಪುರ 4, ಇಡುಕ್ಕಿ 2, ಮಲಪ್ಪುರಂ ಮತ್ತು ಕೋಝಿಕ್ಕೋಡ್ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ಹೆಚ್ಚಿನ ಟಿಪಿಆರ್ ಹೊಂದಿರುವ ಪ್ರದೇಶಗಳು:
ಟಿಪಿಆರ್ ಆಧಾರಿತ ಪ್ರದೇಶಗಳು ಕೊನೆಯ ದಿನದಂತೆಯೇ ಮುಂದುವರಿಯುತ್ತವೆ. ಟಿಪಿಆರ್ 8 ಕೆಳಗೆ 178, ಟಿಪಿಆರ್. 8 ರಿಂದ 20 ರ ನಡುವೆ 633, ಟಿಪಿಆರ್. 20 ರಿಂದ 30ರ ನಡುವೆ 208, ಟಿಪಿಆರ್. 30 ಮತ್ತು ಅದಕ್ಕಿಂತ ಹೆಚ್ಚಿನ 16 ಸ್ಥಳೀಯಾಡಳಿತ ಸಂಸ್ಥೆಗಳು ಇವೆ.