ತಿರುವನಂತಪುರ: ರಾಜ್ಯದಲ್ಲಿ ಇಂದು 16,204 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 2059, ಕೊಲ್ಲಂ 1852, ತಿರುವನಂತಪುರ 1783, ಮಲಪ್ಪುರಂ 1744, ಪಾಲಕ್ಕಾಡ್ 1696, ತ್ರಿಶೂರ್ 1447, ಆಲಪ್ಪುಳ 1280, ಕೋಝಿಕೋಡ್ 1240, ಕೊಟ್ಟಾಯಂ 645, ಕಣ್ಣೂರು 619, ಪತ್ತನಂತಿಟ್ಟು 545, ಕಾಸರಗೋಡು 533, ಇಡುಕ್ಕಿ 451, ವಯನಾಡ್ 310 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,15,022 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.14.09 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,08,03,168 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಯುಕೆ ಮೂಲದ ವ್ಯಕ್ತಿಯೊಬ್ಬರಿಗೆ ಕಳೆದ 24 ಗಂಟೆಗಳಲ್ಲಿ ಕೋವಿಡ್ ದೃಢಪಡಿಸಲಾಗಿದೆ. ಯುಕೆ (117), ದಕ್ಷಿಣ ಆಫ್ರಿಕಾ (10) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 128 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 126 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಮಂದಿ ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 156 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 10,437 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 154 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 15,048 ಮಂದಿ ಜನರಿಗೆ ಸೋಂಕು ತಗುಲಿತು. 928 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಎರ್ನಾಕುಳಂ 1972, ಕೊಲ್ಲಂ 1841, ತಿರುವನಂತಪುರ 1670, ಮಲಪ್ಪುರಂ 1685, ಪಾಲಕ್ಕಾಡ್ 1024, ತ್ರಿಶೂರ್ 1433, ಆಲಪ್ಪುಳ 1276, ಕೋಝಿಕೋಡ್ 1215, ಕೊಟ್ಟಾಯಂ 619, ಕಣ್ಣೂರು 563, ಪತ್ತನಂತಿಟ್ಟು 529, ಕಾಸರಗೋಡು 519, ಇಡುಕ್ಕಿ 425, ವಯನಾಡ್ 277 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 74 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 16, ಎರ್ನಾಕುಳಂ, ಕಾಸರಗೋಡು ತಲಾ 9, ಕೊಲ್ಲಂ, ಪಾಲಕ್ಕಾಡ್ ತಲಾ 7, ತ್ರಿಶೂರ್, ವಯನಾಡ್ ತಲಾ 6, ತಿರುವನಂತಪುರ 5, ಪತ್ತನಂತಿಟ್ಟು 4, ಇಡುಕ್ಕಿ 2, ಕೊಟ್ಟಾಯಂ, ಮಲಪ್ಪುರಂ ಮತ್ತು ಕೊಝಿಕೋಡ್ ತಲಾ 1 ಎಂಬಂತೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,237 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1503, ಕೊಲ್ಲಂ 2505, ಪತ್ತನಂತಿಟ್ಟು 634, ಆಲಪ್ಪುಳ 1305, ಕೊಟ್ಟಾಯಂ 830, ಇಡುಕ್ಕಿ 497, ಎರ್ನಾಕುಳಂ 2538, ತ್ರಿಶೂರ್ 1212, ಪಾಲಕ್ಕಾಡ್ 1766, ಮಲಪ್ಪುರಂ 4590, ಕೋಝಿಕೋಡ್ 1318, ವಯನಾಡ್ 246, ಕಣ್ಣೂರು 829, ಕಾಸರಗೋಡು 464 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,39,064 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 25,24,248 ಮಂದಿ ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,92,079 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 5,59,683 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 32,396 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2527 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ಸ್ಪಾಟ್ ಇಲ್ಲ. ಯಾವುದೇ ಪ್ರದೇಶವನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 889 ಹಾಟ್ಸ್ಪಾಟ್ಗಳಿವೆ.
o