ತಿರುವನಂತಪುರ: ಕೋವಿಡ್ ಹರಡುವುದನ್ನು ತಡೆಯಲು ಜಾರಿಗೆ ತರಲಾದ ಲಾಕ್-ಡೌನ್ ದಿನಗಳು ಕೇರಳದಲ್ಲಿ ಹೆಚ್ಚಿನ ಕೋವಿಡ್ ಸಾವಿನ ವರದಿಗಳಿಗೆ ಕಾರಣವಾಗಿವೆ. ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ನ ಜೂನ್ 2 ಮತ್ತು 9 ರ ನಡುವೆ ರಾಜ್ಯದಲ್ಲಿ 1,214 ಮಂದಿ ಕೋವಿಡ್ ಗೆ ಬಲಿಯಾಗಿದ್ದರೆ 1,08,165 ಮಂದಿಗೆ ಕೋವಿಡ್ ಸೋಂಕು ಬಾಧಿಸಲ್ಪಟ್ಟಿದ್ದವು.
ಮೇ 5 ಮತ್ತು 12 ರ ನಡುವೆ ರಾಜ್ಯದಲ್ಲಿ 488 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. 2,67,002 ಮಂದಿ ಸೋಂಕಿಗೊಳಗಾಗಿದ್ದರು. ಈ ವಾರಗಳಿಗೆ ಹೋಲಿಸಿದರೆ, ಸಾವಿನ ಸಂಖ್ಯೆ 149 ಕ್ಕೆ ಏರಿದರೆ, ಕೋವಿಡ್ 59 ಪ್ರತಿಶತದಷ್ಟು ಇಳಿಕೆ ದಾಖಲಿಸಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರ ತಪಾಸಣೆ ದರವು ಶೇಕಡಾ 22 ಕ್ಕೆ ಇಳಿದಿದೆ.
ದೈನಂದಿನ ಕೋವಿಡ್ ಅಂಕಿಅಂಶಗಳು ಮತ್ತು ಮರಣ ಪ್ರಮಾಣಗಳಲ್ಲಿ ರಾಷ್ಟ್ರೀಯ ಕುಸಿತ ಇರುವುದರಿಂದ ಕೇರಳದ ಅಂಕಿಅಂಶಗಳು ದಿಗಿಲುಗೊಳಿಸಿದೆ. ಮೇ 12 ರಿಂದ ಜೂನ್ 9 ರವರೆಗೆ ಕೇರಳದಲ್ಲಿ ಸಾವಿನ ಪ್ರಮಾಣ 72 ಶೇ. ಇತ್ತು. 28 ದಿನಗಳ ಅವಧಿಯಲ್ಲಿ 4,384 ಮಂದಿ ಕೋವಿಡ್ ಗೆ ಬಲಿಯಾದರು. ಲಾಕ್ ಡೌನ್ ಘೋಷಣೆಯಾದ ದಿನದಂದು ರಾಜ್ಯದ ಎಲ್ಲಾ ಕೋವಿಡ್ ಸಾವುಗಳಲ್ಲಿ ಮೂರನೇ ಎರಡರಷ್ಟು ಇತ್ತು.
ವಿವಿಧ ರೋಗಗಳಿಂದ ಬಳಲುತ್ತಿರುವ ಜನರಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚು. ಕೋವಿಡ್ ರಾಜ್ಯದ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರಿಗೆ ಬಾಧಿಸಿದೆ. ಮೇ 5 ರಿಂದ 12 ರವರೆಗೆ ಕೇರಳದಲ್ಲಿ 9.5 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದರೆ, ಜೂನ್ 2 ರಿಂದ 9 ರವರೆಗೆ ಕೇವಲ 7.5 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಕೋವಿಡ್ ಮರಣವನ್ನು ನಿರ್ಧರಿಸಲು ಹೊಸ ಮಾರ್ಗಸೂಚಿಗಳನ್ನು ಪರಿಚಯಿಸುವುದರೊಂದಿಗೆ, ಹಳೆಯ ಕೋವಿಡ್ ಸಾವುಗಳ ವರದಿಗಳ ಬಿಡುಗಡೆಯಿಂದ ಸಂಖ್ಯೆಗಳಲ್ಗಿ ಭಾರೀ ಹೆಚ್ಚಳ ಕಂಡುಬರುತ್ತಿದೆ ಎಂದು ವರದಿಯೊಂದು ತಿಳಿಸಿದೆ.