ಕೋವಿಡ್ 19 ಲಸಿಕೆಯನ್ನು ಭಾರತದಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ ಶೆ.75ಕ್ಕೂ ಅಧಿಕ ಕನ ಪಡೆದುಕೊಂಡಿದ್ದಾರೆ. ಈಗ 18 ವರ್ಷದ ಮೇಲ್ಪಟ್ಟವರಿಗೂ ಲಸಿಕೆ ಸಿಗುತ್ತಿರುವುದರಿಂದ ಲಕ್ಷಾಂತರ ಜನರು ಈಗಾಗಲೇ ಪಡೆದುಕೊಂಡಿದ್ದಾರೆ, ಇನ್ನೂ ಕೋಟ್ಯಾಂತರ ಯುವ ಜನರು ಲಸಿಕೆ ಪಡೆಯಲು ಕಾಯುತ್ತಿದ್ದಾರೆ.
ಹೀಗಿರುವಾಗ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಹಲವಾರು ಬಗೆಯ ಮಾಹಿತಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವೊಂದು ಸತ್ಯವಾದ ಅಂಶಗಳಾದರೆ ಇನ್ನು ಕೆಲವು ವಿಷಯಗಳಲ್ಲಿ ಸತ್ಯಾಂಶಗಳು ಇರಲ್ಲ. ಇವುಗಳನ್ನು ನಂಬಿ ಜನರು ಸುಮ್ಮನೆ ಆತಂಕಕ್ಕೆ ಒಳಗಾಗುವ ಬದಲಿಗೆ ತಜ್ಞರ ಬಳಿ ಸರಿಯಾದ ಮಾಹಿತಿ ಪಡೆಯಿರಿ.
ಕೆಲವು ಜನರು ಲಸಿಕೆ ಪಡೆದ ಬಳಿಕ ನನ್ನ ಮುಟ್ಟಿನಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳುತ್ತಿದ್ದಾರೆ. ಕೆಲವರಲ್ಲಿ ಮುಟ್ಟು ವಿಳಂಬವಾದರೆ ಇನ್ನು ಕೆಲವರಲ್ಲಿ ಅತ್ಯಧಿಕ ರಕ್ತಸ್ರಾವ ಕಂಡು ಬರುತ್ತಿದೆ, ಮತ್ತೆ ಕೆಲವರು ಲಸಿಕೆ ಪಡೆದ ಬಳಿಕ ಮುಟ್ಟಾದಾಗ ತುಂಬಾ ನೋವು ಕಂಡು ಬರುತ್ತಿದೆ. ಲಸಿಕೆಗೂ ಮುಟ್ಟಿನಲ್ಲಿ ಆದ ವ್ಯತ್ಯಾಸಕ್ಕೂ ಸಂಬಂಧವಿದೆಯೇ? ಲಸಿಕೆ ಮಹಿಳೆಯರ ಋತುಚಕ್ರದ ಮೇಲೆ ಪರಿಣಾಮ ಬೀರುವುದೇ? ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂದು ನೋಡೋಣ ಬನ್ನಿ:ಅಧ್ಯಯನ ಏನು ಹೇಳುತ್ತಿದೆ? ತಜ್ಞರ ಪ್ರಕಾರ ಋತುಚಕ್ರದ ವ್ಯತ್ಯಾಸಕ್ಕೂ ಲಸಿಕೆಗೂ ಸಂಬಂಧವಿಲ್ಲ. ಲಸಿಕೆಯಿಂದ ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದಿದ್ದಾರೆ. ಕೆಲವರಲ್ಲಿ ಲಸಿಕೆ ಪಡೆದ ಬಳಿಕ ಮುಟ್ಟಿನ ತೊಂದರೆ ಕಂಡು ಬಂದಿರುವುದಕ್ಕೆ ಅನೇಕ ಕಾರಣಗಳಿರಬಹುದು. ಲಸಿಕೆ ರೋಗ ನಿರೋಧಕ ವ್ಯವಸ್ಥೆಯಲ್ಲಿ ಮೇಲೆ ಪರಿಣಾಮ ಬೀರುವುದು, ಇದರಿಂದಾಗಿ ಬೇಗನೆ ಮುಟ್ಟಾಗುವುದು ಅಥವಾ ಅಧಿಕ ರಕ್ತಸ್ರಾವ ಕಂಡು ಬರುವುಉದ. ಇನ್ನು ಕೆಲವರಲ್ಲಿ ಒತ್ತಡದಿಂದಾಗಿ ಋತುಚಕ್ರದಲ್ಲಿ ವ್ಯತ್ಯಾಸ ಉಂಟಾಗುವುದು.
ಈ ಕಾರಣಗಳಿಂದಾಗಿ ಋತುಚಕ್ರದಲ್ಲಿ ವ್ಯತ್ಯಾಸ ಕಂಡು ಬರಬಹುದು :ಕೋವಿಡ್ 19 ಬಂದಾಗಿನಿಂದ ಸಾಕಷ್ಟು ನೋವು, ನಷ್ಟಗಳು ಸಂಭವಿಸಿವೆ. ಪ್ರತಿಯೊಬ್ಬರಲ್ಲೂ ಇದರ ಬಗ್ಗೆ ಆತಂಕವಿದೆ. ಇನ್ನು ಕೆಲಸದ ಬಗ್ಗೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ಆರೋಗ್ಯದ ಬಗ್ಗೆ ಹೀಗೆ ನಾನಾ ಆತಂಕಗಳಿವೆ. ಇವುಗಳಿಂದ ಮಾನಸಿಕ ಒತ್ತಡ ಹೆಚ್ಚುವುದು. ಮಾನಸಿಕ ಒತ್ತಡ ಉಂಟಾದಾಗ ಋತುಚಕ್ರದಲ್ಲಿ ವ್ಯತ್ಯಾಸ ಉಂಟಾಗುವುದು.
ಗರ್ಭಧಾರಣೆಗೆ ಪ್ರಯತ್ನಿಸುವವರು ಹಾಗೂ ಎದೆ ಹಾಲುಣಿಸುವ ತಾಯಂದಿರುವ ಲಸಿಕೆ ಪಡೆಯಬಹುದು : ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಲಸಿಕೆ ಪಡೆಯುವುದರಿಂದ ಮುಂದೆ ಹೆಚ್ಚಿನ ಸುರಕ್ಷತೆ ಸಿಗುವುದು. ಇನ್ನು ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರುವ ತಾವು ಇಚ್ಛೆ ಪಟ್ಟರೆ ಲಸಿಕೆ ಪಡೆಯಬಹುದಾಗಿದೆ.
ಲಸಿಕೆ ಬಗ್ಗೆ ಹಿಂದೇಟು ಬೇಡ: ಈ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಪ್ರತಿಯೊಬ್ಬರು ಲಸಿಕೆ ಪಡೆಯಬೇಕಾಗಿದೆ, ಇದರಿಂದ ಕೋವಿಡ್ 19ನಿಂದ ಸಾವು ಸಂಭವಿಸುವುದನ್ನು ತಡೆಯಬಹುದು. ನಿಮ್ಮಲ್ಲಿ ಏನಾದರೂ ಸಂದೇಹವಿದ್ದರೆ ಸೂಕ್ತ ತಜ್ಞರ ಮಾಹಿತಿ ಪಡೆಯಿರಿ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಮಾಹಿತಿಗಳನ್ನು ನೋಡಿ ಭಯ ಪಡಬೇಡಿ. ಲಸಿಕೆ ತೆಗೆಯಲು ಹಿಂದೇಟು ಹಾಕಿದರೆ ಅದರಿಂದ ನಿಮಗನೇ ಅಪಾಯ ಹೆಚ್ಚಾಗುವುದು. ಆದ್ದರಿಂದ ಎರಡು ಡೋಸ್ ಲಸಿಕೆ ಪಡೆದು ಕೋವಿಡ್ 19ನಿಂದ ನಿಮ್ಮನ್ನು, ನಿಮ್ಮವರನ್ನು ರಕ್ಷಿಸಿ.