ತಿರುವನಂತಪುರ: ಕೇರಳದಲ್ಲಿ ಇಂದು 13,550 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1708, ಕೊಲ್ಲಂ 1513, ತ್ರಿಶೂರ್ 1483, ಎರ್ನಾಕುಳಂ 1372, ಪಾಲಕ್ಕಾಡ್ 1330, ತಿರುವನಂತಪುರ 1255, ಕೋಝಿಕ್ಕೋಡ್ 1197, ಆಲಪ್ಪುಳ 772, ಕಣ್ಣೂರು 746, ಕೊಟ್ಟಾಯಂ 579, ಕಾಸರಗೋಡು 570, ಪತ್ತನಂತಿಟ್ಟು 473, ಇಡುಕ್ಕಿ 284, ವಯನಾಡ್ 268 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,23,225 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.11 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,29,32,942 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 104 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ ಇಂದಿಗೆ 13,093 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 47 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 12,660 ಮಂದಿ ಜನರಿಗೆ ಸೋಂಕು ತಗುಲಿತು. 753 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಮಲಪ್ಪುರಂ 1668, ಕೊಲ್ಲಂ 1505, ತ್ರಿಶೂರ್ 1479, ಎರ್ನಾಕುಳಂ 1346, ಪಾಲಕ್ಕಾಡ್ 834, ತಿರುವನಂತಪುರ 1128, ಕೋಝಿಕೋಡ್ 1179, ಆಲಪ್ಪುಳ 742, ಕಣ್ಣೂರು 672, ಕೊಟ್ಟಾಯಂ 555, ಕಾಸರಗೋಡು 558, ಪತ್ತನಂತಿಟ್ಟು 455, ಇಡುಕ್ಕಿ 278, ವಯನಾಡ್ 261 ಎಂಬಂತೆ ಸೋಂಕು ಬಾಧಿಸಿದೆ.
ಇಂದು 90 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 30, ಪಾಲಕ್ಕಾಡ್ 12, ಕಾಸರಗೋಡು 9, ತಿರುವನಂತಪುರ, ಕೊಲ್ಲಂ ತಲಾ 7, ಪತ್ತನಂತಿಟ್ಟು 6, ಕೊಟ್ಟಾಯಂ, ಕೋಝಿಕೋಡ್ ತಲಾ 4, ಎರ್ನಾಕುಳಂ, ವಯನಾಡ್ ತಲಾ 3, ಇಡುಕಿ, ತ್ರಿಶೂರ್ 2 ಮತ್ತು ಆಲಪ್ಪುಳ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 10,283 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1341, ಕೊಲ್ಲಂ 732, ಪತ್ತನಂತಿಟ್ಟು 481, ಆಲಪ್ಪುಳ 705, ಕೊಟ್ಟಾಯಂ 447, ಇಡುಕ್ಕಿ 310, ಎರ್ನಾಕುಳಂ 1062, ತ್ರಿಶೂರ್ 1162, ಪಾಲಕ್ಕಾಡ್ 1005, ಮಲಪ್ಪುರಂ 923, ಕೋಝಿಕೋಡ್ 913, ವಯನಾಡ್ 193, ಕಣ್ಣೂರು 594, ಕಾಸರಗೋಡು 415 ಎಂಬಂತೆ ಸೋಂಕು ಬಾಧಿಸಿದೆ. ಇದರೊಂದಿಗೆ 99,174 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,97,779 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,88,083 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,62,902 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 25,181 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 1979 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ ಆಧಾರಿತ ಸ್ಥಳೀಯಾಡಳಿತ ಪ್ರದೇಶಗಳಲ್ಲಿ ನಿನ್ನೆಯಂತೆಯೇ ಮುಂದುವರೆದಿದೆ. ಟಿಪಿಆರ್ 8 ಕೆಳಗೆ 313, ಟಿಪಿಆರ್. 8 ರಿಂದ 16 ರ ನಡುವೆ 545, ಟಿಪಿಆರ್. 16 ರಿಂದ 24 ರ ನಡುವೆ 152, ಟಿಪಿಆರ್. 24 ಮತ್ತು ಅದಕ್ಕಿಂತ ಮೇಲೆ 24 ಸ್ಥಳೀಯಾಡಳಿತ ಸಂಸ್ಥೆಗಳು ಇವೆ.