ಕೊಚ್ಚಿ: ಕೇರಳಕ್ಕೆ ನಾಲ್ಕನೇ ಆಕ್ಸಿಜನ್ ಎಕ್ಸ್‍ಪ್ರೆಸ್ ನಿನ್ನೆ ಕೊಚ್ಚಿಗೆ ತಲುಪಿದೆ. ನಾಲ್ಕನೇ ಆಕ್ಸಿಜನ್ ಎಕ್ಸ್‍ಪ್ರೆಸ್ ರೈಲು ಟ್ಯಾಂಕರ್ ಒಡಿಶಾದ ರೂರ್ಕೆಲಾದಿಂದ ವೈದ್ಯಕೀಯ ಆಮ್ಲಜನಕದೊಂದಿಗೆ ಕೊಚ್ಚಿ ವಲ್ಲರ್‍ಪದಂ ಗೆ ಆಗಮಿಸಿತು. ಏಳು ಕ್ರಯೋಜೆನಿಕ್ ಟ್ಯಾಂಕರ್‍ಗಳು 133.52 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತು ತಂದವು. ಆಕ್ಸಿಜನ್ ಎಕ್ಸ್‍ಪ್ರೆಸ್ ಭಾನುವಾರ ಒಡಿಶಾದಿಂದ ಹೊರಟಿತ್ತು. ಇದರೊಂದಿಗೆ ಆಕ್ಸಿಜನ್ ಎಕ್ಸ್‍ಪ್ರೆಸ್ ಕೇರಳಕ್ಕೆ ತಲುಪಿಸಿದ ಒಟ್ಟು ಆಮ್ಲಜನಕ 513.72 ಮೆ.ಟನ್ ಆಗಿ ಏರಿಕೆಯಾಗಿದೆ.
ಈ ಮೊದಲು ಮೂರು ಆಕ್ಸಿಜನ್ ಎಕ್ಸ್‍ಪ್ರೆಸ್ ರೈಲುಗಳು 380.2 ಮೆಟ್ರಿಕ್ ಟನ್ ಆಮ್ಲಜನಕವನ್ನು ವಲ್ಲರ್ ಪಡಮ್ ಕಂಟೇನರ್ ಟರ್ಮಿನಲ್‍ಗೆ ತಲುಪಿಸಿದ್ದವು. ಕಳೆದ ತಿಂಗಳು 16 ರಂದು 117.9 ಮೆಟ್ರಿಕ್ ಟನ್, 22 ರಂದು 128.67 ಮೆಟ್ರಿಕ್ ಟನ್ ಮತ್ತು 27 ರಂದು 133.64 ಮೆಟ್ರಿಕ್ ಟನ್ ಆಕ್ಸಿಜನ್ ಗಳನ್ನು ತಲಪಿಸಲಾಗಿತ್ತು.
ನಿನ್ನೆ ಕೊಚ್ಚಿಗೆ ತಲುಪಿದ ಆಮ್ಲಜನಕ ಅಗ್ನಿಶಾಮಕ ಮತ್ತು ಪಾರುಗಾಣಿಕಾ ತಂಡ ಮತ್ತು ರೈಲ್ವೆಯ ಸಹಾಯದಿಂದ ಅವುಗಳನ್ನು ಸಣ್ಣ ಟ್ಯಾಂಕರ್‍ಗಳಿಗೆ ಪರಿವರ್ತಿಸಿ ವಿವಿಧ ಜಿಲ್ಲೆಗಳಿಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ.