ನವದೆಹಲಿ: ಜಮ್ಮು-ಕಾಶ್ಮೀರದ ನಾಯಕರೊಂದಿಗೆ ಜೂ.24 ರಂದು ಸಭೆ ನಡೆಸಿದ ಬಳಿಕ ಈಗ ಕೇಂದ್ರ ಸರ್ಕಾರ ಲಡಾಖ್ ಮತ್ತು ಕಾರ್ಗಿಲ್ ಗಳ ನಾಯಕರೊಂದಿಗೆ ಜುಲೈ 1 ರಂದು ಸಭೆ ನಡೆಸಲು ಮುಂದಾಗಿದೆ.
ಮಾಜಿ ಸಂಸದರು ಹಾಗೂ ಸಿವಿಲ್ ಸೊಸೈಟಿಯ ಸದಸ್ಯರನ್ನು ಮಾತುಕತೆಯ ಸಭೆಗೆ ಆಹ್ವಾನಿಸಲಾಗಿದ್ದು, ಜುಲೈ.1 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಜಮ್ಮು-ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ 14 ರಾಜಕೀಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಮೂರುವರೆ ಗಂಟೆಗಳ ಕಾಲ ಸಭೆ ನಡೆಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ಡೀಲಿಮಿಟೇಷನ್, ಯಶಸ್ವಿ ಚುನಾವಣೆಗಳು ಹಾಗೂ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಪುನರ್ಸ್ಥಾಪನೆ ಮುಂತಾದ ವಿಷಯಗಳು ಚರ್ಚೆಯಾಗಿದ್ದವು.