HEALTH TIPS

ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ಕೋವಿಡ್-19 ಮೂರನೇ ಅಲೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ: ಐಐಟಿ ಕಾನ್ಪುರ ಅಧ್ಯಯನ

Top Post Ad

Click to join Samarasasudhi Official Whatsapp Group

Qries

           ನವದೆಹಲಿ: ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೋವಿಡ್-ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ.

            ಮೂರನೇ ಅಲೆ ಬಗ್ಗೆ ಆಡಳಿತಗಾರರು ಹಾಗೂ ಸಾರ್ವಜನಿಕರಲ್ಲಿ ಗಮನಾರ್ಹ ರೀತಿಯ ಆತಂಕವಿದೆ. ಇದಕ್ಕಾಗಿ, ಎಸ್‌ಐಆರ್ ಮಾದರಿ ಬಳಸಿಕೊಂಡು, ಎರಡನೇ ತರಂಗದ ಸಾಂಕ್ರಾಮಿಕ ನಿಯತಾಂಕಗಳನ್ನು ಬಳಸಿಕೊಂಡು ಸಂಭವನೀಯ ಮೂರನೇ ತರಂಗದ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ.

         ಜುಲೈ 15 ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಅಂತಾ ಭಾವಿಸಿದರೆ ಸನ್ನಿವೇಶ 1 ( ಸಂಪೂರ್ಣ ಸಹಜ ಪರಿಸ್ಥಿತಿ) ಮೂರನೇ ಅಲೆ ಅಕ್ಟೋಬರ್ ನಲ್ಲಿ ಗರಿಷ್ಠ ಹಂತ ತಲುಪಲಿದೆ. ಆದರೆ, ಎರಡನೇ ಅಲೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ.

          ಸನ್ನಿವೇಶ 2 ( ವೈರಸ್ ರೂಪಾಂತರಗಳೊಂದಿಗೆ ಸಾಮಾನ್ಯ ಪರಿಸ್ಥಿತಿ) ಎರಡನೆಯದಕ್ಕಿಂತ ಹೆಚ್ಚಿರಬಹುದು ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಕಾಣಿಸಿಕೊಳ್ಳಬಹುದು.

           ಸನ್ನಿವೇಶ 3( ಕಠಿಣ ಮಧ್ಯಸ್ಥಿಕೆಗಳು) ಕಠಿಣ ಸಾಮಾಜಿಕ ಅಂತರ ಪಾಲನೆಯೊಂದಿಗೆ ಅಕ್ಟೋಬರ್ ಅಂತ್ಯದವರೆಗೂ ಮೂರನೇ ಅಲೆ ಉತ್ತುಂಗ ವಿಳಂಬವಾಗುವ ಸಾಧ್ಯತೆಯಿದೆ. ಮೂರನೇ ಅಲೆ ಉತ್ತುಂಗತ್ತೆ ಎರಡನೇ ಅಲೆಗಿಂತ ಕಡಿಮೆಯಾಗಿರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.

             ಪ್ರೊ. ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ, ಐಐಟಿ ಕಾನ್ಪುರದ ತಮ್ಮ ತಂಡದೊಂದಿಗೆ, ದೇಶದಲ್ಲಿನ ದೈನಂದಿನ ಕೋವಿಡ್-19 ಮುನ್ಸೂಚನೆಗಳನ್ನು covid19-forecast.org ನಲ್ಲಿ ಒದಗಿಸುತ್ತಾರೆ. ಐಐಟಿ ಕಾನ್ಪುರ್ ತಂಡದ ಪ್ರಕಾರ, ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದಂತೆ ಎರಡನೇ ಅಲೆಯೂ ಪ್ರತಿಯೊಂದು ರಾಜ್ಯದಲ್ಲೂ ಗಮನಾರ್ಹವಾಗಿ ಕ್ಷೀಣಿಸಿದೆ.

ದೇಶದಲ್ಲಿ ಸರಾಸರಿ ದೈನಂದಿನ ಪ್ರಕರಣಗಳಲ್ಲಿ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ಬಹುತೇಕ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆಯಿದೆ. ಆದರೆ, ಕೇರಳ, ಗೋವಾ, ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಪಾಸಿಟಿವಿಟಿ ದರ ಶೇ. 10 ರಷ್ಟಿದೆ.ಈ ವಾರದ ಅಂತ್ಯದ ವೇಳೆಗೆ, ಐಐಟಿ ಕಾನ್ಪುರದ ಮೂರನೇ ತರಂಗದ ಕುರಿತು ಮತ್ತೊಂದು ಅಧ್ಯಯನ ಹೊರಬರುವ ಸಾಧ್ಯತೆಯಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries