ಭಾರತದ ಮೂಲದ ಹಣಕಾಸು ಸಂಸ್ಥೆಗಳು, ಶಾಖೆಗಳು ಸೇರಿದಂತೆ ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣವು 2020ರಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್ (20,700 ಕೋಟಿ ರೂ.ಗಳಿಗಿಂತಲೂ ಹೆಚ್ಚು) ಏರಿದೆ.
ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ವಿಸ್ ಬ್ಯಾಂಕ್‌ಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ಇಡಲಾಗಿದೆ. ಆದರೆ ನೇರವಾಗಿ ಠೇವಣಿ ರೂಪದಲ್ಲಿ ಇರಿಸಿದ ಮೊತ್ತವು ಇಳಿಕೆಯಾಗಿದೆ.
ಇದು 13 ವರ್ಷಗಳಲ್ಲಿ ಇಡಲಾದ ಅತಿಹೆಚ್ಚಿನ ಮೊತ್ತವಾಗಿದ್ದು, ಸ್ವಿಸ್ ಬ್ಯಾಂಕ್‌ಗಳು ಈ ಕುರಿತಾಗಿ ಅಧಿಕೃತವಾಗಿ ಸ್ವಿಸ್ ನ್ಯಾಷನಲ್ ಬ್ಯಾಂಕ್‌ಗೆ ಮಾಹಿತಿಯನ್ನ ನೀಡಿವೆ. ಈ ಮೂಲಕ ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 'ಕಪ್ಪು ಹಣ'ವೆಂಬ ವಾದ ಮುಂದುವರಿದಿದ್ದು, ಇದನ್ನ ಅಲ್ಲಿನ ಅಧಿಕಾರಿಗಳು ಹಿಂದಿನಿಂದಲೂ ಒಪ್ಪಿಕೊಳ್ಳಲು ತಯಾರಿಲ್ಲ.
ಇದು 2006 ರಲ್ಲಿ ಸುಮಾರು 6.5 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳ ದಾಖಲೆಯ ಗರಿಷ್ಠ ಮಟ್ಟದಲ್ಲಿತ್ತು, ನಂತರ ಇದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ದತ್ತಾಂಶದ ಪ್ರಕಾರ 2011, 2013 ಮತ್ತು 2017 ಸೇರಿದಂತೆ ಕೆಲವು ವರ್ಷಗಳನ್ನು ಹೊರತುಪಡಿಸಿ ಹೆಚ್ಚಾಗಿ ಕೆಳಮುಖವಾಗಿದೆ.