ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು 2021-22ನೇ ವರ್ಷದ ಜನಪರ ಯೋಜನೆಯಡಿ ಕಂಗು ಕೃಷಿಗೆ ಮೈಲುತುತ್ತು ಮತ್ತು ಸುಣ್ಣ ವಿತರಣೆ, ಬಂಜರು ಭೂಮಿಯಲ್ಲಿ ಭತ್ತದ ಕೃಷಿಗೆ ಪ್ರೋತ್ಸಾಹ ಧನ ಸಹಾಯ ಮತ್ತು ಭತ್ತದ ಕೃಷಿಗೆ ದಿನಗೂಲಿ ಭತ್ತೆ ಎಂಬೀ ಯೋಜನೆಗಳಿಗೆ ಅರ್ಹರಾದ ಕೃಷಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೃಷಿಕರು 2021-22ನೇ ವರ್ಷದ ತೀರ್ವೆ ರಶೀದಿ,ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಪುಸ್ತಕ ನಕಲುಗಳೊಂದಿಗೆ ಜೂನ್ 28ರಿಂದ ಅರ್ಜಿಯನ್ನು ಕೃಷಿ ಭವನದಲ್ಲಿ ಸಲ್ಲಿಸಬಹುದಾಗಿದೆ. ಮೈಲುತ್ತುತ್ತು ವಿತರಣೆಯು ಜೂನ್ 28ರಿಂದಲೇ ಆರಂಭಿಸಲಾಗುತ್ತಿದ್ದು ಜೂನ್ 28ರಿಂದ ಜುಲೈ 9ರ ತನಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಕೃಷಿಕರು ಮೂರು ವಿಭಾಗಕ್ಕೆ ಅರ್ಜಿ ಅಪೇಕ್ಷಿಸುವುದಿದ್ದರೆ ಪ್ರತ್ಯೇಕ ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಫಾರಂಗಳು ಗ್ರಾಮ ಪಂಚಾಯತು ಕಚೇರಿಯಲ್ಲಿ ಲಭಿಸುತ್ತದೆ ಎಮದು ಪ್ರಕಟಣೆಯಲ್ಲಿ ತಿಳಿಸಲಾಗಗಿದೆ.