ಚೆನ್ನೈ: ವಿಶ್ವಕಪ್ ಕ್ರಿಕೆಟ್ ನಲ್ಲಿ ಹೆಚ್ಚಿನ ತಂಡಗಳಿಗೆ ಅವಕಾಶ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2027 ಮತ್ತು 2031ರ ಪುರುಷರ ವಿಶ್ವಕಪ್ 14 ತಂಡಗಳ ಟೂರ್ನಿ ಆಗಲಿದೆ ಎಂದು ಹೇಳಿದೆ.
2024ರಿಂದ 2031ರವರೆಗಿನ ಜಾಗತಿಕ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿರುವ ಐಸಿಸಿ 2027 ಮತ್ತು 2031ರ ಏಕದಿನ ವಿಶ್ವಕಪ್ ನಲ್ಲಿ ಹೆಚ್ಚಿನ ತಂಡಗಳು ಆಡಲಿವೆ ಎಂದು ಪ್ರಕಟಿಸಿದೆ. ಇನ್ನು 2024, 2026, 2028 ಮತ್ತು 2030ರಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಅಲ್ಲದೆ 2025 ಮತ್ತು 2029ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಆಡಲಿವೆ ಎಂದು ಐಸಿಸಿ ತಿಳಿಸಿದೆ.
2019ರಲ್ಲಿ ನಡೆಸಿದ್ದ ವಿಶ್ವಕಪ್ ನಲ್ಲಿ 10 ತಂಡಗಳು ಸ್ಪರ್ಧಿಸಿದ್ದು ಇಂಗ್ಲೆಂಡ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಟಿ20 ವಿಶ್ವಕಪ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಗೆ ಜೂನ್ 28ರವರೆಗೆ ಗಡುವು
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಡೆಯುವ ಸ್ಥಳಕ್ಕೆ ಸಂಬಂಧಿಸಿದಂತೆ, ಸ್ಥಳವನ್ನು ನಿರ್ಧರಿಸಲು ಐಸಿಸಿ ಜೂನ್ 28ರವರೆಗೆ ಬಿಸಿಸಿಐಗೆ ಗಡುವು ನೀಡಿದೆ. ಒಂದು ವೇಳೆ, ಬಿಸಿಸಿಐಗೆ ಭಾರತದಲ್ಲಿ ಈವೆಂಟ್ ಅನ್ನು ಆಯೋಜಿಸಲು ಸಾಧ್ಯವಾಗದಿದ್ದರೆ, ಯುಎಇ ಅದನ್ನು ಆಯೋಜಿಸುತ್ತದೆ.