ವಿಶ್ವಸಂಸ್ಥೆ: ಜಾಗತಿಕ ಮಟ್ಟದಲ್ಲಿ ಈ ವರೆಗೂ ಹಂಚಿಕೆಯಾಗಿರುವ ಎರಡು ಬಿಲಿಯನ್ ಕೋವಿಡ್-19 ಲಸಿಕೆಗಳ ಪೈಕಿ ಅಮೆರಿಕ ಭಾರತ, ಚೀನಾಗೆ ಶೇ.60 ರಷ್ಟು ಪೂರೈಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡಬ್ಲ್ಯುಹೆಚ್‌ಒ ಹಿರಿಯ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವಾರದಲ್ಲಿ ಎರಡು ಬಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಪೂರ್ಣಗೊಳಿಸುತ್ತೇವೆ. ಇವುಗಳನ್ನು 212 ರಾಷ್ಟ್ರಗಳಿಗೆ ವಿತರಣೆ ಮಾಡಲಾಗಿದೆ. 2 ಬಿಲಿಯನ್ ಡೋಸ್ ಗಳ ಪೈಕಿ ಶೇ.75 ರಷ್ಟು ಕೇವಲ 10 ರಾಷ್ಟ್ರಗಳಿಗೆ ಹೋಗಿವೆ ಎಂದು ಹೇಳಿದ್ದಾರೆ.
ಶೇ.60 ರಷ್ಟು ಲಸಿಕೆಗಳು, ಭಾರತ, ಚೀನಾ, ಅಮೆರಿಕಾಗೆ ಪೂರೈಕೆ ಮಾಡಲಾಗಿದೆ. 127 ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗಿರುವ ಕೋವಿಡ್-19 ಲಸಿಕೆಯ ಪೈಕಿ ಕೋವ್ಯಾಕ್ಸ್ ಪ್ರಮುಖ ಪಾತ್ರ ವಹಿಸಿವೆ, ಹಲವು ರಾಷ್ಟ್ರಗಳಿಗೆ ಲಸಿಕೆ ಅಭಿಯಾನ ಪ್ರಾರಂಭಿಸಲು ಸಹಕಾರಿಯಾಗಿದೆ. ಭಾರತ, ಚೀನಾ, ಅಮೆರಿಕಾಗಳಿಗೆ ಪೂರೈಕೆಯಾಗಿರುವ ಶೇ.60 ರಷ್ಟು ಡೋಸ್ ಗಳು ದೇಶೀಯವಾಗಿ ಸಂಗ್ರಹಿಸಿ ಬಳಕೆ ಮಾಡಲಾಗಿದೆ.
ಶೇ.0.5 ರಷ್ಟು ಲಸಿಕೆಗಳು ಮಾತ್ರವೇ ಜಾಗತಿಕವಾಗಿ ಅತಿ ಕಡಿಮೆ ಆದಾಯ ಹೊಂದಿದ, ವಿಶ್ವದ ಶೇ.10 ರಷ್ಟು ಜನಸಂಖ್ಯೆ ಹೊಂದಿರುವ ಅತಿ ರಾಷ್ಟ್ರಗಳಿಗೆ ತಲುಪಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.