ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯ ಕಾರಣದಿಂದ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಈ ವಿಷಯ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಇದಕ್ಕೆ ವಿದ್ಯಾರ್ಥಿಯೊಬ್ಬ ನೀಡಿದ ಪ್ರತಿಕ್ರಿಯೆ ಇದೀಗ ವೈರಲ್ ಆಗಿದೆ.
"ಸರ್ ದಯಮಾಡಿ ಫೇರ್ ವೆಲ್ ಕಾರ್ಯಕ್ರಮಕ್ಕೆ ಅನುಮತಿ ಕೊಡಿ ಏಕೆಂದರೆ ನಾನು 12ನೇ ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡಲು ಬಯಸುತ್ತೇನೆ" ಎಂದು ವಿದ್ಯಾರ್ಥಿಯೊಬ್ಬ ಮಾಡಿರುವ ಕಮೆಂಟ್ ಇದೀಗ ವೈರಲ್ ಆಗಿದೆ.
ಕುಕಿ ಅಗರ್ವಾಲ್ ಎಂಬ ವಿದ್ಯಾರ್ಥಿ ಈ ಕಮೆಂಟ್ ಮಾಡಿದ್ದು ಇದು 338 ರಿಟ್ವೀಟ್‌ಗಳು ಮತ್ತು 1,400 ಲೈಕ್‌ಗಳನ್ನು ಗಳಿಸಿದೆ. ನೆಟಿಜನ್‌ಗಳು ಹಾಸ್ಯ ಮತ್ತು ಮೀಮ್ಸ್ ಗಳೊಂದಿಗೆ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ನೇಹಾ ಮತ್ತು ಟ್ವಿಟರ್ ಬಳಕೆದಾರನ ನಡುವಿನ ವಾಟ್ಸಾಪ್ ಸಂಭಾಷಣೆಯಂತೆ ಕಾಣುವ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಸಂಭಾಷಣೆ ಹೇಳಿದಂತೆ "ನನ್ನನ್ನು ಸೀರೆಯಲ್ಲಿ ನೋಡಲು ಬಯಸಿದರೆ ನೀನು ನನಗೆ ಹೇಳಬೇಕಿತ್ತು. ಈಗ ಎಲ್ಲರೂ ನನಗೆ ಸಂದೇಶ ಕಳುಹಿಸುತ್ತಿದ್ದಾರೆ" ಎಂದು ನೇಹಾ ಹೇಳಿದ್ದಾಳೆ. ಅದಕ್ಕೆ ಕುಕಿ "ಇದು ವೈರಲ್ ಆಗುತ್ತದೆ ಎಂದು ನನಗೆ ಹೇಗೆ ಗೊತ್ತಿತ್ತು?" ಎಂದಿದ್ದಾನೆ.
"ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ" ಎಂಬ ಕಾರಣ ನೀಡಿ ಪ್ರಧಾನಿ ಮೋದಿ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರದ ಬಗ್ಗೆ ಪ್ರಕಟಿಸಿದ್ದಾರೆ. ಕೋವಿಡ್ -19 ರ ಎರಡನೇ ಅಲೆಯಿಂದ ದೇಶವು ತೀವ್ರವಾಗಿ ತತ್ತರಿಸಿದೆ ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು ಬೋರ್ಡ್ ಪರೀಕ್ಷೆಗಳನ್ನು ನಡೆಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಧಾನ ಮಂತ್ರಿಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ.