HEALTH TIPS

ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಇಳಿಮುಖವಿದ್ದರೂ, ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆ!: ರಾಜ್ಯದಲ್ಲಿ ಇಂದು 17,328 ಮಂದಿಗೆ ಸೋಂಕು ಪತ್ತೆ: ಪರೀಕ್ಷಾ ಸಕಾರಾತ್ಮಕತೆ ದರ ಶೇ. 14.89

                 ತಿರುವನಂತಪುರ: ರಾಜ್ಯದಲ್ಲಿ ಇಂದು 17,328 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 2468, ಮಲಪ್ಪುರಂ 1980, ಪಾಲಕ್ಕಾಡ್ 1899, ಕೊಲ್ಲಂ 1787, ಎರ್ನಾಕುಳಂ 769, ತ್ರಿಶೂರ್ 1582, ಕೋಝಿಕೋಡ್ 1497, ಆಲಪ್ಪುಳ 1212, ಕೊಟ್ಟಾಯಂ 822, ಕಣ್ಣೂರು 684, ಕಾಸರಗೋಡು 520, ಪತ್ತನಂತಿಟ್ಟು 472, ಇಡುಕ್ಕಿ 395, ವಯನಾಡ್ 241 ಎಂಬಂತೆ ಸೋಂಕು ದೃಢಪಡಿಸಲಾಗಿದೆ.  

           ಕಳೆದ 24 ಗಂಟೆಗಳಲ್ಲಿ 1,16,354 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.14.89 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,04,04,806 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

           ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 126 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 125 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

             ಕಳೆದ 24 ಗಂಟೆಗಳಲ್ಲಿ  209 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಇದು ಒಟ್ಟು ಸಾವಿನ ಸಂಖ್ಯೆ  9719 ಕ್ಕೆ ಏರಿಕೆಯಾಗಿದೆ. 

            ಇಂದು, ಸೋಂಕು ಪತ್ತೆಯಾದವರಲ್ಲಿ 112 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 16,140 ಮಂದಿ ಜನರಿಗೆ ಸೋಂಕು ತಗುಲಿತು. 1007 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 2291, ಮಲಪ್ಪುರಂ 1904, ಪಾಲಕ್ಕಾಡ್ 1199, ಕೊಲ್ಲಂ 1777, ಎರ್ನಾಕುಳಂ 1736, ತ್ರಿಶೂರ್ 1572, ಕೋಝಿಕೋಡ್ 1487, ಆಲಪ್ಪುಳ 1200, ಕೊಟ್ಟಾಯಂ 795, ಕಣ್ಣೂರು 611, ಕಾಸರಗೋಡು 509, ಪತ್ತನಂತಿಟ್ಟು 459, ಇಡುಕ್ಕಿ 379, ವಯನಾಡ್ 221 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

          ಇಂದು 69 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ಕಂಡುಬಂದಿದೆ. ತಿರುವನಂತಪುರ 14, ಎರ್ನಾಕುಳಂ 10, ಕಣ್ಣೂರು 9, ತ್ರಿಶೂರ್, ಕಾಸರಗೋಡು 8, ವಯನಾಡ್ 7, ಪಾಲಕ್ಕಾಡ್ 6, ಕೊಲ್ಲಂ 4, ಪತ್ತನಂತಿಟ್ಟು 2 ಮತ್ತು ಕೋಝಿಕೋಡ್ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

              ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 24,003 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 2236, ಕೊಲ್ಲಂ 1029, ಪತ್ತನಂತಿಟ್ಟು 1294, ಆಲಪ್ಪುಳ 949, ಕೊಟ್ಟಾಯಂ 802, ಇಡುಕ್ಕಿ 489, ಎರ್ನಾಕುಳಂ 1778, ತ್ರಿಶೂರ್ 1537, ಪಾಲಕ್ಕಾಡ್ 5108, ಮಲಪ್ಪುರಂ 4951, ಕೋಝಿಕೋಡ್ 1848, ವಯನಾಡ್ 405, ಕಣ್ಣೂರು 898, ಕಾಸರಗೋಡು 679 ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ 1,67,638 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 24,40,642 ಮಂದಿ ಜನರನ್ನು ಕೋವಿಡ್‍ನಿಂದ ಬಿಡುಗಡೆ ಮಾಡಲಾಗಿದೆ.

             ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 6,69,815 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 6,34,890 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 34,925 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,649 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

             ಇಂದು ಹೊಸ ಹಾಟ್‍ಸ್ಪಾಟ್ ಗಳಿಲ್ಲ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 870 ಹಾಟ್‍ಸ್ಪಾಟ್‍ಗಳಿವೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries