HEALTH TIPS

ಕೋವಿಡ್‌-19: ವಿದೇಶಿ ಲಸಿಕೆ ಪರೀಕ್ಷೆ ನಿಯಮ ಸಡಿಲ

              ನವದೆಹಲಿ : ಕೋವಿಡ್‌-19ರ ವಿದೇಶಿ ಲಸಿಕೆಗಳ ಪ್ರತಿ ಬ್ಯಾಚ್‌ಗಳನ್ನೂ ಕೇಂದ್ರೀಯ ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುವ ನಿಯಮವನ್ನು ಭಾರತೀಯ ಪ್ರಧಾನ ಔಷಧ ನಿಯಂತ್ರಕರ (ಡಿಜಿಸಿಐ) ಸಂಸ್ಥೆಯು ಸಡಿಲಿಸಿದೆ. ಈ ನಿಯಮವನ್ನು ಸಡಿಲಿಸಿರುವ ಕಾರಣ, ದೇಶದಲ್ಲಿ ವಿದೇಶಿ ಲಸಿಕೆಗಳ ಲಭ್ಯತೆ ಸರಾಗವಾಗಲಿದೆ. ಚೀನಾದ ಸಿನೋವ್ಯಾಕ್ ಲಸಿಕೆಗೂ ಈ ವಿನಾಯಿತಿ ಅನ್ವಯವಾಗಲಿದೆ.

              ಪ್ರತಿ ಬ್ಯಾಚ್‌ನ ಲಸಿಕೆಗಳನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂಬ ನಿಯಮವನ್ನು ಸಡಿಲಿಸಬೇಕು ಎಂಬ ಮನವಿಯನ್ನು ಫೈಝರ್ ಮತ್ತು ಸಿಪ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಮುಂದೆ ಇರಿಸಿದ್ದವು. ದೇಶದಲ್ಲಿ ಕೋವಿಡ್‌-19 ಹರಡುವುದನ್ನು ನಿಯಂತ್ರಿಸಲು ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಆದರೆ, ಈ ಕಾರ್ಯಕ್ರಮವನ್ನು ಮುಂದುವರಿಸಲು ಅಗಾಧ ಪ್ರಮಾಣದಲ್ಲಿ ಲಸಿಕೆಯ ಡೋಸ್‌ಗಳ ಅವಶ್ಯಕತೆ ಇದೆ. ಈ ಪರೀಕ್ಷೆಗಳನ್ನು ತಪ್ಪಿಸುವುದರಿಂದ ತ್ವರಿತವಾಗಿ ಲಸಿಕೆ ಪೂರೈಸಬಹುದು ಎಂದು ಡಿಜಿಸಿಐ ಹೇಳಿದೆ.

             'ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ, ಜಪಾನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಬಳಕೆಗೆ ಹಾಗೂ ತುರ್ತು ಬಳಕೆಗೆ ಅನುಮತಿ ನೀಡಿರುವ ಲಸಿಕೆಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ' ಎಂದೂ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries