ನವದೆಹಲಿ: ಮುಂದಿನ ಕೋವಿಡ್-19 ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂಬುದು ಏಮ್ಸ್ ನೇತೃತ್ವದಲ್ಲಿ ನಡೆದ ಬಹು-ಕೇಂದ್ರಿತ ಸಮುದಾಯ ಆಧಾರಿತ ಸಿರೊಸರ್ವೆಯಲ್ಲಿ ತಿಳಿದುಬಂದಿದೆ.
ದೇಶದ ವಿವಿಧ ಭಾಗಗಳಲ್ಲಿನ ಐದು ನಗರಗಳಲ್ಲಿ ವಯಸ್ಕರು ಮತ್ತು ಮಕ್ಕಳ ಸೋಂಕಿನ ಮಕ್ಕಳ ಪ್ರಮಾಣವನ್ನು ಇದರಲ್ಲಿ ತೋರಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಯೂ ಇದೇ ರೀತಿಯಿದೆ.
ದೆಹಲಿ ಹೊರತುಪಡಿಸಿ ಗೋರಖ್ ಪುರ್ ಮತ್ತು ಭುವನೇಶ್ವರದ ಏಮ್ಸ್ ಸಹಭಾಗಿತ್ವದಲ್ಲಿ JIPMER ಪುದುಚೇರಿ, ಫರಿದಾಬಾದ್ ನ ಸಾಂಕ್ರಾಮಿಕ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮತ್ತು ಅಗರ್ತಲಾ ಸರ್ಕಾರದ ವೈದ್ಯಕೀಯ ಕಾಲೇಜ್ ಸಂಶೋಧಕರು ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದನ್ನು ತಳ್ಳಿಹಾಕಿದ್ದಾರೆ.
ಅಧ್ಯಯನಕ್ಕಾಗಿ, SARS coV 2 ವಿರುದ್ಧದ ರೋಗ ನಿರೋಧಕ ಶಕ್ತಿ ಪರೀಕ್ಷಿಸಲು ಮಾರ್ಚ್ 15 ರಿಂದ ಜೂನ್ 10 ರ ನಡುವೆ 4,509 ವ್ಯಕ್ತಿಗಳು, 2-17 ವರ್ಷ ವಯಸ್ಸಿನ 700 ಮತ್ತು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 3,809 ಜನರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು, ಇದು ವೈರಸ್‌ಗೆ ಒಡ್ಡಿಕೊಂಡ ಇತಿಹಾಸವನ್ನು ದೃಢಪಡಿಸುತ್ತದೆ.
ದೆಹಲಿ, ಫರಿದಾಬಾದ್, ಅಗರ್ತಲಾ ಮತ್ತು ಗೊರಖ್ ಪುರದಲ್ಲಿ ಪರೀಕ್ಷಿಸಿದವರಲ್ಲಿ ಶೇ.55.7 ಮಕ್ಕಳು ಮತ್ತು ವಯಸ್ಕರು, ಕೋವಿಡ್-19 ವಿರುದ್ಧದ ರೋಗ ನಿರೋಧಕ ಶಕ್ತಿ ಕಂಡುಬಂದಿದ್ದರೆ, ಸಿರೊಪ್ರೆವೆಲೆನ್ಸ್ ಶೇ.63.5 ರಷ್ಟಿದೆ, ಆದಾಗ್ಯೂ, ಕೋವಿಡ್-19 ಮೂರನೇ ಅಲೆ ಎರಡು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಮಕ್ಕಳ ಮೇಲೆ ತೀವ್ರಗತಿಯ ಪರಿಣಾಮ ಬೀರುವುದಿಲ್ಲ ಎಂಬುದು ಸಂಶೋಧಕರ ವರದಿಯಿಂದ ತಿಳಿದುಬಂದಿದೆ.
ಮುಂದಿನ ಕೋವಿಡ್ ಸಾಂಕ್ರಾಮಿಕ ಅಲೆ ವೇಳೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದನ್ನು ಯಾವುದೇ ವೈಜ್ಞಾನಿಕ ನೆಲೆಯಿಲ್ಲ ಎಂದು ಏಮ್ಸ್ ನ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ಅಧ್ಯಯನದ ಪ್ರಕಾರ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸಿರೊ-ಪಾಸಿಟಿವಿಟಿ ಕಡಿಮೆ ಎಂದು ತೋರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸ್ವಲ್ಪ ಕಡಿಮೆ ಸಿರೊ-ಪಾಸಿಟಿವಿಟಿ ಕಂಡುಬಂದಿದೆ ಆದಾಗ್ಯೂ, ನಗರ ಪ್ರದೇಶಗಳಲ್ಲಿ ಈ ಈ ಭಿನ್ನತೆ ಕಂಡುಬಂದಿಲ್ಲ.
2 ರಿಂದ 4 ವರ್ಷ ಮತ್ತು 5-9 ವರ್ಷ ವಯಸ್ಸಿನ ಮಕ್ಕಳು ಬಹುತೇಕ ಒಂದೇ ರೀತಿಯ ಸಿರೊ-ಪಾಸಿಟಿವಿಟಿ ದರವನ್ನು (42.4% ಮತ್ತು 43.8%) ಹೊಂದಿದ್ದಾರೆಂದು ಸಂಶೋಧಕರು ಹೇಳಿದ್ದಾರೆ. ಇದು 10-17 ವರ್ಷ ವಯಸ್ಸಿನ ಮಕ್ಕಳಿಗೆ (60.3%) ಕಂಡುಬರುವ ದರಕ್ಕಿಂತ ಕಡಿಮೆಯಾಗಿದೆ.
10-17 ವರ್ಷದ ಮಕ್ಕಳಲ್ಲಿ ಸಿರೊ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದೆ. ಶೇ.50.9ರಷ್ಟು ಮಕ್ಕಳು ಲಕ್ಷಣ ರಹಿತ ಕೋವಿಡ್-19 ಸೋಂಕು ಹೊಂದಿರುವುದು ಕಂಡುಬಂದಿದೆ. ಮುಂದಿನ ಕೋವಿಡ್-19 ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.