ತಿರುವನಂತಪುರ: ರಾಜ್ಯದಲ್ಲಿ ಇಂದು 12,787 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 1706, ತಿರುವನಂತಪುರ 1501, ಮಲಪ್ಪುರಂ 1321, ಪಾಲಕ್ಕಾಡ್ 1315, ಕೊಲ್ಲಂ 1230, ತ್ರಿಶೂರ್ 1210, ಕೋಝಿಕೋಡ್ 893, ಆಲಪ್ಪುಳ 815, ಕಣ್ಣೂರು 607, ಕಾಸರಗೋಡು 590, ಕೊಟ್ಟಾಯಂ 547, ಪತ್ತನಂತಿಟ್ಟು 427, ಇಡುಕ್ಕಿ 314, ವಯನಾಡ್ 311 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,24,326 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.29 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,22,81,273 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 150 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,445 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ನಿರ್ಣಯ ಮಾಡಿದವರಲ್ಲಿ 55 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,992 ಮಂದಿ ಜನರಿಗೆ ಸೋಂಕು ತಗುಲಿತು. 675 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 1664, ತಿರುವನಂತಪುರ 1423, ಮಲಪ್ಪುರಂ 1267, ಪಾಲಕ್ಕಾಡ್ 871, ಕೊಲ್ಲಂ 1222, ತ್ರಿಶೂರ್ 1203, ಕೋಝಿಕೋಡ್ 876, ಆಲಪ್ಪುಳ 804, ಕಣ್ಣೂರು 543, ಕಾಸರಗೋಡು 577, ಕೊಟ್ಟಾಯಂ 524, ಪತ್ತನಂತಿಟ್ಟು 412, ಇಡುಕ್ಕಿ 307, ವಯನಾಡ್ 299 ಎಂಬಂತೆ ಸಂಪರ್ಕದಿಂದ ಸೋಂಕು ಕಂಡುಬಂದಿದೆ.
ಇಂದು 65 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಾಸರಗೋಡು 10, ಪತ್ತನಂತಿಟ್ಟು, ಕಣ್ಣೂರು, ವಯನಾಡ್ ತಲಾ 9, ಪಾಲಕ್ಕಾಡ್ 8, ಕೊಲ್ಲಂ 5, ತಿರುವನಂತಪುರ 4, ಕೋಝಿಕ್ಕೋಡ್ 3, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ ತಲಾ 2, ಆಲಪ್ಪುಳ ಮತ್ತು ಇಡುಕಿ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,683 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1623, ಕೊಲ್ಲಂ 2168, ಪತ್ತನಂತಿಟ್ಟು 339, ಆಲಪ್ಪುಳ 814, ಕೊಟ್ಟಾಯಂ 626, ಇಡುಕ್ಕಿ 372, ಎರ್ನಾಕುಳಂ 1984, ತ್ರಿಶೂರ್ 1303, ಪಾಲಕ್ಕಾಡ್ 1280, ಮಲಪ್ಪುರಂ 1092, ಕೋಝಿಕೋಡ್ 941, ವಯನಾಡ್ 335, ಕಣ್ಣೂರು 521, ಕಾಸರಗೋಡು 285 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 99,390 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,29,967 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,12,116 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,85,742 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,374 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,492 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ ಆಧಾರಿತ ಪ್ರದೇಶಗಳು ಹಿಂದಿನ ದಿನದಂತೆಯೇ ಮುಂದುವರಿಯುತ್ತವೆ. ಟಿಪಿಆರ್ 8 ಕೆಳಗೆ 178, ಟಿಪಿಆರ್. 8 ರಿಂದ 20 ರ ನಡುವೆ 633, ಟಿಪಿಆರ್. 20 ರಿಂದ 30ರ ಮಧ್ಯೆ 208, ಟಿಪಿಆರ್. 30 ಮತ್ತು ಅದಕ್ಕಿಂತ ಹೆಚ್ಚಿನ ಶೇಕಡಾ ಇರುವ 16 ಸ್ಥಳೀಯ ಸಂಸ್ಥೆಗಳು ಇವೆ.