ಅರುಣಾಚಲ ಪ್ರದೇಶ: 'ಭಾರತ ವಿಶ್ವಶಾಂತಿಯನ್ನು ಪ್ರತಿಪಾದಿಸುತ್ತದೆ. ಆದರೆ, ದಾಳಿ ನಡೆದಲ್ಲಿ ಅದಕ್ಕೆ ತಕ್ಕ ಪ್ರತಿರೋಧ ಒಡ್ಡಲು ಸಜ್ಜಾಗಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದರು.
12 ನೂತನ ರಸ್ತೆಗಳನ್ನು ಬಳಕೆಗೆ ಮುಕ್ತಗೊಳಿಸಿದ ಅವರು, ಗಡಿ ಭಾಗದಲ್ಲಿ ಶಾಂತಿಗೆ ಭಂಗ ಉಂಟುಮಾಡುವ ಯಾವುದೇ ಶಕ್ತಿಗಳು ಅದರ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾದಿತು ಎಂದು ಎಚ್ಚರಿಸಿದರು.
ನೂತನ ರಸ್ತೆಗಳು ಸಂಪರ್ಕ ವ್ಯವಸ್ಥೆ ಉತ್ತಮಪಡಿಸುವ ಜೊತೆಗೆ ಅಂತರರಾಷ್ಟ್ರೀಯ ಗಡಿಯಲ್ಲಿ ಸೇನೆಯ ತುಕಡಿಗಳು ತ್ವರಿತಗತಿಯಲ್ಲಿ ಕ್ರಮಿಸಲು ಸಹಾಯಕವಾಗಿವೆ ಎಂದರು. ವಿಶ್ವದರ್ಜೆ ಗುಣಮಟ್ಟದ ರಸ್ತೆಗಳನ್ನು ಗಡಿ ರಸ್ತೆ ಅಭಿವೃದ್ಧಿ ಸಂಸ್ಥೆಯು ನಿರ್ಮಾಣ ಮಾಡಿದೆ ಎಂದು ಶ್ಲಾಘಿಸಿದರು.