ಕಾಸರಗೋಡು: ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟು ಕಾಸರಗೋಡು ಜಿಲ್ಲೆಯಲ್ಲಿ ಅನೇಕ ಇಲಾಖೆಗಳ ಅಧಿಕಾರಿಗಳು ವಶಪಡಿಸಿದ ಮತ್ತು ಅನಾಥ ಸ್ಥಿತಿಯಲ್ಲಿ ಪತ್ತೆಯಾದ ವಾಹನಗಳ ಹರಾಜಿಗೆ ಸಾರ್ವಜನಿಕ ಸ್ಪಂದನ ಉತ್ತಮವಾಗಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಒಟ್ಟಾಗಿ ಇರಿಸಲಾದ ಇಂಥಾ ವಾಹನಗಳ ತೆರವಿಗಾಗಿ ಕಳೆದ 2 ವರ್ಷಗಳಿಂದ ನಡೆಸಲಾಗುತ್ತಿರುವ ಇ-ಹರಾಜು ಪ್ರಕ್ರಿಯೆ ಮೂಲಕ ಈ ವರೆಗೆ 227 ವಾಹನಗಳ ಹಸ್ತಾಂತರ ನಡೆದಿದೆ. ಕಂದಾಯ ಇಲಾಖೆಯಿಂದ 205 ವಾಹನಗಳು, ಪೆÇಲೀಸ್ ಠಾಣೆ ಆವರಣಗಳಿಲ್ಲದ್ದ 22 ವಾಹನಗಳು ಹರಾಜುಗೊಂಡಿವೆ. ವಿವಿಧ ಕೇಸುಗಳಿಗೆ ಸಂಬಂಧಿಸಿ ಪೆÇಲೀಸರು ವಶಪಡಿಸಿರುವ 342 ವಾಹನಗಳು, ಅಕ್ರಮ ಮರಳು ಸಾಗಾಟ ಪ್ರಕರಣಗಳಿಗೆ ಸಂಬಂಧಿಸಿದ 136 ವಾಹನಗಳ ಸಹಿತ 478 ವಾಹನಗಳ ಇ-ಹರಾಜು ನಡೆಸಲು ತುರ್ತು ಕ್ರಮಗಳು ನಡೆಯುತ್ತಿವೆ. ವ್ಯಕ್ತಿಗಳು, ಸಂಸ್ಥೆಗಳು ಇ-ಹರಾಜಿನಲ್ಲಿ ಭಾಗವಹಿಸಿ ವಾಹನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ವಾಹನಗಳ ಮಾಲೀಕರೂ ಹರಾಜಿನಲ್ಲಿ ಭಾಗಿಗಳಾಗುತ್ತಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಒಟ್ಟಾಗಿ ನಿಲ್ಲಿಸಲಾಗಿದ್ದ ವಾಹನಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಇ-ಹರಾಜು ನಡೆಸಿದ ಜಿಲ್ಲೆ ಕಾಸರಗೋಡು ಆಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಅಶಯದಲ್ಲಿ ಈ ಹರಾಜು ಕ್ರಮ ಜಾರಿಗೆ ಬಂದಿದೆ. ಪಿಡುಗು ನಿವಾರಣೆ ಕಾಯಿದೆಯಡಿ ಸೂಕ್ತ ಯೋಜನೆಗಳೊಂದಿಗೆ ಇಲ್ಲಿ ಹರಾಜು ನಡೆಯುತ್ತಿದೆ. ಇತರ ಜಿಲ್ಲೆಗಳಲ್ಲಿ ಹರಾಜು ಆರಂಭಗೊಳ್ಳುವ ಅವಧಿಯ ಮುನ್ನವೇ ಇಷ್ಟು ದೊಡ್ಡ ಪ್ರಮಾಣದಲ್ಲಿ ವಾಹನಗಳು ಇಲ್ಲಿನ ಸಾರ್ವಜನಿಕ ಪ್ರದೇಶಗಳಿಂದ ತೆರವಾಗುತ್ತಿವೆ.
2019 ರಲ್ಲಿ ಕಾಸರಗೋಡು ಜಿಲ್ಲೆಯ ಪೋಲೀಸ್ ಠಾಣೆಗಳ ಆವರಣಗಳಲ್ಲಿ ಒಟ್ಟಾಗಿ ನಿಲುಗಡೆ ಮಾಡಲಾಗಿದ್ದ ವಾಹನಗಳ ಹರಾಜಿಗೆ ಕ್ರಮ ಆರಂಭಿಸಲಾಗಿತ್ತು. ಕಳೆದ ವರ್ಷ ಅಕ್ರಮ ಮರಳು ಸಾಗಣೆ ಸಂಬಂಧ ಸರಕಾರದ ವಶಕ್ಕೆ ನಿಡಲಾಗಿದ್ದ 213 ವಾಹನಗಳನ್ನು ಹರಾಜಿಗೆ ಇರಿಸಲಾಗಿತ್ತು. ಇದರಲ್ಲಿ 2020 ಮಾರ್ಚ್ ತಿಂಗಳ ಹರಾಜಿನಲ್ಲಿ 55 ವಾಹನಗಳು 2033676 ರೂ.ಗೆ ಮಾರಾಟಗೊಂಡಿವೆ. 2020 ಅಕ್ಟೋಬರ್ ತಿಂಗಳ ಹರಾಜಿನಲ್ಲಿ 150 ವಾಹನಗಳು 6036684 ರೂ.ಗೆ ಮಾರಾಟವಾಗಿವೆ. ಮಂಜೇಶ್ವರ, ಮಂಗಳೂರು, ಪಾಲಕ್ಕಾಡು, ಈರಾಟುಪೇಟೆ, ಕೊಯಮತ್ತೂರು ಪ್ರದೇಶಗಳ ಸಂಸ್ಥೆಗಳು, ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಿದ್ದರು.
ವಿವಿಧ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿ ಪೆÇಲೀಸರು ವಶಪಡಿಸಿದ್ದ 369 ವಾಹನಗಳನ್ನು ಕಳೆದ ವರ್ಷ ಎಂ.ಎಸ್.ಟಿ.ಸಿ. ಲಿಮಿಟೆಡ್ ನ ಮುಖಾಂತರ ಇ-ಹರಾಜು ಮೂಲಕ ಆನ್ ಲೈನ್ ಆಗಿ ಮಾರಾಟ ನಡೆಸಲಾಗಿತ್ತು. ಇವುಗಳಲ್ಲಿ 22 ವಾಹನಗಳು ಮಾರಾಟಗೊಂಡಿದ್ದುವು. 5 ವಾಹನಗಳನ್ನು ಹುಡುಕಲಿ ಮಾಲೀಕರು ಆಗಮಿಸಿ, ಪಡೆದುಕೊಂಡಿದ್ದಾರೆ. ಉಳಿದ 342 ವಾಹನಗಳ ಮರು ಇ-ಹರಾಜು ನಡೆಸಲಾಗುವುದು. ಇದಲ್ಲದೆ ಮರಳು, ಕರ್ಗಲ್ಲು ಅಕ್ರಮ ಸಾಗಣೆ ಸಹಿತ ಪ್ರಕರಣಗಳಿಗೆ ಸಂಬಂಧಿಸಿ ಸರಕಾರದ ವಶಕ್ಕೆ ನೀಡಲಾದ 136 ವಾಹನಗಳ ಇ-ಹರಾಜು ನಡೆಸಲಾಗುವುದು.
ಅನಾಥ ಸ್ಥಿತಿಯಲ್ಲಿ ಪತ್ತೆಯಾದ ಇತ್ಯಾದಿ ಪ್ರಕರಣಗಳಲ್ಲಿ ಕಂಡುಬಂದ ವಾಹನಗಳನ್ನು, ಅಪಘಾತಕ್ಕೀಡಾದ ವಾಹನಗಳು, ಅಪರಾಧ ಪ್ರಕರಣಗಳಲ್ಲಿ ಬಳಸಲಾದ ವಾಹನಗಳು, ಅಬಕಾರಿ, ಮೋಟಾರುವಾಹನ ಇಲಾಖೆಗಳು ವಶಪಡಿಸಿರುವ ವಾಹನಗಳು, ಇತರ ಕಾನೂನು ಭಂಗ ಪ್ರಕರಣಗಳಿಗೆ ಸಂಬಂಧಿಸಿದ ವಾಹನಗಳು ಇತ್ಯಾದಿ ವಾಹನಗಳು ಸಾರ್ವಜನಿಕ ಪ್ರದೇಶಗಳಲ್ಲಿ ಒಟ್ಟಾಗಿ ಇರಿಸಲಾಗಿವೆ. ದ್ವಿಚಕ್ರ, ತ್ರಿಚಕ್ರ, 4 ಚಕ್ರ ಸಹಿತ ವಾಹನಗಳು ಈ ಸಾಲಿನಲ್ಲಿವೆ.