ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ನೀಡುವಲ್ಲಿ ಮಹತ್ವದ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನ ಕೊಡುಗೆ ಅನನ್ಯವಾದುದು.
ಈ (ಜೂ.6ರ) ವರೆಗೆ ಇಲ್ಲಿ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದವರು 2468 ಮಂದಿ. ಸದ್ರಿ 70 ಮಂದಿ ಕೋವಿಡ್ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಗೆ ಬಲುದೊಡ್ಡ ಕೊಡುಗೆಯಾಗಿ 2020 ಏ.6ರಂದು ಉಕ್ಕಿನಡ್ಕ ಸರಕಾರಿ ಮೆಡಿಕಲ್ ಕಾಲೇಜು ಕೋವಿಡ್ ಆಸ್ಪತ್ರೆಯಾಗಿ ಯುದ್ಧಕಾಲ ಹಿನ್ನೆಲೆಯಲ್ಲಿ ಚಟುವಟಿಕೆ ಆರಂಭಿಸಿತ್ತು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಮಂಜೂರು ಮಾಡಲಾದ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಿರುವ ಅಕಾಡೆಮಿಕ್ ಕಟ್ಟಡದಲ್ಲಿ ಕೋವಿಡ್ ವಿಭಾಗ ಕಾರ್ಯಪ್ರವೃತ್ತವಾಗಿದೆ. ಮೊದಲ ಹಂತದಲ್ಲಿ 164 ಬೆಡ್ ಗಳಿದ್ದುದು, ಈಗ 200 ಆಗಿದೆ. ಇವುಗಳಲ್ಲಿ ಎನ್.ಐ.ವಿ. ವೆಂಟಿಲೇಟರ್ ಗಳೂ, ಆಕ್ಸಿಜನ್ ಬೆಡ್ ಗಳೂ, ಐ.ಸಿ.ಯು. ಬೆಡ್ ಗಳೂ ಸಹಿತ ಸಸುಮಾರು 100 ಬೆಡ್ ಗಳು ಆಕ್ಸಿಜನ್ ಸಪೆÇೀರ್ಟ್ ನೀಡಿಕೆಗೆ ಸೌಲಭ್ಯ ಹೊಂದಿವೆ.
ಜೊತೆಗೆ ಮೆಡಿಕಲ್ ಕಾಲೇಜಿನಲ್ಲಿ ಕೇಂದ್ರ ಸರಕಾರ ಮಂಜೂರು ಮಾಡಿರುವ ಆಕ್ಸಿಜನ್ ಪ್ಲಾಂಟ್ ಒಂದು ತಿಂಗಳ ಅವಧಿಯಲ್ಲಿ ಸಜ್ಜುಗೊಳ್ಳುವ ನಿರೀಕ್ಷೆಯಿದೆ ಎಂದು ಡಿ.ಎಂ.ಒ. ರಾಮನ್ ಸ್ವಾತಿ ವಾಮನ್ ತಿಳಿಸಿದರು. ಒಂದು ನಿಮಿಷಕ್ಕೆ ಸರಾಸರಿ 1000 ಲೀ. ಆಕ್ಸಿಜನ್ ಉತ್ಪಾದಿಸುವ ಸಾಮಥ್ರ್ಯದ ಘಟಕ ಇದಾಗಿದೆ.
ಮೊದಲ ಹಂತದ ಕೋವಿಡ್ ಅಲೆಯಲ್ಲಿ ಚಿಕಿತ್ಸೆಯ ಕೊರತೆಯಿಂದ ಕಂಗೆಟ್ಟಿದ್ದ ಕಾಸರಗೋಡು ಜಿಲ್ಲೆಗೆ ಬಲುದೊಡ್ಡ ಸಾಂತ್ವನ ರೂಪದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜು ದೊಡ್ಡ ಕೊಡುಗೆಯಾಗಿತ್ತು. ಮೂರನೇ ಅಲೆಯಲ್ಲೂ ಪ್ರತಿರೋಧ ಚಟುವಟಿಕೆಗಳ ಮಟ್ಟಿಗೆ ಈ ಸಂಸ್ಥೆಯ ಕೊಡುಗೆ ಮಹತ್ತರವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶ ಪ್ರಕಾರ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಕೇವಲ 4 ದಿನಗಳಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಧುನಿಕ ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಇದು ಮಾರ್ಪಟ್ಟಿತ್ತು.
2018 ನವೆಂಬರ್ ತಿಂಗಳಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಲಾನ್ಯಾಸ ನಡೆಸಿದ್ದರು. 2020 ಏ.4ರಂದು ಉದ್ಘಾಟನೆ ನಡೆಸಲಾಗಿತ್ತು. 6 ರಂದು ಕೋವಿಡ್ ಚಿಕಿತ್ಸೆಯನ್ನೂ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ತಿರುವನಂತಪುರಂ ಮೆಡಿಕಲ್ ಕಾಲೇಜಿನ 27 ಮಂದಿಯ ಮೆಡಿಕಲ್ ಪರಿಣತರ ತಂಡ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಗೆ ನೇತೃತ್ವ ವಹಿಸಿತ್ತು. ಇಂದು ಎನ್.ಎಚ್.ಎಂ.ನ ನೇತೃತ್ವದಲ್ಲಿ 54 ಮಂದಿ ಸಿಬ್ಬಂದಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 86 ಮಂದಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಯೋಜನೆಗಳು ಪ್ರಗತಿಯಲ್ಲಿ :
ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿನಲ್ಲಿ ಅಳವಡಿಸಿ 29 ಕೋಟಿ ರೂ. ವೆಚ್ಚದಲ್ಲಿ 6600 ಚದರ ಅಡಿ ವಿಸ್ತೀರ್ಣದ ಮೂರು ಅಂತಸ್ತಿನ ಕಟ್ಟಡವಿರುವ ಹೆಣ್ಣುಮಕ್ಕಳ ಹಾಸ್ಟೆಲ್, 8 ಅಂತಸ್ತಿನ ಶಿಕ್ಷಕರ ಕ್ವಾರ್ಟರ್ಸ್ ಸಹಿತದ ಮೆಡಿಕಲ್ ಕಾಲೇಜಿನ ರೆಸಿಡೆನ್ಶಿಯಲ್ ಸಂಕೀರ್ಣ ಯೋಜನೆಯ ತಾಂತ್ರಿಕ ಮಂಜೂರಾತಿ ಕ್ರಮಗಳು ಪ್ರಗತಿಯಲ್ಲಿವೆ.
ಮೆಡಿಕಲ್ ಕಾಲೇಜಿಗೆ ಕಿಫ್ ಬಿ ಯಿಂದ 193 ಕೋಟಿ ರೂ. ಮೀಸಲಿರಿಸಿದ ಯೋಜನೆಯು ಕಿಫ್ ಬಿಯ ಅಂತಿಮ ಮಂಜೂರಾತಿಗಾಗಿ ಪರಿಶೀಲನೆಯಲ್ಲಿದೆ. ನಬಾರ್ಡ್ ನಿಂದ ಲಭಿಸಿದ 84 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆ ಬ್ಲೋಕ್ ನಿರ್ಮಾಣ ಅಂತಿಮಹಂತದಲ್ಲಿದೆ. ಮೆಡಿಕಲ್ ಕಾಲೇಜಿನ ಪ್ರಧಾನ ಹಾದಿ ಏಳ್ಕಾನ-ಉಕ್ಕಿನಡ್ಕ ರಸ್ತೆಯ ನಿರ್ಮಾಣಕೆ.ಡಿ.ಪಿ.ಯಿಂದ ಲಭಿಸಿದ 10 ಕೋಟಿ ರೂ.ನಲ್ಲಿ ಪೂರ್ಣಗೊಂಡಿದೆ. ಪಜ್ಜಾನಂ-ಮಲಂಕರ ರಸ್ತೆಯ ನಿರ್ಮಾಣ ಶೇ 70 ಪೂರ್ಣಗೊಂಡಿದೆ. ಕೆ.ಡಿ.ಪಿ.ಯಿಂದ 8 ಕೊಟಿ ರೂ. ಮೀಸಲಿರಿಸಿರುವ ಜಲವಿತರಣೆ ಯೋಜನೆಗೆ ವಕಿರ್ಂಗ್ ಆರ್ಡರ್ ನೀಡಲಾಗಿದೆ.
........