ನವದೆಹಲಿ: ಜೂನ್ 21 ರಂದು ಒಂದೇ ದಿನದಲ್ಲಿ ಭಾರತವು 88.09 ಲಕ್ಷ ಮಂದಿಗೆ ಕೊರೋನಾವೈರಸ್ ಲಸಿಕೆ ನೀಡಿ "ಐತಿಹಾಸಿಕ ಮೈಲಿಗಲ್ಲು" ಸಾಧಿಸಿದಂತೆ, ಸುಮಾರು 64 ಶೇಕಡಾ ಡೋಸ್ ಗಳನ್ನು ಗ್ರಾಮೀಣ ಭಾಗಗಳಲ್ಲಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಮಧ್ಯಪ್ರದೇಶವು ಜೂನ್ 21 ರಂದು ಗರಿಷ್ಠ ಪ್ರಮಾಣದಲ್ಲಿ ಡೋಸ್ ನೀಡಿದೆ, ನಂತರ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಗುಜರಾತ್, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ ಮತ್ತು ಅಸ್ಸಾಂ. ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಡೋಸ್ ನೀಡಲಾಗಿದೆ. ಅಲ್ಲದೆ, ಶೇಕಡಾ 92.20 ರಷ್ಟು ಲಸಿಕೆಗಳು ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ನಡೆದರೆ, ಶೇ 7.80 ರಷ್ಟು ಖಾಸಗಿ ಲಸಿಕೆ ಕೇಂದ್ರದಲ್ಲಾಗಿದೆ.
"ನೀಡಲಾದ ಒಟ್ಟು ಲಸಿಕೆ ಪ್ರಮಾಣಗಳಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ಮಹಿಳೆಯರು 46.35 ಶೇಕಡಾ, ಪುರುಷರು 53.63 ಮತ್ತು ಇತರರು 0.02 ಪ್ರಮಾಣದಲ್ಲಿದ್ದಾರೆ. 36.32 ರಷ್ಟು ನಗರ ಪ್ರದೇಶಗಳಲ್ಲಿ ಮತ್ತು 63.68 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ನೀಡಲಾಗಿದೆ. ಲಸಿಕೆಯ ಗ್ರಾಮೀಣ ವ್ಯಾಪ್ತಿಯು ಗಮನಾರ್ಹವಾಗಿದೆ ಮತ್ತು ಉತ್ತಮ ಪ್ರಮಾಣದಲ್ಲಿದೆ ಎಂದು ಎನ್‌ಐಟಿಐ ಆಯೋಗ್ ಸದಸ್ಯ (ಆರೋಗ್ಯ) ವಿ ಕೆ ಪಾಲ್ ಹೇಳಿದರು.
ಒಂದೇ ದಿನದ ದಾಖಲೆಯ ಲಸಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಭೂಷಣ್, "ನಿನ್ನೆ ಏನಾಯಿತು ಅದು ಒಬ್ಬರಿಂದ ಆದದ್ದಲ್ಲ. ಇದು ಸಂಘಟಿತ ಯೋಜನೆಯ ಫಲವಾಗಿದೆ, ಇದರಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಸಹಭಾಗಿತ್ವ ಶ್ರಮವಹಿಸಿವೆ ಮತ್ತು ಇಂದು ಏನಾಗುತ್ತದೆ ಆ ಯೋಜನೆಯ ಭಾಗವಾಗಿದೆ ಮತ್ತು ಜೂನ್ ಉಳಿದ ಎಂಟು ದಿನಗಳಲ್ಲಿ ಏನಾಗಬಹುದು ಎಂಬುದು ಆ ಸಹಕಾರದ ಭಾಗವಾಗಿದೆ."
ಜೂನ್ 1 ರಿಂದ 21 ರವರೆಗೆ ದಿನಕ್ಕೆ ಸರಾಸರಿ 34,62,841 ಲಸಿಕೆ ವಿತರಿಸಲಾಗಿದೆ. ಜೂನ್ 21 ರಂದು ದಾಖಲೆಯ ಲಸಿಕೆ ಹೊಸ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ದಿನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಜನರ ನಡುವೆ " , ಸುಸಂಘಟಿತ, ಒಮ್ಮುಖವಾದ ತೀರ್ಮಾನದ " ಮೂಲಕ ಸಾಧ್ಯವಾಯಿತು ಎಂದು ಪಾಲ್ ಹೇಳಿದರು.
"ಇದು ಭಾರತದ ದೈನಂದಿನ ಲಸಿಕೆ ಸಾಮರ್ಥ್ಯವನ್ನು ತೋರಿಸಿದೆ. ಒಮ್ಮೆ ಖಾಸಗಿ ವಲಯವು ಸಂಪೂರ್ಣವಾಗಿ ಸೇರಿಕೊಂಡಾಗ ಈ ಸಾಮರ್ಥ್ಯವು ಇನ್ನಷ್ಟು ಹೆಚ್ಚಳವಾಗಲಿದೆ. " ದೇಶದ ಒಟ್ಟಾರೆ ಸಾಂಕ್ರಾಮಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಪಾಲ್, ಸ್ಥಿರವಾದ ಸುಧಾರಣೆಯಾಗಿದೆ ಆದರೆ ಜನರು ಕೋವಿಡ್- ಪ್ರೋಟೋಕಾಲ್ ಅನುಸರಿಸಬೇಕು ಮತ್ತು ಜನಸಂದಣಿ ಮತ್ತು ಪಾರ್ಟಿಗಳನ್ನು ತಪ್ಪಿಸಬೇಕು ಎಂದು ಒತ್ತಿ ಹೇಳಿದರು.