ದುಬೈ: ಭಾರತದಿಂದ ಪ್ರಯಾಣ ಮಾಡುವವರಿಗೆ ನಿರ್ಬಂಧವನ್ನು ದುಬೈ ಸಡಿಲಿಸುತ್ತಿದ್ದಂತೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸಂಚಾರವನ್ನು ನಾಡಿದ್ದು ಜೂನ್ 23ರಿಂದ ಆರಂಭಿಸಲಾಗುವುದು ಎಂದು ಎಮಿರೇಟ್ಸ್ ಏರ್ ಲೈನ್ಸ್ ಹೇಳಿದೆ.
ದುಬೈಯ ಕೇಂದ್ರ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣ ಸಮಿತಿ ಪ್ರಕಟಿಸಿರುವ ಇತ್ತೀಚಿನ ಕೊರೋನಾ ನಿರ್ಬಂಧ ಮತ್ತು ಕ್ರಮಗಳನ್ನು ಎಮಿರೇಟ್ಸ್ ಏರ್ ಲೈನ್ಸ್ ಸ್ವಾಗತಿಸುತ್ತದೆ. ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.
ಭಾರತದಿಂದ ಬರುವ ಪ್ರಯಾಣಿಕರು ಮೌಲ್ಯಯುತ ವಾಸ ವೀಸಾವನ್ನು ಹೊಂದಿದ್ದು ಯುಎಇ ಅನುಮೋದಿತ ಎರಡು ಡೋಸ್ ಲಸಿಕೆಯನ್ನು ಪಡೆದವರು ದುಬೈಗೆ ಆಗಮಿಸಬಹುದು ಎಂದು ದುಬೈಯ ವಿಪತ್ತು ಮತ್ತು ನಿರ್ವಹಣಾ ಬಿಕ್ಕಟ್ಟು ಸಮಿತಿ ತಿಳಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.