ತಿರುವನಂತಪುರ: ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇನ್ನು ಇರುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ ವಿಸ್ತರuಯಲ್ಲಿ ನಿಯಂತ್ರಣ ಇರುವುದನ್ನು ಗಮನದಲ್ಲಿರಿಸಿ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ
ಕೋವಿಡ್ ವ್ಯಾಪಕತೆ ಹೆಚ್ಚಿದ ಕಾರಣ ಮೇ 8 ರಂದು ಪ್ರಾರಂಭವಾದ ಲಾಕ್‍ಡೌನ್ ನ್ನು ಒಂದಷ್ಟು ವಿನಾಯ್ತಿಗಳೊಂದಿಗೆ ಸರಳೀಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದರು. ಆದರೆ, ಸಂಪೂರ್ಣವಾಗಿ ವಿನಾಯ್ತಿ ಘೋಶಿಸುವ ಕಾಲ ಸನ್ನಿಹಿತವಾಗಿಲ ಎಮದೂ ಅವರು ಎಚ್ಚರಿಸಿದರು.
ಜೂನ್ 17 ರಿಂದ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಮಿತವಾಗಿ ಅನುಮತಿಸಲಾಗುವುದು. ಹೆಚ್ಚಿನ ಪರೀಕ್ಷಾ ಸಕಾರಾತ್ಮಕ ದರವನ್ನು ಹೊಂದಿರುವ ಪಂಚಾಯತ್‍ಗಳನ್ನು ಗುರುತಿಸಲಾಗುವುದು ಮತ್ತು ಕಂಟೈನ್‍ಮೆಂಟ್ ವಲಯದಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಶನಿವಾರ ಮತ್ತು ಭಾನುವಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗುವುದು ಎಂದು ಸಿಎಂ ಹೇಳಿದರು.
ಟಿಪಿಆರ್ ದರ 30 ಶೇ.ಕ್ಕಿಂತ ಹೆಚ್ಚಿರುವ ಸ್ಥಳೀಯ ಸಂಸ್ಥೆಗಳು ಟ್ರಿಪಲ್ ಲಾಕ್‍ಡೌನ್ ಹೊಂದಿರುತ್ತದೆ. ಟಿಪಿಆರ್ 20 ಕ್ಕಿಂತ ಹೆಚ್ಚಿದ್ದರೆ ಸಂಪೂರ್ಣ ಲಾಕ್‍ಡೌನ್ ಇರುವುದು. ಟಿಪಿಆರ್ 8 ರಿಂದ 20 ರ ನಡುವೆ ಇದ್ದರೆ ಭಾಗಶಃ ನಿಯಂತ್ರಣ ಹೇರಲಾಗುವುದು. ಎಂಟಕ್ಕಿಂತ ಕಡಿಮೆ ಟಿಪಿಆರ್ ಇರುವಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗುವುದು.
ಅತಿ ತುರ್ತು ಮಳಿಗೆಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. ಬೆವ್ಕೊ ಮಳಿಗೆಗಳು ಮತ್ತು ಬಾರ್‍ಗಳೂ ತೆರೆಯಲಿದೆ. ಇವುಗಳು ಬೆವ್ಕ್ಯೂ ಅಪ್ಲಿಕೇಶನ್ ನ್ನು ಆಧರಿಸಿ ಕಾರ್ಯನಿರ್ವಹಿಸಲಿವೆ. ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.
ಶಾಪಿಂಗ್ ಮಾಲ್‍ಗಳನ್ನು ತೆರೆಯಲು ಅನುಮತಿಸಿಲ್ಲ. ಹೋಟೆಲ್‍ಗಳಲ್ಲಿ ಕುಳಿತು ತಿನ್ನಲು ಅನುಮತಿ ಇಲ್ಲ. ಅಕ್ಷಯ ಕೇಂದ್ರಗಳು ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತವೆ. ಸಚಿವಾಲಯದ ವಿವಿಧ ಕಚೇರಿಗಳಲ್ಲಿ ಶೇ. 50 ಉದ್ಯೋಗಿಗಳು ಮಾತ್ರ ಸೇವೆಗೆ ಹಾಜರಾಗುವರು. ವಿವಾಹ ಮತ್ತು ಅಂತ್ಯಕ್ರಿಯೆಗಳಿಗೆ ಕೇವಲ 20 ಜನರಿಗೆ ಮಾತ್ರವೇ ಅನುಮತಿ ಇರುವುದು.
ಜೂನ್ 17 ರಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬ್ಯಾಂಕುಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಇತರ ಜನಸಂದಣಿ ಉಂಟಾಗುವ ವಿವಿಧ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಮತಿಸಲಾಗುವುದಿಲ್ಲ. ಕೃಷಿ-ಕೈಗಾರಿಕಾ ಕ್ಷೇತ್ರದಲ್ಲಿ ಚಟುವಟಿಕೆಗಳನ್ನು ಎಲ್ಲೆಡೆ ಅನುಮತಿಸಲಾಗುವುದು.
ಜೂನ್ 17 ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಶೇಕಡಾ 25 ರಷ್ಟು ಉದ್ಯೋಗಿಗಳೊಂದಿಗೆ ಪಾಳಿ ವ್ಯವಸ್ಥೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಡೆಲ್ಟಾ ಸೇರಿದಂತೆ ವೈರಸ್ ರೂಪಾಂತರವು ಮುಂದುವರಿದಂತೆ, ನಿಯಂತ್ರಣಗಳು ಇನ್ನಷ್ಟು ದಿನ ಮುಂದುವರಿಯಲಿದೆ.
ಸಾಮಾನ್ಯ ಪರೀಕ್ಷೆಗಳಿಗೆ ಅವಕಾಶ ನೀಡಲಾಗುವುದು. ಟೇಕ್‍ಅವೇಗಳು ಮತ್ತು ಆನ್‍ಲೈನ್ ವಿತರಣೆಯು ರೆಸ್ಟೋರೆಂಟ್‍ಗಳಲ್ಲಿ ಮುಂದುವರಿಯುತ್ತದೆ. ಜ£ರು ಗುಂಪು ಸೇರುವ ಒಳಾಂಗಣ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ.ಈ ಕಾರಣದಿಂದ ಮಾಲ್‍ಗಳು ತೆರೆಯಲು ಅನುಮತಿಸಿಲ್ಲ. ಪ್ರತಿ ಬುಧವಾರ ಸ್ಥಳೀಯ ಸಂಸ್ಥೆಗಳಲ್ಲಿ ವಾರದ ಕೊನೆಯ ಏಳು ದಿನಗಳ ಸರಾಸರಿ ಟಿಪಿಆರ್ ನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಯಮಗಳನ್ನು ಬದಲಾಯಿಸಲಾಗುತ್ತದೆ. ಇದನ್ನು ಜಿಲ್ಲಾಡಳಿತಗಳು ಮಾಡಲಿವೆ.
ವಾರದ ವರದಿಗಳನ್ನು ಅವಲೋಕನ ನಡೆಸಿ ಸ್ಥಳೀಯಾಡಳಿಗಳು ವರದಿ ತಯಾರಿಸಲಿವೆ. ಹರಡುವಿಕೆಯ ವ್ಯಾಪ್ತಿಯನ್ನು ಅವಲಂಬಿಸಿ ಸ್ಥಳೀಯ ಸಂಸ್ಥೆಗಳು ತಪಾಸಣೆಗೆ ಕ್ರಮ ಕೈಗೊಳ್ಳಲಿದೆ. ಪ್ರತಿ ಮನೆಯಲ್ಲೂ ಸಕಾರಾತ್ಮಕವಾಗಿರುವ ಮೊದಲ ವ್ಯಕ್ತಿಯನ್ನು ಮೀಸಲು ಕೇಂದ್ರದಲ್ಲಿ ಕ್ವಾರಂಟೈನ್ ಗೊಳಪಡಿಸಲಾಗುತ್ತದೆ. ಅಂತಹ ಮನೆಯ ಇತರ ಸದಸ್ಯರು ಅವರವರ ಮನೆಯಲ್ಲೇ ಕ್ವಾರಂಟೈನ್ ನಲ್ಲಿರುವರು.
ಟಿಪಿಆರ್ ಶೇ. 8 ಕ್ಕಿಂತ ಕಡಿಮೆ ಇರುವ ಸ್ಥಳೀಯ ಸಂಸ್ಥೆಗಳಲ್ಲಿ, ಎಲ್ಲಾ ಅಂಗಡಿಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರಬಹುದು. ಐವತ್ತು ಪ್ರತಿಶತ ನೌಕರರೊಂದಿಗೆ ಇತರ ಸಂಸ್ಥೆಗಳೂ ಕಾರ್ಯನಿರ್ವಹಿಸಬಹುದು. ಖಾಸಗಿ ಕಂಪನಿಗಳಲ್ಲಿ ಐವತ್ತು ಶೇಕಡಾ ಉದ್ಯೋಗಿಗಳು ಜೂನ್ 17 ರಿಂದ ಉದ್ಯೋಗಕ್ಕೆ ಹಾಜರಾಗಬಹುದು.
ಶೇಕಡಾ 8 ರಿಂದ 20 ರಷ್ಟು ಟಿಪಿಆರ್ ಹೊಂದಿರುವ ಸರಕು ಮಳಿಗೆಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತ್ತು ಇತರ ವ್ಯವಹಾರಗಳನ್ನು ಬೆಳಿಗ್ಗೆ 7 ರಿಂದ 7 ಗಂಟೆಯವರೆಗೆ ಅತಿ ಅಗತ್ಯದ ಅಂಗಡಿಗಳನ್ನು ನಿರ್ವಹಿಸಬಹುದು. ಐವತ್ತು ಪ್ರತಿಶತ ಉದ್ಯೋಗಿಗಳು ಈ ದಿನಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಬಹುದು.
ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಟಿಪಿಆರ್ ಶೇ. 20 ಕ್ಕಿಂತ ಹೆಚ್ಚು ಇರುವಲ್ಲಿಅಗತ್ಯ ಸೇವೆಗಳು ಮಾತ್ರ ಇರುವುದು. ಇತರ ಅಂಗಡಿಗಳು ಶುಕ್ರವಾರ ಮಾತ್ರ ಬೆಳಿಗ್ಗೆ ಏಳರಿಂದ ಸಂಜೆ ಏಳರ ವರೆಗೆ ಅಗತ್ಯ ಉದ್ಯೋಗಿಗಳೊಂದಿಗೆ ಮಾತ್ರ ತೆರೆದಿರಬಹುದು. ಟಿಪಿಆರ್ 30 ಕ್ಕಿಂತ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಟ್ರಿಪಲ್ ಲಾಕ್ಡೌನ್ ನ್ನು ಜಾರಿಗೆ ತರಲಿದೆ.
ಕೇರಳದಲ್ಲಿ ಟಿಪಿಆರ್ 8 ಕ್ಕಿಂ ಕಡಿಮೆ ದರಸಲ್ಲಿ 147 ಪ್ರದೇಶಗಳಿವೆ. ಎಂಟು ಮತ್ತು ಇಪ್ಪತ್ತು ನಡುವೆ 716 ಸ್ಥಳೀಯ ಸಂಸ್ಥೆಗಳು ಇವೆ. 20 ರಿಂದ 30 ರ ನಡುವೆ 146 ಸ್ಥಳೀಯ ಸಂಸ್ಥೆಗಳು ಇವೆ. 30 ಕ್ಕಿಂತ ಹೆಚ್ಚಿನ ಟಿಪಿಆರ್ ಹೊಂದಿರುವ 25 ಸ್ಥಳೀಯ ಸಂಸ್ಥೆಗಳು ಇವೆ.
ಎಲ್ಲಾ ವ್ಯವಹಾರ ಕ್ಷೇತ್ರಗಳಿಗೆ ರೀಯಾಯಿತಿಗಳನ್ನು ನೀಡಲಾಗಿದೆ ಎಂದು ತಪ್ಪಾಗಿ ಭಾವಿಸಬಾರದು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಮ್ಮಲ್ಲಿ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ವೈರಸ್ ಇದೆ. ಹರಡುವಿಕೆಯನ್ನು ತಡೆಯಲು ಸಾಧ್ಯವಾದರೆ ಮಾತ್ರ ಮೂರನೇ ತರಂಗವನ್ನು ತಡೆಯಬಹುದು. ಆದ್ದರಿಂದ ಹೆಚ್ಚಿನ ನಿಯಂತ್ರಣ ಅಗತ್ಯವಿದೆ ಎಂದರು.