ತಿರುವನಂತಪುರ: ರಾಜ್ಯದಲ್ಲಿ ಇಂದು 19,760 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 2874, ತಿರುವನಂತಪುರ 2345, ಪಾಲಕ್ಕಾಡ್ 2178, ಕೊಲ್ಲಂ 2149, ಎರ್ನಾಕುಳಂ 2081, ತ್ರಿಶೂರ್ 1598, ಆಲಪ್ಪುಳ 1557, ಕೋಜಿಕ್ಕೊಡ್ 1345, ಕೊಟ್ಟಾಯಂ 891, ಕಣ್ಣೂರು 866, ಪತ್ತನಂತಿಟ್ಟು 694, ಇಡುಕ್ಕಿ 462, ಕಾಸರಗೋಡು 439, ವಯನಾಡ್ 281 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,30,594 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.15.13 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,99,26,522 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ನಿಂದ ಆಗಮಿಸಿದ 126 ಜನರಿಗೆ ಈವರೆಗೆ ದೃಢಪಡಿಸಲಾಗಿದೆ. ಈ ಪೈಕಿ 125 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 194 ಮಂದಿ ಸೋಂಕು ಬಾಧಿಸಿ ಮೃತಪಟ್ಟಿಸದ್ದಾರೆ. ಒಟ್ಟು ಸಾವಿನ ಸಂಖ್ಯೆ 9009 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 104 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 18,393 ಮಂದಿ ಜನರಿಗೆ ಸೋಂಕು ತಗುಲಿತು. 1189 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2800, ತಿರುವನಂತಪುರ 2246, ಪಾಲಕ್ಕಾಡ್ 1282, ಕೊಲ್ಲಂ 2145, ಎರ್ನಾಕುಳಂ 2017, ತ್ರಿಶೂರ್ 1586, ಆಲಪ್ಪುಳ 1548, ಕೋಝಿಕೋಡ್ 1331, ಕೊಟ್ಟಾಯಂ 849, ಕಣ್ಣೂರು 785, ಪತ್ತನಂತಿಟ್ಟು 677, ಇಡುಕ್ಕಿ 448, ಕಾಸರಗೋಡು 426, ವಯನಾಡ್ 253 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ರಾಜ್ಯಾದ್ಯಂತ 74 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 15, ಎರ್ನಾಕುಳಂ 13, ಕೋಝಿಕೋಡ್ 8, ಪಾಲಕ್ಕಾಡ್ 7, ಪತ್ತನಂತಿಟ್ಟು 6, ತಿರುವನಂತಪುರ, ತ್ರಿಶೂರ್ ತಲಾ 5, ಕೊಲ್ಲಂ, ವಯನಾಡ್ ತಲಾ 4, ಆಲಪ್ಪುಳ, ಇಡುಕ್ಕಿ 3 ಮತ್ತು ಮಲಪ್ಪುರಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. .
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 24,117 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 2023, ಕೊಲ್ಲಂ 432, ಪತ್ತನಂತಿಟ್ಟು 982, ಆಲಪ್ಪುಳ 2014, ಕೊಟ್ಟಾಯಂ 1310, ಇಡುಕ್ಕಿ 741, ಎರ್ನಾಕುಳಂ 2424, ತ್ರಿಶೂರ್ 2157, ಪಾಲಕ್ಕಾಡ್ 2979, ಮಲಪ್ಪುರಂ 4170, ಕೊಝಿಕೋಡ್ 2375, ವಯನಾಡ್ 228, ಕಣ್ಣೂರು 1502, ಕಾಸರಗೋಡು 780 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2,02,426 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 23,34,502 ಮಂದಿ ಈವರೆಗೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 7,64,008 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 7,26,515 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 37,493 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2684 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 2 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 885 ಹಾಟ್‍ಸ್ಪಾಟ್‍ಗಳಿವೆ.