ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನ ಪಂಚಾಂಗದ ನಾಲ್ಕನೇ ಮಾಸವೇ ಆಷಾಢ. ದಕ್ಷಿಣಾಯಣದ ಪರ್ವ ಕಾಲದಲ್ಲಿ ಜ್ಯೇಷ್ಠ ಮಾಸದ ಅಮವಾಸ್ಯೆಯ ಮರುದಿನ ಪಾಡ್ಯ ತಿಥಿಯಿಂದ ಆಷಾಢ ಮಾಸ ಆರಂಭವಾಗುವುದು.
ಈ ವರ್ಷ ಆಷಾಢ ಮಾಸ ಜೂನ್ 25ರಿಂದ ಪ್ರಾರಂಭ ಜುಲೈ 24ರವರೆಗೆ ಇರುತ್ತದೆ.ಆಷಾಢ ಮಾಸ:
ಆಷಾಢ ಮಾಸದ ಬಗ್ಗೆ ಹಲವಾರು ನಂಬಿಕೆಗಳಿವೆ. ಕೆಲವರು ಈ ಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎನ್ನುತ್ತಾರೆ. ಆದ್ದರಿಂದಲೇ ಮದುವೆಯಂಥ ಶುಭ ಕಾರ್ಯವನ್ನು ಈ ತಿಂಗಳಿನಲ್ಲಿ ಮಾಡುವುದಿಲ್ಲ. ಅಲ್ಲದೆ ಹೊಸದಾಗಿ ಮದುವೆಯಾದ ಜೋಡಿ ಈ ತಿಂಗಳಿನಲ್ಲಿ ಜೊತೆಗೆ ಇರಬಾರದು ಎಂದು ಕೆಲವರು ಅಂದ್ರೆ ಇನ್ನು ಕೆಲವರು ಅತ್ತೆ-ಸೊಸೆ ಈ ತಿಂಗಳಿನಲ್ಲಿ ಒಂದೇ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾರೆ. ಇನ್ನು ಆಷಾಢ ತಿಂಗಳಿನಲ್ಲಿ ದೇವತೆಗಳು ಯೋಗ ನಿದ್ರೆಯಲ್ಲಿರುತ್ತಾರೆ, ಆದ್ದರಿಂದ ಮಂಗಳಕಾರ್ಯಕ್ಕೆ ಯೋಗ್ಯವಾದ ತಿಂಗಳಲ್ಲ ಎಂದು ಕೂಡ ಹೇಳುತ್ತಾರೆ. ಹೀಗೆ ಆಷಾಢ ಮಾಸದ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ನಂಬಿಕೆಗಳಿವೆ. ಹಾಗಂತ ಆಷಾಢ ಎಂದರೆ ಆ ತಿಂಗಳಿನಲ್ಲಿ ಏನೂ ವಿಶೇಷ ದಿನವಿಲ್ಲ ಎಂದಲ್ಲ, ಈ ತಿಂಗಳಲ್ಲಿ ಹಲವಾರು ವಿಶೇಷಗಳಿವೆ.
ಆಷಾಢ ಮಾಸದ ವಿಶೇಷ ದಿನಗಳು ಜೂನ್ 25: ಆಷಾಢ ಪ್ರಾರಂಭ ಜೂನ್ 27: ಗಣೇಶ ಚತುರ್ಥಿ: ಜುಲೈ 2 : ಶೀತಾಲಷ್ಟಮಿ ಜುಲೈ 5: ಯೋಗಿನಿ ಏಕಾದಶಿ
ಆಷಾಢ ಮಾಸದ ವಿಶೇಷ ದಿನಗಳು ಜುಲೈ 7: ಪ್ರದೋಷ ವ್ರತ ಜುಲೈ 8: ಮಾಸಿಕ ಶಿವರಾತ್ರಿ ಜುಲೈ 9: ಹುಣ್ಣಿಮೆ ಜುಲೈ 11: ಗೂಢ ನವರಾತ್ರಿ ಪ್ರಾರಂಭ ಜುಲೈ 12: ಜಗ್ನಾಥ ರಥ ಯಾತ್ರೆ ಪ್ರಾರಂಭ