ಕಾಸರಗೋಡು :ಕಳೆದ ವರ್ಷ ಬ್ರಹ್ಮೈಕ್ಯರಾದ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಆರಾಧನಾ ಮಹೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆ ಯಶಸ್ವಿಗಾಗಿ ಊರ ಪರವೂರ ಭಕ್ತಾದಿಗಳ ಸಮಾಲೋಚನಾ ಸಭೆಯೊಂದು ಇತ್ತೀಚೆಗೆ ಎಡನೀರಿನಲ್ಲಿ ಜರಗಿತು.
ಸಮಿತಿಯ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ತಂತ್ರಿ ಪದ್ಮನಾಭ ತಂತ್ರಿ ಉಚ್ಚಿಲ, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಉದುಮ ಕ್ಷೇತ್ರದ ಮಾಜಿ ಶಾಸಕ ಕುಂಞಿ ರಾಮನ್, ಡಾಕ್ಟರ್ ಬಿ. ಎಸ್. ರಾವ್, ನ್ಯಾಯವಾದಿ ಐ ವಿ ಭಟ್, ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್, ಕಿಳಿಂಗಾರು ಗೋಪಾಲಕೃಷ್ಣ ಭಟ್ಟ, ಗೋಪಾಲಕೃಷ್ಣ ಅಡಿಗ, ಭಾಸ್ಕರ ಬಾರ್ಯ, ಸೀತಾರಾಮ ಕುಂಜತ್ತಾಯ, ಪಟ್ಲ ಸತೀಶ್ ಶೆಟ್ಟಿ, ಅಶೋಕ್ ಭಟ್ ಉಜಿರೆ, ಮಂಜುನಾಥ ಉಡುಪ, ಶ್ರೀಕರ ಭಟ್ ಮೊದಲಾದವರು ಶುಭಾಶಂಸನೆಗೈದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಮಪೂಜ್ಯ ಶ್ರೀಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ , ವೇಣುಗೋಪಾಲ ಮಾಸ್ಟರ್ ವಂದಿಸಿದರು. ಸೂರ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು .