ತಿರುವನಂತಪುರ: ರಾಜ್ಯದಲ್ಲಿ ಇಂದು 18,853 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 2448, ಕೊಲ್ಲಂ 2272, ಪಾಲಕ್ಕಾಡ್ 2201, ತಿರುವನಂತಪುರ 2150, ಎರ್ನಾಕುಳಂ 2041, ತ್ರಿಶೂರ್ 1766, ಆಲಪ್ಪುಳ 1337, ಕೋಝಿಕೋಡ್ 1198, ಕಣ್ಣೂರು 856, ಕೊಟ್ಟಾಯಂ 707, ಪತ್ತನಂತಿಟ್ಟು 585, ಕಾಸರಗೋಡು 560, ಇಡುಕ್ಕಿ 498, ವಯನಾಡ್ 234 ಎಂಬಂತೆ ಸೋಂಕು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,23,885 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.15.22 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,01,78,932 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ಕಂಡುಬಂದಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 126 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 125 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 153 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ ರಾಜ್ಯದಲ್ಲಿ 9375 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 110 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 17,521 ಮಂದಿ ಜನರಿಗೆ ಸೋಂಕು ತಗುಲಿತು. 1143 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2390, ಕೊಲ್ಲಂ 2260, ಪಾಲಕ್ಕಾಡ್ 1393, ತಿರುವನಂತಪುರ 2022, ಎರ್ನಾಕುಳಂ 1979, ತ್ರಿಶೂರ್ 1747, ಆಲಪ್ಪುಳ 1318, ಕೋಝಿಕೋಡ್ 1175, ಕಣ್ಣೂರು 757, ಕೊಟ್ಟಾಯಂ 669, ಪತ್ತನಂತಿಟ್ಟು 568, ಕಾಸರಗೋಡು 547, ಇಡುಕ್ಕಿ 483, ವಯನಾಡ್ 213 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು 79 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 19, ಎರ್ನಾಕುಳಂ 12, ಕೊಲ್ಲಂ 10, ತ್ರಿಶೂರ್ 7, ತಿರುವನಂತಪುರ, ವಯನಾಡ್ ತಲಾ 6, ಪತ್ತನಂತಿಟ್ಟು, ಕಾಸರಗೋಡು ತಲಾ 5, ಕೊಟ್ಟಾಯಂ, ಪಾಲಕ್ಕಾಡ್ ತಲಾ 3, ಆಲಪ್ಪುಳ, ಇಡುಕ್ಕಿ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 26,569 ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 2621, ಕೊಲ್ಲಂ 1413, ಪತ್ತನಂತಿಟ್ಟು 825, ಆಲಪ್ಪುಳ 2194, ಕೊಟ್ಟಾಯಂ 709, ಇಡುಕ್ಕಿ 735, ಎರ್ನಾಕುಳಂ 4973, ತ್ರಿಶೂರ್ 1634, ಪಾಲಕ್ಕಾಡ್ 2758, ಮಲಪ್ಪುರಂ 4143, ಕೊಝಿಕೋಡ್ 1878, ವಯನಾಡ್ 487, ಕಣ್ಣೂರು 1654, ಕಾಸರಗೋಡು 545 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,84,292 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 23,90,779 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 7,20,028 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 6,83,851 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 36,177 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2907 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್‍ಸ್ಪಾಟ್ ಇಲ್ಲ. 6 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 871 ಹಾಟ್‍ಸ್ಪಾಟ್‍ಗಳಿವೆ.