ನವದೆಹಲಿ: 12 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಎರಡೂ ಪ್ರಸ್ತಾಪಿಸಿರುವ ಮೌಲ್ಯಮಾಪನ ಸೂತ್ರದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಕೋವಿಡ್-19 ಸಾಂಕ್ರಾಮಿಕ ಕಾರಣದಿಂದಾಗಿ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕ ಸಂಘಟನೆಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ತಿರಸ್ಕರಿಸಿದ ಉನ್ನತ ನ್ಯಾಯಾಲಯ, ಮೌಲ್ಯಮಾಪನ ಯೋಜನೆಯ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಎರಡನೇಯ ಊಹಾತ್ಮಕ ವಿಧಾನವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಿಬಿಎಸ್ ಇ ಮತ್ತು ಸಿಐಎಸ್ ಸಿಇ ಪ್ರಸ್ತಾಪಿಸಿರುವ ಯೋಜನೆಯನ್ನು ಒಪ್ಪಿಕೊಳ್ಳುವುದಾಗಿ ನ್ಯಾಯಾಧೀಶರಾದ ಎ.ಎಂ. ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠ ಹೇಳಿದೆ.
ಸಿಬಿಎಸ್ ಇ, ಸಿಐಎಸ್ ಸಿಇ ಮತ್ತು ರಾಜ್ಯ ಬೋರ್ಡ್ ಗಳಿಂದ ಫಲಿತಾಂಶ ಪ್ರಕರಣ ನಂತರ ಆಡ್ಮೀಷನ್ ಗೆ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಯುಜಿಸಿ ನಿರ್ದೇಶನ ನೀಡಬೇಕೆಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಪ್ರತಿಪಾದನೆಯನ್ನು ನ್ಯಾಯಪೀಠ ಗಮನಿಸಿತು.
ಪರೀಕ್ಷೆ ರದ್ದುಗೊಳಿಸುವ ಸಿಬಿಎಸ್ ಇ ಮತ್ತು ಐಸಿಎಸ್ ಇ ನಿರ್ಧಾರವನ್ನು ಪ್ರಶ್ನಿಸಿ, ಉತ್ತರ ಪ್ರದೇಶ ಪೋಷಕರ ಅಸೋಸಿಯೇಷನ್ ಮತ್ತು ಖಾಸಗಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸಿತು.