ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಾರ್ವಜನಿಕ ಶಿಕ್ಷಣಾಲಯಗಳಲ್ಲಿ ಈ ವರ್ಷ ಒಂದನೇ ತರಗತಿಗೆ 14327 ಮಂದಿ ಪುಟಾಣಿಗಳು ಪ್ರವೇಶಾತಿ ಪಡೆದಿದ್ದಾರೆ.
ಇವರಲ್ಲಿ 7618 ಮಂದಿ ಹುಡುಗರು, 5226 ಮಂದಿ ಹುಡುಗಿಯರು. ಸರಕಾರಿ, ಅನುದಾನಿತ, ಎಂ.ಜಿ.ಎಲ್.ಸಿ. ವಲಯಗಳಲ್ಲಿ ಒಟ್ಟು 560 ಶಾಲೆಗಳು ಕಾಸರಗೋಡು ಜಿಲ್ಲೆಯಲ್ಲಿವೆ. 22 ಶಾಲೆಗಳ ಈ ಕ್ಷಣದ ವರೆಗಿನ ಗಣನೆ ಇದಾಗಿದ್ದು, ಅಂತಿಮ ಗಣನೆ ಇನ್ನೂ ಲಭಿಸಬೇಕಿದೆ. 6ನೇ ಚಟುವಟಿಕೆಯ ದಿನ ಅಂತಿಮ ಗಣನೆ ಲಭಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾ ಶಿಕ್ಷಣ ಸಹಾಯಕ ನಿರ್ದೇಶಕಿ ಕೆ.ವಿ.ಪುಷ್ಪಾ ಅಭಿಪ್ರಾಯಪಟ್ಟರು.
14599 ಮಕ್ಕಳು ಕಳೆದ ಶೈಕ್ಷಣಿಕ ವರ್ಷ ಕಾಸರಗೋಡು ಜಿಲ್ಲೆಯ ಸಾರ್ವಜನಿಕ ಶಿಕ್ಷಣಾಲಯಗಳ ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದರು.
ಇತರ ಶಾಲೆಗಳಿಂದ ಸಾರ್ವಜನಿಕ ಶಿಕ್ಷಣಾಲಯಗಳಿಗೆ ಅನುದಾನ ರಹಿತ ಮತ್ತು ಇತರ ರಾಜ್ಯಗಳ ಪಠ್ಯಪದ್ಧತಿ ಶಾಲೆಗಳ 2 ರಿಂದ 10ನೇ ತರಗತಿ ವರೆಗಿನ 4356 ಮಂದಿ ಮಕ್ಕಳು ಸಾರ್ವಜನಿಕ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಸಹಾಯಕ ನಿರ್ದೇಶಕಿ ಕೆ.ವಿ.ಪುಷ್ಪಾ ತಿಳಿಸಿದರು.
8ನೇ ತರಗತಿಗೆ ಅತ್ಯಧಿಕ ಪ್ರಮಾಣದಲ್ಲಿ ಮಕ್ಕಳು (858 ಮಂದಿ) ಸಾರ್ವಜನಿಕ ಶಾಲೆಗಳಿಗೆ ಪ್ರವೇಶಾತಿ ಪಡೆದರು.5ನೇ ತರಗತಿಗೆ ಈ ಸಾಲಿನಲ್ಲಿ 836 ಮಂದಿ ಮಕ್ಕಳು, 2ನೇ ತರಗತಿಗೆ 614, 3ನೇ ತರಗತಿಗೆ 613, 4ನೇ ತರಗತಿಗೆ 503, 6ನೇ ತರಗತಿಗೆ 431, 7ನೇ ತರಗತಿಗೆ 329, 9ನೇ ತರಗತಿಗೆ 122, ಹತ್ತನೇ ತರಗತಿಗೆ 50 ಮಂದಿ ಮಕ್ಕಳು ಈ ನಿಟ್ಟಿನಲ್ಲಿ ಸೇರಿದ್ದಾರೆ ಎಂದವರು ನುಡಿದರು.