ತಿರುವನಂತಪುರ: ಕೊರೋನದ ಎರಡನೇ ಅಲೆಯಲ್ಲಿ ಕೇರಳ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಯುವ ಜನತೆ ಬಾಧಿತರಾದರೆಂಬ ಮಾಹಿತಿ ಇದೀಗ ಹೊರಬಿದ್ದಿದೆ. ರಾಜ್ಯದಲ್ಲಿ 21 ರಿಂದ 30 ವರ್ಷದೊಳಗಿನವರಲ್ಲಿ ಈ ಬಾರಿ ಅತಿ ಹೆಚ್ಚು ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿಧಾನಸಭೆಗೆ ನಿನ್ನೆ ತಿಳಿಸಿದರು. ಶಾಸಕ ಐ.ಬಿ ಸತೀಶ್ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸುತ್ತಿದ್ದರು.
ಕೊರೋನಾ ರಾಜ್ಯದಲ್ಲಿ 21 ರಿಂದ 31 ವರ್ಷದೊಳಗಿನ 2,61,232 ಮಂದಿ ಜನರಿಗೆ ಬಾಧಿಸಲ್ಪಟ್ಟಿದೆ. ಇದಲ್ಲದೆ, 31 ರಿಂದ 40 ವರ್ಷದೊಳಗಿನ 2,52,935 ಮಂದಿ ಜನರಿಗೆ ಕೋವಿಡ್ ಪತ್ತೆಯಾಗಿದೆ. ರಾಜ್ಯದ ಒಟ್ಟು ಪ್ರಕರಣಗಳಲ್ಲಿ 2,33,126 ಪ್ರಕರಣಗಳು 41 ರಿಂದ 50 ವರ್ಷದೊಳಗಿನವು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹೆಚ್ಚಿನ ಸಾವುಗಳು 81 ರಿಂದ 90 ವರ್ಷದೊಳಗಿನವರಾಗಿದ್ದಾರೆ. ಈ ವಯಸ್ಸಿನ ಒಟ್ಟು 17,105 ಮಂದಿ ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಈ ಪೈಕಿ 502 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಪ್ರಮಾಣ ಶೇಕಡಾ 2.93 ರಷ್ಟಿದೆ ಎಂದು ಅವರು ಹೇಳಿದರು.